ಮೆಟ್ರೋ ಪಿಲ್ಲರ್ನಲ್ಲಿ ದೋಷ, ಸದ್ದಿಲ್ಲದೆ ತೇಪೆ ಹಚ್ಚಿದ ಅಧಿಕಾರಿಗಳು
ಬೆಂಗಳೂರು, ಏ.19: ಸೌತ್ ಎಂಡ್ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ಪಿಲ್ಲರ್ ಸೀಟಿಂಗ್ನಲ್ಲಿ ಕಾಣಿಸಿಕೊಂಡಿದ್ದ ಬಿರುಕನ್ನು ರಾತ್ರೋರಾತ್ರಿ ಬಿಎಂಆರ್ಸಿಎಲ್ ಸದ್ದಿಲ್ಲದಂತೆ ತೇಪೆ ಹಚ್ಚಿದೆ.
ನಮ್ಮ ಮೆಟ್ರೋ ಪಿಲ್ಲರ್ನಲ್ಲಿ ದೋಷ ಇದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ, ಎಚ್ಚೆತ್ತ ಬಿಎಂಆರ್ಸಿಎಲ್ ಅಧಿಕಾರಿಗಳು ಬಿರುಕನ್ನು ಮುಚ್ಚುವುದರಲ್ಲೇನೋ ಯಶಸ್ವಿಯಾಗಿದ್ದಾರೆ. ಆದರೆ ಇದೇ ರೀತಿ ಬೇರೆ ಕಡೆಗಳಲ್ಲೂ ದೋಷವಿದ್ದರೆ ಏನು ಗತಿ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸೌತ್ ಎಂಡ್ ವೃತ್ತದ ನಮ್ಮ ಮೆಟ್ರೋ ಪಿಲ್ಲರ್ನಲ್ಲಿ ಬಿರುಕು?
ಟ್ರಿನಿಟಿ ವೃತ್ತ ನಮ್ಮ ಮೆಟ್ರೋ ನಿಲ್ದಾಣದ ಬಳಿ ವಯಾಡಕ್ಟ್ನಲ್ಲಿ ಬಿರುಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೌತ್ ಎಂಡ್ ಸರ್ಕಲ್ ಸರದಿ. 2018ರ ಡಿಸೆಂಬರ್ 9ರಂದು ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್ನಲ್ಲಿ ನಿರ್ಮಿಸಿದ್ದ ಹನಿಕೂಂಬ್ನಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಇದಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದು ನಮ್ಮ ಮೆಟ್ರೋ ಮೊದಲನೇ ಹಂತದ ಎಲ್ಲಾ ನಿಲ್ದಾಣಗಳಲ್ಲಿಯೂ ಪರಿಶೀಲನೆ ನಡೆಸಬೇಕು ಹಾಗೂ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಕೆ ಮಾಡಿ ಭದ್ರತೆ ಕಲ್ಪಿಸುವಂತೆ ಸೂಚನೆ ನೀಡಿದ್ದರು.
ಆರು ಬೋಗಿಗಳ ನಮ್ಮ ಮೆಟ್ರೋದಲ್ಲಿ ಕೊನೆಗೂ ಬಂತು ಡಿಸ್ಪ್ಲೇ ಬೋರ್ಡ್
ಹಸಿರು ಮಾರ್ಗ ಬಸವನಗುಡಿ ಹತ್ತಿರವಿರುವ ಸೌತ್ ಎಂಡ್ ವೃತ್ತಕ್ಕೆ 2017ರಿಂದ ಮೆಟ್ರೋ ಓಡಾಟ ನಡೆಸುತ್ತಿದೆ. ಮೆಟ್ರೋ ಸಂಚರಿಸುವಾಗ ಹೆಚ್ಚಿನ ಒತ್ತಡ ಬೀಳುವ ಕಾರಣ ಪಾಟ್ ಬೇರಿಂಗ್ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.