ಕೊರೊನಾ: ನಾಲ್ಕುವರೆ ಲಕ್ಷ ನರ್ಸ್‌ಗಳಿಗೆ ಆನ್‌ಲೈನ್ ತರಬೇತಿ
ಬೆಂಗಳೂರು, ಏಪ್ರಿಲ್ 7: ಕೊರೋನಾ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡುವ ಉದ್ದೇಶದಿಂದ ಬಿಬಿಎಂಪಿ ವಾರ್ ರೂಮ್ ಸ್ಥಾಪಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ವಾರ್ ರೂಂನಲ್ಲಿ ಬಿಬಿಎಂಪಿ ಸ್ಥಾಪಿಸಿರುವ ಡ್ಯಾಶ್‌ಬೋರ್ಡ್ ಗೆ ಅಧಿಕೃತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕೆ ಸುಧಾಕರ್ ಅವರು, ವಾರ್ ರೂಮ್‌ನಲ್ಲಿ ಸ್ಥಾಪಿಸಲಾಗಿರುವ ಡ್ಯಾಶ್ ಬೋರ್ಡ್‌ನಿಂದ ಕೋವಿಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕುಳಿತಲ್ಲೇ ತಿಳಿಯಬಹುದಾಗಿದೆ. ಎಲ್ಲ ಮುಂದುವರೆದ ರಾಷ್ಟ್ರಗಳು ಕೋವಿಡ್ ಮಾಹಿತಿ ಸಂಗ್ರಹಕ್ಕೆ ಇದೇ ವ್ಯವಸ್ಥೆಯನ್ನು ಅನುಸರಿಸಿವೆ ಎಂದರು.

ರಾಜ್ಯದಲ್ಲಿ ಇರುವ ನಾಲ್ಕುವರೆ ಲಕ್ಷ ನರ್ಸ್‌ಗಳಿಗೆ ಆನ್‌ಲೈನ್ ತರಬೇತಿ ನೀಡಲು ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿರುವ ವಾರ್‌ರೂಮ್ ಮೂಲಕವೇ ಇದನ್ನು ನಿಭಾಯಿಸಲಾಗುತ್ತದೆ. ರಾಜ್ಯದಲ್ಲಿ 175 ಜನರಿಗೆ ಸೋಂಕು ತಗುಲಿದೆ. ಸೋಂಕು ಹರಡುವುದನ್ನು ತಡೆಯುವುದೇ ನಮ್ಮ ಪ್ರಥಮ ಆದ್ಯತೆ ಇದೆ ಎಂದು ಹೇಳಿದರು.
ಈ ವೇಳೆ ಪಾಲಿಕೆ ಆಯುಕ್ತು ಬಿ.ಹೆಚ್.ಅನಿಲ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications