ಆಟೋರಿಕ್ಷಾ ಬಾಡಿಗೆ ದರ ಏರಿಕೆ ಸಾಧ್ಯತೆ, ಮೂಲ ದರ 30ರೂ ಆಗುತ್ತಾ?

ಬೆಂಗಳೂರು, ಜನವರಿ 5: ಆಟೋರಿಕ್ಷಾ ಬಾಡಿಗೆ ದರ ಏರಿಕೆಯಾಗುವ ಸಾಧ್ಯತೆ ಇದ್ದು ಮೂಲ ದರ 30 ರೂ ಆಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಈಗ 1.8 ಕಿ.ಮೀ ಗೆ 25 ರೂ ಬೇಸ್ ಪ್ರೈಸ್ ನೀಡಲಾಗುತ್ತಿದ್ದು ಇದು 30 ರೂ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಶೀಘ್ರ ಆಟೋ ಪ್ರಯಾಣ ದುಬಾರಿಯಾಗುವ ಸಾಧ್ಯತೆ ಗೋಚರಿಸುತ್ತಿದ್ದು, ಸಾರಿಗೆ ಇಲಾಖೆಯು ಆಟೋರಿಕ್ಷಾ ಶುಲ್ಕವನ್ನು ಪರಿಷ್ಕರಿಸಲಿದ್ದಾರೆ. ಇದೀಗ ಪ್ರತಿ 1.8 ಕಿ.ಮೀಗೆ 25 ರೂ ಬಳಿಕ ಪ್ರತಿ ಕಿ.ಮೀಗೆ 13 ರೂ ತೆಗೆದುಕೊಳ್ಳುತ್ತಿದ್ದರು. ಆಟೋ ಚಾಲಕರು ಆರ್‌ಟಿಎಗೆ ಮನವಿ ಮಾಡಿದ್ದು ಮೂಲ ದರ 25-30 ಹಾಗೂ ಪ್ರತಿ ಕಿ.ಮೀಗೆ 13-15 ರೂಗೆ ಹೆಚ್ಚಿಸಲು ಮನವಿ ಮಾಡಿದ್ದಾರೆ.

Minimum auto fare may go up to Rs 30 Soon

2013ರಿಂದ ಆಟೋ ಶುಲ್ಕವನ್ನು ಪರಿಷ್ಕರಣೆ ಮಾಡಿಲ್ಲ, ನಿರ್ವಹಣಾ ವೆಚ್ಚ ಎಲ್ಲವೂ ಹೆಚ್ಚಿದೆ ಹಾಗಾಗಿ ದರ ಏರಿಕೆ ಮಾಡಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬೆಂಗಳೂರಲ್ಲಿ ಪರವಾನಗಿ ಪಡೆದಿರುವ 1.25 ಆಟೋರಿಕ್ಷಾಗಳಿವೆ ಹಾಗೂ ಅನಧಿಕೃತ ಆಟೋಗಳ ಸಂಖ್ಯೆ ಸುಮಾರು 50 ಸಾವಿರದಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+