ಬೆಂಗಳೂರಿನಲ್ಲಿ ಮೆಟ್ರೋ ಮಿತ್ರ ಆಟೋ ಸೇವೆ ಆರಂಭ, ಬುಕ್‌ ಮಾಡುವುದು ಹೇಗೆ ತಿಳಿಯಿರಿ

ಬೆಂಗಳೂರು, ಸೆಪ್ಟೆಂಬರ್‌ 28: ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಮೆಟ್ರೋ ಮಿತ್ರ ಆಪ್‌ ಸೇವೆ ಆರಂಭಗೊಂಡಿದೆ. ಸದ್ಯ ಜಯನಗರ ಮೆಟ್ರೋ ನಿಲ್ದಾಣದಲ್ಲಿ ಬುಧವಾರದಿಂದ ಆಟೋ ರಿಕ್ಷಾ ಸೇವೆ ಚಾಲನೆಗೊಂಡಿದೆ ಎಂದು ಡಿಎಚ್‌ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಜಯನಗರದಲ್ಲಿ ಪ್ರಯಾಣಿಕರು ಈಗ ತಮ್ಮ ಪ್ರಯಾಣದ ಕೊನೆಯ ಹಂತಕ್ಕೆ ಆಟೋ-ರಿಕ್ಷಾಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಮೆಟ್ರೋ ಮಿತ್ರ ಸೇವೆಯನ್ನು ಈ ತಿಂಗಳ ಆರಂಭದಲ್ಲಿ ಉದ್ಘಾಟಿಸಲಾಗಿತ್ತು. ಆದರೆ ಬುಧವಾರದಿಂದ ಪ್ರಯಾಣಿಕರಿಗೆ ಸೇವೆ ಲಭ್ಯವಾಯಿತು.

Metro Mitra Auto Service Launch in Bengaluru, Know How to Book

ಮೆಟ್ರೋ ನಿಲ್ದಾಣದ ಹೊರೆಗೆ ಪ್ರದರ್ಶಿಸಲಾಗಿರುವ ಕ್ಯೂಆರ್ ಕೋಡನ್ನು ಸ್ಕ್ಯಾನ್‌ ಮಾಡುವುದರೊಂದಿಗೆ ಪ್ರಯಾಣಿಕರು ಈಗ ತಾವು ತಲುಪಬೇಕಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆಟೋ ಸೇವೆ ಪಡೆಯಬಹದಾಗಿದೆ. ಪ್ರಯಾಣಿಕರು ತಮ್ಮ ಫೋನ್‌ನ ಕ್ಯಾಮೆರಾವನ್ನು ಬಳಸಿಕೊಂಡು QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಜಯನಗರ ಮೆಟ್ರೋ ನಿಲ್ದಾಣವನ್ನು ಅವರ ಪಿಕ್-ಅಪ್ ಪಾಯಿಂಟ್‌ನ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.

