Namma Metro Price Hike: ಮೆಟ್ರೋ ಪ್ರಯಾಣ ದರ ಏರಿಕೆ, ಹೊಸ ದರ ವಿವರ ಇಲ್ಲಿದೆ!

Metro Ticket Price Hike: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಕೊನೆಗೂ ಶಾಕ್‌ ಕೊಟ್ಟಿದೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಬಗ್ಗೆ ಕಳೆದ ಎರಡು ತಿಂಗಳಿನಿಂದಲೂ ಚರ್ಚೆಗಳು ನಡೆದಿವೆ. ಆದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದ್ದರಿಂದ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿರಲಿಲ್ಲ. ಆದರೆ ಇದೀಗ ಕೊನೆಗೂ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದ್ದು. ಇದು ಭಾನುವಾರದಿಂದಲೇ (ಫೆಬ್ರವರಿ 8ರಿಂದ) ಜಾರಿಯಾಗಲಿದೆ ಎಂದು ಹೇಳಲಾಗಿದೆ. ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಎಷ್ಟು ಹೆಚ್ಚಳ ಮಾಡಿದ್ದು ಅಧಿಕೃತ ಆದೇಶ ಮಾಡಿದೆ. ಯಾವ ದಿನ ಎಷ್ಟು ಬೆಲೆ ಏರಿಕೆಯಾಗಲಿದೆ ಹಾಗೂ ಎಷ್ಟು ಕಿ.ಮೀಗೆ ಎಷ್ಟಾಗಲಿದೆ ಎನ್ನುವ ವಿವರ ನೋಡೋಣ..

ನಮ್ಮ ಮೆಟ್ರೋ ಪ್ರಯಾಣ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡುವುದಕ್ಕೆ ಪರ - ವಿರೋಧ ಚರ್ಚೆಗಳು ನಡೆದಿದ್ದವು. ಈ ಸಂಬಂಧ ಹೇಳಿಕೆ ಕೊಟ್ಟಿದ್ದ ಬೆಂಗಳೂರು ನಗರಾಭಿವೃದ್ಧಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಪ್ರಯಾಣ ದರ ಏರಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಬಿಎಂಆರ್‌ಸಿಎಲ್‌ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದರು. ಅಲ್ಲದೆ ಇದಕ್ಕಾಗಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕೇಂದ್ರದಿಂದ ಸಮಿತಿ ರಚನೆ ಸಹ ಆಗಿದೆ ಎಂದು ನೆನ್ನೆಯಷ್ಟೇ ಹೇಳಿದ್ದರು. ಇದೀಗ ಭಾನುವಾರದಿಂದ ಬೆಲೆ ಏರಿಕೆಯಾಗಲಿದೆ ಎನ್ನುವ ಅಪ್ಡೇಟ್‌ ಬಂದಿದೆ.

Metro Ticket Price Hike New Rates to Be Implemented From on Feb 9

ಮೆಟ್ರೋ ಪ್ರಯಾಣ ಬೆಲೆಯನ್ನು ಹಲವು ವರ್ಷಗಳಿಂದ ಮಾಡಿಲ್ಲ. ಹೀಗಾಗಿ ಇದರ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಹೇಳಲಾಗಿತ್ತು. ಆದರೆ, ಬೆಲೆ ಏರಿಕೆ ಮಾಡುವುದಕ್ಕೆ ಅಂತಿಮ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿತ್ತು. ಇನ್ನೇನು ಘೋಷಣೆ ಮಾಡಬೇಕು ಎನ್ನುವ ಹಂತದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶದಿಂದ ತಡೆಯೊಡ್ಡಲಾಗಿತ್ತು. ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ವಾಕ್ಸಮರ ಸಹ ನಡೆದಿತ್ತು. ಇದೀಗ ಕೊನೆಗೂ ಬೆಲೆ ಏರಿಕೆಯನ್ನು ಘೋಷಿಸಲಾಗಿದ್ದು. ಇದು ನಾಳೆಯಿಂದಲೇ ಜಾರಿಯಾಗಲಿದೆ ಎಂದು ಹೇಳಲಾಗಿದೆ.

ಬೆಲೆ ಏರಿಕೆ ವಿವರ: ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ನಾಳೆಯಿಂದ ಪರಿಷ್ಕರಿಸುವ ಸಾಧ್ಯತೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಬೆಂಗಳೂರು ಮೆಟ್ರೋ ದರ ಏರಿಕೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿತ್ತು. ಇದರ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿತ್ತು. ಈ ನಡುವೆಯೇ ಬೆಲೆ ಏರಿಕೆಯ ಬಗ್ಗೆ ಅಪ್ಡೇಟ್‌ ಬಂದಿದೆ. ಮೆಟ್ರೋ ಪ್ರಯಾಣದ ಗರಿಷ್ಠ ದರ ₹60 ರಿಂದ ₹90ಕ್ಕೆ ಏರಿಕೆಯಾಗಬಹುದು. ಭಾನುವಾರ ಹಾಗೂ ಹಬ್ಬದ ದಿನಗಳಲ್ಲಿ ₹10ರಿಂದ ₹90 ಹೆಚ್ಚಳವಾಗಿದೆ.

Metro Ticket Price Hike New Rates to Be Implemented From on Feb 9
ಕಿ.ಮೀ ನೂತನ ಬೆಲೆ
0ಯಿಂದ 2 ಕಿ.ಮೀ 10 ರೂಪಾಯಿ
2ರಿಂದ 4 ಕಿ.ಮೀ 20 ರೂಪಾಯಿ
4ರಿಂದ 6 ಕಿ.ಮೀ 30 ರೂಪಾಯಿ
6ರಿಂದ 8 ಕಿ.ಮೀ 40 ರೂಪಾಯಿ
8ರಿಂದ 10 ಕಿ.ಮೀ 50 ರೂಪಾಯಿ
10ರಿಂದ 15 ಕಿ.ಮೀ 60 ರೂಪಾಯಿ
15 ರಿಂದ 20 ಕಿ.ಮೀ 70 ರೂಪಾಯಿ
20ರಿಂದ 25 ಕಿ.ಮೀ 80 ರೂಪಾಯಿ

30 ಕಿ.ಮೀ ಹೆಚ್ಚಿನ ಪ್ರಯಾಣ ಇದ್ದರೆ 90 ರೂಪಾಯಿ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಆದೇಶ ಮಾಡಿದೆ.

ಸ್ಮಾರ್ಟ್‌ ಕಾರ್ಡ್‌ ಮಿತಿ ಹೆಚ್ಚಳ: ಇನ್ನು ನಮ್ಮ ಮೆಟ್ರೋದ ಸ್ಮಾರ್ಟ್‌ ಕಾರ್ಡ್‌ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಈ ಹಿಂದೆಯಿಂದ 50 ರೂಪಾಯಿ ಮಿತಿಯನ್ನು 90 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇದೀಗ ಮೆಟ್ರೋದಲ್ಲಿ ಪೀಕ್ ಅವರ್‌ಗಳಲ್ಲಿ ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್‌ಗಳನ್ನು ಬಳಸುವವರಿಗೆ ರಿಯಾಯಿತಿ ಕೊಡಲಾಗುತ್ತಿದೆ. ಅದನ್ನು ಮುಂದುವರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+