ಮೆಜೆಸ್ಟಿಕ್-ಬಂಗಾರ ಪೇಟೆ ನಡುವೆ ಮೆಮು ರೈಲು ಸಂಚಾರ ಶುರು
ಬೆಂಗಳೂರು, ನವೆಂಬರ್ 12: ನೈಋತ್ಯ ರೈಲ್ವೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಂಗಾರಪೇಟೆಗೆ ಸೋಮವಾರದಿಂದ ವಿಶೇಷ ಮೆಮು ರೈಲು ಸೇವೆ ಆರಂಭಿಸಿದೆ.
ಈ ರೈಲು ಭಾನುವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಪ್ರತಿ ದಿನ ಬೆಳಗ್ಗೆ 5ಕ್ಕೆ ಕೆಎಸ್‌ಆರ್ ರೈಲು ನಿಲ್ದಾಣದಿಂದ ಹೊರಟು (ರೈಲು ಸಂಖ್ಯೆ 06545) ಬೆಳಗ್ಗೆ 6.03ಕ್ಕೆ ಬಂಗಾರಪೇಟೆ ರೈಲು ನಿಲ್ದಾಣ ತಲುಪಲಿದೆ.
ಬಂಗಾರಪೇಟೆಯಿಂದ ರಾತ್ರಿ 10.15ಕ್ಕೆ ಹೊರಟು(ರೈಲು ಸಂಖ್ಯೆ 06546) ರಾತ್ರಿ 11.45ಕ್ಕೆ ಕೆಎಸ್‌ಆರ್ ರೈಲು ನಿಲ್ದಾಣ ತಲುಪಲಿದೆ.

ಈ ರೈಲು ಎರಡು ಕಡೆಯಿಂದ ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೃಷ್ಣರಾಜಪುರ, ಹೂಡಿ ಹಾಲ್ಟ್, ವೈಟ್‌ಫೀಲ್ಡ್, ದೇವನಗುಂತಿ, ಮಾಲೂರು ಮತ್ತು ಟೀಕಾಲ್ ರೈಲು ನಿಲ್ದಾಣದಲ್ಲಿ ನಿಂತು ಹೊರಡಲಿದೆ.
ಮೆಮು ರೈಲು ಸಂಚಾರದಿಂದ ಬಂಗಾರಪೇಟೆ-ಕುಪ್ಪಂ ಮೆಮು ರೈಲು, ಬಂಗಾರಪೇಟೆ-ಕೆಎಸ್ಆರ್ ರೈಲು ಸಂಚಾರದ ಸಮಯ ಬದಲಾವಣೆಯಾಗಿದೆ.












Click it and Unblock the Notifications