ಪ್ರಯಾಣಿಕರು ಮೆಟ್ರೋ ನಿಲ್ದಾಣದ ಸುತ್ತಲಿನ ವಿವಿಧ ಲ್ಯಾಂಡ್‌ ಮಾರ್ಕ್‌ಗಳನ್ನು ತಮ್ಮ ಇಳಿಯುವ ಸ್ಥಳವಾಗಿ ಆಯ್ಕೆ ಮಾಡಬಹುದು, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪಟ್ಟಿಯನ್ನು ಇಲ್ಲಿ ನೀಡಲಾಗಿರುತ್ತದೆ. ಈ ಲ್ಯಾಂಡ್ ಮಾರ್ಕ್‌ಗಳ ಬಗ್ಗೆ ಅವರಿಗೆ ಖಚಿತವಿಲ್ಲದಿದ್ದರೆ, ಅವರು ಜಯನಗರದಲ್ಲಿ ನಿರ್ದಿಷ್ಟ ಬ್ಲಾಕ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಬುಧವಾರ ಐದು ನೋಂದಾಯಿತ ಆಟೋ ರಿಕ್ಷಾ ಚಾಲಕರು ಮೆಟ್ರೋ ಮಿತ್ರದಲ್ಲಿ ರಾಷ್ಟ್ರೀಯ ವಿದ್ಯಾಲಯ ರಸ್ತೆ ಮತ್ತು ಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹರ್ಬನ್‌ ಮೊಬಿಲಿಟಿ ಎಕ್ಸ್‌ಪರ್ಟ್‌ ಸತ್ಯ ಅರಿಕುಠಾರಮ್, ಮೆಟ್ರೋ ಮಿತ್ರದ ಹಿಂದಿನ ಕೈಗಳಾದ ರುದ್ರಮೂರ್ತಿ ಮತ್ತು ಪಟ್ಟಾಭಿರಾಮ್ ಅವರೊಂದಿಗೆ ಸಹಕರಿಸಿ ಪ್ರತಿ ಮೆಟ್ರೋ ನಿಲ್ದಾಣದಲ್ಲಿ 50 ರಿಂದ 100 ಆಟೋ-ರಿಕ್ಷಾ ಚಾಲಕರನ್ನು ನೇಮಿಸಿಕೊಳ್ಳುವ ತಮ್ಮ ಯೋಜನೆಯ ಬಗ್ಗೆ ತಿಳಿಸಿದ್ದಾರೆ.

ಮೆಟ್ರೋ ಮಿತ್ರ ಸೇವೆಯಲ್ಲಿ ಮೂರು ನೆಗೋಶಬಲ್ ಅಲ್ಲದ ತತ್ವಗಳ ಮೇಲೆ ಮೂಲಭೂತ ತರಬೇತಿಯನ್ನು ಪಡೆದ ನಂತರ ಆಟೋ ಚಾಲಕರರನ್ನು ಸೇವೆಗೆ ನಿಯೋಜನೆ ಮಾಡಲಾಗುತ್ತದೆ. ಇದು ಅವರ ಕೆಲಸ, ಮೌಲ್ಯಗಳು ಮತ್ತು ಶಿಷ್ಟಾಚಾರದ ಬಗ್ಗೆ ಹೆಮ್ಮೆ, ಎಲ್ಲವೂ ವೃತ್ತಿಪರತೆಯನ್ನು ಆಧರಿಸಿರುತ್ತದೆ. ಮಾರ್ಚ್ 2024 ರ ಅಂತ್ಯದ ವೇಳೆಗೆ ಬೆಂಗಳೂರಿನ ಸುಮಾರು 25 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋಮಿತ್ರಾ ಇರಬೇಕೆಂದು ನಾವು ಬಯಸುತ್ತೇವೆ ಎಂದು ಅವರು ತಿಳಿಸಿದರು.

ಮೆಟ್ರೋ ಮಿತ್ರ ಆಟೋ ಸೇವೆ ಬುಕ್‌ ಮಾಡುವುದು ಹೇಗೆ?

1. ಮೊದಲು ನಿಲ್ದಾಣದ ಹೊರೆಗೆ ಇರುವ ಸ್ಟ್ಯಾಂಡಿನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
2. ಬಳಿಕ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ ನಂತರ ಅಲ್ಲಿ ಮೆನುವಿನಿಂದ ಹತ್ತಿರದ ಇಳಿಯವ ಲ್ಯಾಂಡ್ ಮಾರ್ಕ್‌ ಅನ್ನು ಆರಿಸಬೇಕು.
3. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆಟೋ ಬುಕ್ ಮಾಡಲು ಕ್ಲಿಕ್ ಮಾಡಿ.
4. ಆಟೋ ಬಳಿ ನಿಮಗೆ ನಿಯೋಜಿಸಲಾದ ಡ್ರೈವರ್‌ನೊಂದಿಗೆ OTP ಅನ್ನು ನೀಡಿ ರೈಡ್ ಖಚಿತಪಡಿಸಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+