Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಯುವತಿ ಮೇಲೆ 10 ದಿನ ನಿರಂತರ ಅತ್ಯಾಚಾರ

ಬೆಂಗಳೂರು, ನವೆಂಬರ್ 15 : ವೈಟ್ ಫೀಲ್ಡ್ ಪ್ರದೇಶದ ಲಾಡ್ಜ್ ವೊಂದರಲ್ಲಿ ಅಪ್ರಾಪ್ತ ಯುವತಿಯ ಮೇಲೆ ನಾಲ್ವರು ಹತ್ತು ದಿನ ನಿರಂತರ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಅಪಹರಿಸಿ, ಅತ್ಯಾಚಾರ ಕೃತ್ಯ ಎಸಗಿದ್ದಾರೆ.

ಆ ಯುವತಿಯನ್ನು ಪೊಲೀಸರು ರಕ್ಷಿಸಿದ್ದು, ಲಾಡ್ಜ್ ನ ಮಾಲೀಕ ಸೇರಿದಂತೆ ಮೂವರು ಅತ್ಯಾಚಾರ ಎಸಗಿರುವುದಾಗಿ ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ತನ್ನ ಜತೆಗೆ ಓದುತ್ತಿರುವವರನ್ನು ಆಕೆ ವೈಟ್ ಫೀಲ್ಡ್ ರೈಲು ನಿಲ್ದಾಣದಲ್ಲಿ ಭೇಟಿ ಮಾಡಿ, ಅಲ್ಲಿಂದ ಪಾರ್ಟಿಯೊಂದಕ್ಕೆ ಹೋಗಲು ತೆರಳಿದ್ದಾಳೆ.

Minor girl allegedly gang raped for 10 days at lodge in Bengaluru

ರಾತ್ರಿ ಎಂಟರ ಸುಮಾರಿಗೆ ಇಬ್ಬರು ಆರೋಪಿಗಳಾದ ಸಾಗರ್ ಮತ್ತು ರಾಘವೇಂದ್ರ ತಮ್ಮನ್ನು ಸಹಪಾಠಿಯ ಸ್ನೇಹಿತರು ಎಂದು ಪರಿಚಯಿಸಿಕೊಂಡಿದ್ದಾರೆ. ನಿನ್ನನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರಿಂದ ನಾವು ಬಂದಿದ್ದೇವೆ ಎಂದು ನಂಬಿಸಿದ್ದಾರೆ. ಆಕೆಯನ್ನು ಲಾಡ್ಜ್ ಗೆ ಕರೆದೊಯ್ದು, ಕೋಣೆಯಲ್ಲಿ ನಿನ್ನ ಸ್ನೇಹಿತರು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೋಣೆಯೊಳಗೆ ಯುವತಿ ಹೋದ ಕೆಲ ಹೊತ್ತಿನಲ್ಲೇ ಒಳಪ್ರವೇಶಿಸಿದ ಸಾಗರ್ ಅತ್ಯಾಚಾರ ಎಸಗಿದ್ದಾನೆ. ಆ ನಂತರ ರಾಘವೇಂದ್ರ ಮತ್ತು ಮನುರಾಜ್ ಅತ್ಯಾಚಾರ ಮಾಡಿದ್ದಾರೆ. ಆ ನಂತರ ಲಾಡ್ಜ್ ಮಾಲೀಕ ಮನೋರಂಜನ್ ಪಂಡಿತ್ ಎಂಬಾತನ ಮನವೊಲಿಸಿ, ಪೊಲೀಸರಿಗೆ ಕರೆ ಮಾಡದಂತೆ ನೋಡಿಕೊಂಡಿದ್ದಾರೆ. ಆತನೂ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆ ನಂತರ ನಾಲ್ವರೂ ಹಲವು ಸಲ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವತಿ ನಾಪತ್ತೆಯಾಗಿದ್ದಾಳೆ ಎಂದು ನಾಲ್ಕು ದಿನದ ನಂತರ ಪೋಷಕರು ದೂರು ನೀಡಿದ್ದಾರೆ. ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಯುವತಿಯ ಸಹಪಾಠಿಯ ಕೈವಾಡ ಇರುವ ಸಾಧ್ಯತೆ ಇದ್ದು, ಆ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+