ರದ್ದು ಆದೇಶ ವಾಪಸ್: ಡಿ.22-23ಕ್ಕೆ ಎಂದಿನಂತೆ ಸಂಚರಿಸಲಿದೆ ಮೆಟ್ರೋ

ಬೆಂಗಳೂರು, ಡಿಸೆಂಬರ್ 21: ಟ್ರಿನಿಟಿ ವೃತ್ತದ ಬಳಿ ಬಿರುಕು ಬಿಟ್ಟಿರುವ ಫಿಲ್ಲರ್ ರಿಪೇರಿಗೆಂದು ಆ ರೂಟ್‌ನಲ್ಲಿ ರದ್ದಾಗುತ್ತದೆ ಎನ್ನಲಾಗಿದ್ದ ಮೆಟ್ರೋ ಸಂಚಾರ ಯಾವುದೇ ಅಡೆ-ತಡೆ ಇಲ್ಲದೆ ಸಂಚರಿಸಲಿದೆ.

ಟ್ರಿನಿಟಿ ವೃತ್ತದ ಫಿಲ್ಲರ್‌ ರಿಪೇರಿ ಕಾರ್ಯವನ್ನು ಡಿಸೆಂಬರ್ 22 ಮತ್ತು ಡಿಸೆಂಬರ್ 23 ರಂದು ಮಾಡಲಾಗುತ್ತದೆ ಹಾಗಾಗಿ ಆ ಎರಡು ದಿನ ಆ ರೂಟ್‌ನಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಹೇಳಿತ್ತು. ಆದರೆ ಅದನ್ನು ತೆಗೆದುಹಾಕಲಾಗಿದೆ.

ಡಿಸೆಂಬರ್ 22 ಮತ್ತು ಡಿಸೆಂಬರ್ 23 ರಂದು ಯಾವುದೇ ಅಡೆ-ತಡೆ ಇಲ್ಲದೆ ಮೆಟ್ರೋ ರೈಲು, ಟ್ರಿನಿಟಿ ಮತ್ತು ಆ ಹಾದಿಯಲ್ಲಿ ಸಂಚಾರ ನಡೆಸುತ್ತದೆ ಎಂದು ಬಿಎಂಆರ್‌ಸಿಎಲ್‌ ಖಚಿತಪಡಿಸಿದೆ.

Metro will run as usual on December 22 and 23

ಕ್ರಿಸ್‌ಮಸ್‌ ಸಮಯ ಆಗಿರುವ ಕಾರಣ ಜನಸಂದಣಿ ಹೆಚ್ಚಿರುತ್ತದೆ. ಈ ಸಮಯದಲ್ಲಿ ಮೆಟ್ರೋ ಸ್ಥಗಿತಗೊಳಿಸಿದರೆ ಜನರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಮೆಟ್ರೋ ಸಂಚಾರ ಮಾಮೂಲಿನಂತೆ ಮುಂದುವರೆಸಲಾಗುತ್ತಿದೆ.

ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್ ಸಂಖ್ಯೆ 155 ರಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಅದನ್ನು ನಾಳೆ ಮತ್ತು ನಾಡಿದ್ದು ರಿಪೇರಿ ಮಾಡಲಾಗುತ್ತದೆ. ಮೆಟ್ರೋ ಸಂಚಾರದ ನಡುವೆಯೇ ಬಿರುಕು ಬಿಟ್ಟಿರುವ ಕಂಬದ ರಿಪೇರಿ ಕಾರ್ಯ ನಡೆಯಲಿದೆ.

ಟ್ರಿನಿಟಿ ವೃತ್ತದ ಬಳಿ ರಿಪೇರಿ ಕಾರ್ಯ ನಡೆಯುವ ಕಾರಣ ಈ ಭಾಗದಲ್ಲಿ ಮೆಟ್ರೋ ನಿಧಾನಗತಿಯಲ್ಲಿ ಸಂಚರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+