ಐಪಿಎಲ್ ಪಂದ್ಯ: ನಮ್ಮ ಮೆಟ್ರೋ ಅವಧಿ ತಡರಾತ್ರಿ 1 ಗಂಟೆವರೆಗೆ ವಿಸ್ತರಣೆ
ಬೆಂಗಳೂರು, ಮಾರ್ಚ್ 25: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಪಂದ್ಯಗಳು ನಡೆಯುವ ದಿನದಂದು ನಮ್ಮ ಮೆಟ್ರೋ ಸೇವಾವಧಿಯನ್ನು ತಡರಾತ್ರಿ 1 ಗಂಟೆಯವರೆಗೂ ವಿಸ್ತರಣೆ ಮಾಡಲಾಗುತ್ತಿದೆ.
ಮಾರ್ಚ್ 28, ಏಪ್ರಿಲ್ 5, ಏ.21, ಏ.24, ಏಪ್ರಿಲ್ 30 ಹಾಗೂ ಮೇ 4 ರಂದು ನಮ್ಮ ಮೆಟ್ರೋ ಅವಧಿಯನ್ನು ರಾತ್ರಿ 1ರವರೆಗೂ ವಿಸ್ತರಿಸಲಾಗುತ್ತಿದೆ.
ವಿಸ್ತರಿಸಿದ ಅವಧಿಯಲ್ಲಿ ಟೋಕನ್ ನೀಡಲಾಗುವುದಿಲ್ಲ, ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡ್ ಬಳಸಿ ಅಥವಾ 50 ರೂ ನೀಡಿ ಪೇಪರ್ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕು ಎಂದು ಮೆಟ್ರೋ ನಿಗಮ ತಿಳಿಸಿದೆ.

ಏ.7ರ ಸಂಜೆ 4ಕ್ಕೆ ಪಂದ್ಯವಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರಾತ್ರಿ 7 ರ ನಂತರ ಎಲ್ಲಾ ಪ್ರಯಾಣಿಕರು ಕಡ್ಡಾಯ ಪೇಪರ್ ಟಿಕೆಟ್ ಖರೀದಿಸಬೇಕು. ಹೀಗಾಗಿ ಕಬ್ಬನ್ ಪಾರ್ಕ್ ನಿಂದ ಪ್ರಯಾಣಿಸುವ ಇತರೆ ಪ್ರಯಾಣಿಕರೂ ದುಪ್ಪಟ್ಟು ದರ ತೆರಬೇಕಾಗಿದೆ.
ಬೈಯಪ್ಪನಹಳ್ಳಿ-ನಾಯಂಡಹಳ್ಳಿ, ನಾಗಸಂದ್ರ ಹಾಗೂ ಯಲಚೇನಹಳ್ಳಿ ಟರ್ಮಿನಲ್ ನಿಲ್ದಾಣಗಳಿಗೆ ಕೊನೆಯ ರೈಲು ತಡರಾತ್ರಿ 12.30ಕ್ಕೆ ಹೊರಡಲಿದೆ.











Click it and Unblock the Notifications