ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

Recommended Video

      ಶೀಘ್ರದಲ್ಲೇ ಮೆಟ್ರೋ ಟಿಕೆಟ್ ಮೊಬೈಲ್ ಫೋನ್ ನಲ್ಲಿ ಲಭ್ಯ | Oneindia Kannada

      ಬೆಂಗಳೂರು, ಅಕ್ಟೋಬರ್ 11: ನಮ್ಮ ಮೆಟ್ರೋ ಟೋಕನ್ ಖರೀದಿಸಲು ಇನ್ನುಮುಂದೆ ಸರತಿಸಾಲಿನಲ್ಲಿ ನಿಲ್ಲಬೇಕಿಲ್ಲ, ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡಿದೆ.

      ಪ್ರಯಾಣಿಕರು ತಮ್ ಸ್ಮಾರ್ಟ್ ಪೋನ್‌ನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕಾಗುತ್ತದೆ. ನಂತರ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್‌ಲೈನ್ ಮೂಲಕ ಬಿಎಂಆರ್‌ಸಿಎಲ್ ಗೆ ಜಮಾ ಆಗಲಿದೆ.

      ಇಂತಹ ನೂತನ ವ್ಯವಸ್ಥೆಯನ್ನು ತರಲು ಬಿಎಂಆರ್‌ಸಿಎಲ್ ಮುಂದಾಗಿದೆ. ಈಗಿರುವ ವ್ಯವಸ್ಥೆಯನ್ನು ಒಂದು ವರ್ಷದ ಒಳಗಾಗಿ ಉನ್ನತೀಕರಿಸಲಿದ್ದು, ಪ್ರಯಾಣಿಕರು ಮೊಬೈಲ್ ಅಪ್ಲಿಕೇಷನ್ ಬಳಸಿ ಟಿಕೆಟ್ ಖರೀದಿಸಬಹುದು.

      Metro metro ticket will available on mobile phone soon

      2015ರ ಪೂರ್ವದಲ್ಲಿ ಅಳವಡಿಸಿದ ಎಎಫ್‌ಸಿ ಗೇಟ್‌ಗಳು ಕ್ಯೂ ಆರ್ ಟಿಕೆಟ್ ವ್ಯವಸ್ಥೆಗೆ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ. ಹಳೆಯ ದ್ವಾರಗಳನ್ನು ಕ್ಯೂ ಆರ್ ವ್ಯವಸ್ಥೆಗೆ ಸ್ಪಂದಿಸುವಂತೆ ಸಾಫ್ಟ್ ವೇರ್ ಬದಲಿಸಲಾಗುವುದು, ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಲಾಗಿದೆ.

      ವಿಮಾನ ನಿಲ್ದಾಣಗಳಲ್ಲಿ ಮಾತ್ರ ಮೊಬೈಲ್ ಟಿಕೆಟ್ ಸೇವೆ ಲಭ್ಯವಿದೆ.ಮೆಟ್ರೋದಲ್ಲೂ ಲಭ್ಯವಾಗಲಿದೆ. 2 ನೇ ಹಂತದ ಮೆಟ್ರೋ ಯೋಜನೆಯ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+