ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಬಳಿ ಮೆಟ್ರೋ ಕಾಮಗಾರಿ ಆರಂಭ: ವಾಹನಗಳಿಗೆ ಬದಲಿ ಮಾರ್ಗ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಬೆಂಗಳೂರು ಮೆಟ್ರೋ ರೈಲು ನಿಗಮ ಉದ್ದೇಶಿಸಿರುವ ಜಯದೇವ ಜಂಕ್ಷನ್‌ನಲ್ಲಿ ರೀಚ್ 6ಕ್ಕೆ ಸಂಬಧಿಸಿದಂತೆ ವಯಾಡಕ್ಟ್ ನಿರ್ಮಾಣ ಕಾರ್ಯಕ್ಕ ಕೊನೆಗೂ ಘಳಿಗೆ ಕೂಡಿಬಂದಿದೆ.

ಈ ಮೂಲಕ ಜಯದೇವ ಫ್ಲೈಓವರ್ ಕೆಡವಲು ಕಾಲ ಸನ್ನಿಹಿತವಾಗಿದೆ. ಜಯದೇವ ಜಂಕ್ಷ್ ಬಳಿಯ ಬಲ ತುದಿಯಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಮೆಟ್ರೋ ಎತ್ತರಿಸಿದ ಮಾರ್ಗಕ್ಕೆ ಅಗತ್ಯವಿರುವ ವಯಾಡಕ್ಟ್‌ಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಈ ಹಿನ್ನೆಲೆಯಲ್ಲಿ ಡೈರಿ ವೃತ್ತದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಮ ಬನಶಂಕರಿಗೆ ಹೋಗುವ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

Metro work will resume from today near Jayadeva hospital

ಡೈರಿ ವೃತ್ತದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ ಕಡೆಗೆ ಹೋಗುವ ವಾಹನಗಳು ಗುರಪ್ಪನಪಾಳ್ಯ ಜಂಕ್ಷನ್ ಬಳಿ ಬಲ ತಿರುವು ಪಡೆದು 39ನೇ ಕ್ರಾಸ್‌ನಲ್ಲಿ ಹಾದು, ನಂತರ ಎಡಕ್ಕೆ ತಿರುಗಿ ಈಸ್ಟ್ ಎಂಡ್ ಮುಖ್ಯರಸ್ತೆ ಮೂಲಕ ಹೋಗಬೇಕಾಗುತ್ತದೆ.

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ಅಲ್ಲಿ ಎಡಕ್ಕೆ ತಿರುಗಿ, ಮಾರೇನಹಳ್ಳಿ ಮುಖ್ಯರಸ್ತೆ ಮೂಲಕ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ತೆರಳಬೇಕು. ಅದೇ ರೀತಿ ಡೈರಿ ವೃತ್ತದಿಂದ ಬನಶಂಕರಿಗೆ ಹೋಗುವವರು ಗುರಪ್ಪನಪಾಳ್ಯ ಜಂಕ್ಷನ್‌ ಬಳಿ ಬಲ ತಿರುವು ಪಡೆದು, 39ನೇ ಕ್ರಾಸ್ ನಲ್ಲಿ ಹಾದು, ನಂತರ ಎಡಕ್ಕೆ ತಿರುಗಿ 28 ನೇ ಮುಖ್ಯರಸ್ತೆಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುವು ಪಡೆದು ಮಾರೇನಹಳ್ಳಿ ಮೂಲಕ ಬನಶಂಕರಿಗೆ ಹೋಗಬೇಕು. ಜಯದೇವ ಅಂಡರ್‌ಪಾಸ್‌ನ ಎರಡೂ ಮಾರ್ಗಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

English summary
BMRCL is resuming metro construction work from Today. Around Jayadeva hospital. It will lead to huge traffic issues there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X