ಡಿ.12, 13ರಂದು ಮೆಟ್ರೋ ರೈಲು ಸಂಚಾರದಲ್ಲಿ ಬದಲಾವಣೆ

ಬೆಂಗಳೂರು, ಡಿಸೆಂಬರ್ 10: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೊ ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ಶನಿವಾರ ಮತ್ತು ಭಾನುವಾರ ಕೆಲವು ಬದಲಾವಣೆಗಳು ಆಗಿವೆ. ಹಸಿರು ಮಾರ್ಗದಲ್ಲಿನ ಸಂಚಾರ ಎಂದಿನಂತೆ ಇರಲಿದೆ.

ಬಿಎಂಆರ್‌ಸಿಎಲ್ ಗುರುವಾರ ಈ ಕುರಿತು ಮಾಹಿತಿ ನೀಡಿದೆ. ಬೈಯಪ್ಪನಹಳ್ಳಿಯಿಂದ ಹೊರಡುವ ರೈಲುಗಳು ವಿಜಯನಗರದ ತನಕ ಮಾತ್ರ ಸಂಚಾರ ನಡೆಸಲಿವೆ. ಮೈಸೂರು ರಸ್ತೆ ನಿಲ್ದಾಣದ ತನಕ ರೈಲು ಸಂಚಾರ ನಡೆಸುವುದಿಲ್ಲ.

ಮೈಸೂರು ರಸ್ತೆಯಿಂದ-ಕೆಂಗೇರಿ ತನಕ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದರ ವಿದ್ಯುತ್ ಕೇಬಲ್ ಅಳವಡಿಕೆ ಕೆಲಸವನ್ನು ಡಿಸೆಂಬರ್ 12 ಮತ್ತು 13ರಂದು ಕೈಗೊಳ್ಳಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

Metro Service Affected In Purple Line On December 12 And 13

ಮೈಸೂರು ರಸ್ತೆ ನಿಲ್ದಾಣದಿಂದ ವಿದ್ಯುತ್ ಕೇಬಲ್ ಅಳವಡಿಕೆ ಕೆಲಸ ಕೈಗೊಳ್ಳುವುದರಿಂದ ರೈಲುಗಳು ವಿಜಯನಗರ ನಿಲ್ದಾಣದ ತನಕ ಮಾತ್ರ ಸಂಚಾರ ನಡೆಸಲಿವೆ. ಅತ್ತಿಗುಪ್ಪೆ, ದೀಪಾಂಜಲಿ ನಗರ, ಮೈಸೂರು ರಸ್ತೆ ನಿಲ್ದಾಣಗಳಿಗೆ ಮೆಟ್ರೋ ರೈಲು ಸಂಚಾರ ಸಂಪರ್ಕ ಇರುವುದಿಲ್ಲ.

ಬೈಯಪ್ಪನಹಳ್ಳಿಯಿಂದ ಹೊರಡುವ ರೈಲು ವಿಜಯನಗರದ ತನಕ ಮಾತ್ರ ಸಂಚಾರ ನಡೆಸಲಿದೆ. ಡಿಸೆಂಬರ್ 14ರ ಸೋಮವಾರದಿಂದ ರೈಲುಗಳು ಮೈಸೂರು ರಸ್ತೆ ನಿಲ್ದಾಣದ ತನಕ ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎರಡು ದಿನಗಳ ಕಾಲ ನಾಗಸಂದ್ರದಿಂದ ಯಲಚೇನಹಳ್ಳಿ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ವಿಸ್ತರಿತ ಮಾರ್ಗ; ನಮ್ಮ ಮೆಟ್ರೋ ಯೋಜನೆ 2ನೇ ಹಂತದಲ್ಲಿ ಮೈಸೂರು ರಸ್ತೆ-ಕೆಂಗೇರಿ (ರೀಚ್ 2) ವಿಸ್ತರಿತ ಮಾರ್ಗ ನಿರ್ಮಾಣವಾಗಿದೆ. 6.46 ಕಿ. ಮೀ. ಉದ್ದದ ಮಾರ್ಗವಿದು. ಈ ಮಾರ್ಗದಲ್ಲಿ 6 ನಿಲ್ದಾಣಗಳಿವೆ.

Recommended Video

      Virat Kohli ಮಾಡಿದ ತಪ್ಪಿಗೆ ಇಡೀ ತಂಡಕ್ಕೆ ಶಿಕ್ಷೆ | Oneindia Kannada

      ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ವಿಶ್ವವಿದ್ಯಾಲಯ, ಆರ್. ವಿ. ಕಾಲೇಜು, ಮೈಲಸಂದ್ರ ಮತ್ತು ಕೆಂಗೇರಿ ನಿಲ್ದಾಣಗಳನ್ನು ಮಾರ್ಗ ಹೊಂದಿದೆ. 2021ರ ಫೆಬ್ರವರಿಯಲ್ಲಿ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+