ಬೆಂಗಳೂರು: ಎಚ್‌ಎಎಲ್‌ ಬಳಿ ನಿಗೂಢ ಸ್ಫೋಟ, ಕಂಪಿಸಿದ ಭೂಮಿ

ಬೆಂಗಳೂರು, ಜುಲೈ 03: ನಗರದ ಎಚ್‌ಎಎಲ್ ಕಚೇರಿ ಬಳಿ ಇಂದು ಸಂಜೆ ಸ್ಫೋಟವೊಂದು ಸಂಭವಿಸಿದ್ದು ಸುತ್ತಮುತ್ತಲ ಪ್ರದೇಶದಲ್ಲಿ ಲಘುವಾಗಿ ಭೂಮಿ ಕಂಪಿಸಿದೆ.

ಸ್ಪೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಎಚ್‌ಎಎಲ್ ಕಚೇರಿ ಬಳಿ ನಡೆಸಲಾಗುತ್ತಿದ್ದ ಕಟ್ಟಡ ಕಾಮಗಾರಿ ಬಳಿಯಲ್ಲಿ ಸ್ಫೋಟವಾಗಿದೆ ಎನ್ನಲಾಗಿದ್ದು. ಬಂಡೆ ಒಡೆಯಲು ಬಳಸುವ ಜಿಲೆಟಿಕ್ ಕಡ್ಡಿಗಳಿಂದಾಗಿ ಈ ಸ್ಫೋಟವಾಗಿದೆ ಎನ್ನಲಾಗಿದೆ.

Minor explosion outside HAL office Bengaluru

ಸ್ಪೋಟದ ಶಬ್ದ 500 ಮೀಟರ್‌ ಸುತ್ತಳತೆಯವರೆಗೂ ಕೇಳಿದ್ದು, ಆ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಎಚ್‌ಎಎಲ್ ತನ್ನ ಸಿಬ್ಬಂದಿಗಳಿಗಾಗಿ ಮನೆಗಳನ್ನು ನಿರ್ಮಿಸುತ್ತಿರುವ ಜಾಗದಿಂದಲೇ ಸ್ಫೋಟವಾಗಿರುವುದು ಖಚಿತವಾಗಿದೆ.

ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಆದರೆ ಸ್ಫೋಟದ ನಿಖರ ಕಾರಣ ತಿಳಿದುಬಂದಿಲ್ಲ. ಸ್ಫೋಟವು ಎಚ್‌ಎಎಲ್ ಕಚೇರಿ ಬಳಿಯೇ ಆಗಿರುವ ಕಾರಣ ಅನುಮಾನಗಳಿಗೂ ಎಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+