ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಅಪರಿಚಿತ ಇದ್ದ ಹೋಟೆಲ್‌ನ ಬಾಡಿಗೆ ಎಷ್ಟು?

ಬೆಂಗಳೂರು, ಮೇ 12: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪೂರ್ವ ದ್ವಾರದಲ್ಲಿ ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ಅಲ್ಲಿಂದ ನಾಪತ್ತೆಯಾಗಿದ್ದ ವ್ಯಕ್ತಿ ಯಾರೆಂಬುದು ತಿಳಿಸಿದೆ.

ರಾಜಸ್ಥಾನದ ಜುನ್‌ಜುನ್ ಜಿಲ್ಲೆಯ ಸಜೀದ್ ಖಾನ್ ಎಂಬಾತನೇ ಈ ವ್ಯಕ್ತಿ. ರಂಜಾನ್ ಹಿನ್ನೆಲೆಯಲ್ಲಿ ದಾನ(ಝಕಾತ್) ಪಡೆಯಲು ಬಂದಿರುವ ಈತ ಕಾಟನ್‌ಪೇಟೆಯ ತವಕ್ಕಲ್ ಮಸ್ತಾನ್ ದರ್ಗಾ ಸಮೀಪದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ. ಹೆಂಡತಿ, ಮಕ್ಕಳ ವಿಚಾರಣೆ ನಡೆಸಲಾಗಿದೆ.

ಮೆಟ್ರೋ ನಿಲ್ದಾಣದಿಂದ ಶಂಕಾಸ್ಪದ ವ್ಯಕ್ತಿ ಹೊರ ಹೋಗಿರುವ ಕುರಿತು ಟಿವಿ, ಪತ್ರಿಕೆ ಮತ್ತು ಜಾಲತಾಣಗಳಲ್ಲಿ ಫೋಟೊ ಮತ್ತು ವಿಡಿಯೋ ಹರಿದಾಡಿದ್ದವು. ಇದನ್ನು ಗಮನಿಸಿದ್ದ ಆಟೋ ಚಾಲಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ.

Metro station suspicious man was stayed in lodge for 100 rupee

ಸಾಜಿದ್ ಕಾಟನ್ ಪೇಟೆ ಮುಖ್ಯರಸ್ತೆಯಲಲ್ಇರುವ ಸಿಬಿ ಡಿಲಕ್ಸ್ ಲಾಡ್ಜ್ ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಉಳಿದುಕೊಂಡಿದ್ದ, ಅಂದು ಆತನ ಬಳಿ ಸುಮಾರು 5-6 ಸಾವಿರ ರೂ ಹಣ ಸಿಕ್ಕಿದೆ. ಅದರಲ್ಲಿ ಬಹುತೇಕ 5 ರೂ ಮತ್ತು 10 ರೂ ನಾಣ್ಯಗಳಾಗಿದ್ದವು.

ಸಿಬಿ ಡಿಲಕ್ಸ್ ಲಾಡ್ಜ್‌ನಲ್ಲಿ ರೂಮ್‌ಗಳ ಬಾಡಿಗೆ ಜತೆಗೆ ಡಾರ್ಮೆಟರಿಯೂ ಇದೆ. ಇಲ್ಲಿ ದಿನಕ್ಕೆ ಒಬ್ಬರಿಗೆ 50-100 ರೂ ಬಾಡಿಗೆಗೆ ಡಾರ್ಮೆಟರಿ ಸಿಗುತ್ತದೆ. ಆತನ ಡಾರ್ಮೆಟರಿಯಲ್ಲೇ ಕುಟುಂಬದವರ ಜೊತೆ ಉಳಿದುಕೊಳ್ಳುತ್ತಿದ್ದ, ಆತ ದಿನಕ್ಕೆ 100 ರೂ ಬಾಡಿಗೆ ಕಟ್ಟುತ್ತಿದ್ದ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+