ಮೆಟ್ರೋ ನಿಲ್ದಾಣದಲ್ಲಿ ತಲೆಎತ್ತಲಿದೆ ರಿಟೇಲ್‌ ಅಂಗಡಿಗಳು

ಬೆಂಗಳೂರು, ಮೇ.21: ಇನ್ನು ಮುಂದೆ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮೆಟ್ರೋ ರೈಲು ನಿಲ್ದಾಣದ ಒಳ ಅವರಣದ ಖಾಲಿ ಜಾಗದಲ್ಲಿ ಮಿನಿ ರಿಟೇಲ್‌ ಅಂಗಡಿಗಳು ತಲೆಯೆತ್ತಲಿದೆ.

ಎಂಜಿ ರಸ್ತೆಯ ಮಾಣೆಕ್‌ ಷಾ ಪೆರೇಡ್‌ ಮೈದಾನದ ಬದಿ (ಬ್ಲಾಕ್‌ ಎ- 15,000 ಚದರ ಅಡಿ) ಮತ್ತು ನಿಲ್ದಾಣದ ಮತ್ತೊಂದು ಬದಿ (ಬ್ಲಾಕ್‌ ಬಿ- 10,000 ಚ.ಅಡಿ) ಎರಡೂ ಬದಿಗಳಲ್ಲಿ ಒಟ್ಟು 25,000 ಚದರ ಅಡಿ ವಿಸ್ತೀರ್ಣದಷ್ಟು ಖಾಲಿ ಜಾಗ ಲಭ್ಯವಿದ್ದು, ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ.[ನಮ್ಮ ಮೆಟ್ರೋ ಎಫೆಕ್ಟ್: ರಿಯಲ್ ಎಸ್ಟೇಟ್ ಗಗನಕ್ಕೆ]

M.G. Road Met

ಈ ಜಾಗದಲ್ಲಿ ಉಡುಗೊರೆ, ಆಭರಣ, ಪಾದರಕ್ಷೆ, ಉಡುಗೆ ತೊಡುಗೆ, ಪುಸ್ತಕ, ಆಹಾರ ಮತ್ತು ಪಾನೀಯ, ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಕ್ರೀಡಾ ಪರಿಕರಗಳು ಮೊದಲಾದ ರಿಟೇಲ್‌ ಮಳಿಗೆಗಳನ್ನು ತೆರೆಯಲು ಬಿಎಂಆರ್‌ಸಿಎಲ್‌ ಉದ್ದೇಶಿಸಿದೆ. ಈ ಸಂಬಂಧ ಮಳಿಗೆ ತರೆಯಲು ಬಿಎಂಆರ್‌ಸಿಎಲ್‌ ಆಸಕ್ತ ವ್ಯಕ್ತಿ ಮತ್ತು ಕಂಪೆನಿಗಳಿಂದ ಸಲಹೆಯನ್ನು ಆಹ್ವಾನಿಸಿದೆ.

ಸಲಹಾ ಪ್ರಸ್ತಾವ ಸಲ್ಲಿಸಲು ಜೂನ್‌ 5 ಕಡೆಯ ದಿನವಾಗಿದ್ದು ಈ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಟೆಂಡರ್‌ ಕರೆಯಲಾಗುವುದು. 8ರಿಂದ 10 ವರ್ಷಗಳ ಕಾಲಾವಧಿಗೆ ಬಾಡಿಗೆ ಆಧಾರದಲ್ಲಿ ಜಾಗವನ್ನು ನೀಡಲಾಗುವುದು ಎಂದು ಮೆಟ್ರೋ ತನ್ನ ವೆಬ್‌ಸೈಟ್‌‌ನಲ್ಲಿ ಪ್ರಕಟಿಸಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು:http://bmrc.co.in/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+