ಜು.26ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ
ಬೆಂಗಳೂರು, ಜು. 16 : ಬೆಂಗಳೂರಿನ ಹೊಸೂರು ರಸ್ತೆಯ ಡೈರಿ ಸರ್ಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜು.26ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಿರುದ್ಯೋಗಿ ಯುವಕ-ಯುವತಿಯರು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು.
ಜು.26ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರು ನೇರವಾಗಿ ಸಂದರ್ಶನಕ್ಕೆ ಹಾಜರಾಗಲು ಮೇಳದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. [ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ]

ಈ ಉದ್ಯೋಗ ಮೇಳದಲ್ಲಿ ವೋಲ್ವೋ, ಅಕ್ಸೆಂಚರ್, ಟಫೆ, ಏರ್‌ಟೆಲ್ ಇಂಡೋ-ಯುಎಸ್-ಮಿಮ್ (ಪ್ರೈ) ಲಿ., ಯಾಜಾಕಿ ಇಂಡಿಯಾ ಲಿ., ಮೂತ್ತೂಟ್ ಫಿನ್‌ಕಾರ್ಪ್, ಸೆಂಟಮ್ ಎಲೆಕ್ಟ್ರಾನಿಕ್ಸ್, ಜೈಡಸ್ ಅನಿಮಲ್ ಹೆಲ್ತ್ ಲಿ., ನ್ಯಾಶ್ ಇಂಡಿಯಾ ಲಿ., ಬಿ.ಐ.ಎ.ಎಲ್. ಏರ್ ಇಂಡಿಯಾ ಸ್ಯಾಟ್ಸ್, ಸಿ.ಎಂ.ಎಸ್. ಸಿಸ್ಟಂ ಲಿ., ಇನ್ನು ಮುಂತಾದ ಹೆಸರಾಂತ ಕಂಪನಿಗಳು ಭಾಗವಹಿಸುತ್ತಿವೆ.
ಎಸ್ಎಸ್ಎಲ್ ಸಿ ಫೇಲ್, ಎಸ್ಎಸ್ಎಲ್ ಸಿ ಪಾಸ್, ಪಿಯುಸಿ, ಐಟಿಐ ಮತ್ತು ಡಿಪ್ಲೋಮಾ (ಎಲ್ಲಾ ಟ್ರೇಡ್‌ಗಳ) ಮತ್ತು ಎಲ್ಲಾ ಪದವೀಧರರು ಹಾಗೂ ಎಂಬಿಎ ಪದವಿ ಹೊಂದಿದವರಿಗೆ ಉದ್ಯೋಗ ಅವಕಾಶಗಳು ಲಭ್ಯವಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇಳಕ್ಕೆ ಆಗಮಿಸುವ ಉದ್ಯೋಗಾಂಕ್ಷಿಗಳು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಭಾಗವಹಿಸಿ ಈ ಅವಕಾಶವನ್ನು ಸದುಪಯೋಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ 22259351, 22374582, 22261184 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. [ಮಾಹಿತಿ : ಕರ್ನಾಟಕ ವಾರ್ತೆ]












Click it and Unblock the Notifications