Get Updates
Get notified of breaking news, exclusive insights, and must-see stories!

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ಸ್ಥಾಪನೆ

ಬೆಂಗಳೂರು, ನವೆಂಬರ್ 28: ಕರ್ನಾಟಕದ ರಾಜಧಾನಿ ಬೆಂಗಳೂರು ಅನೇಕ ಉದ್ಯಮಗಳನ್ನು ತನ್ನಲ್ಲಿಗೆ ಆಹ್ವಾನಿಸುತ್ತಲೇ ಇದೆ. ಇದರ ಮುಂದುವರಿದ ಭಾಗವಾಗಿ ನಗರದ ವೈಟ್‌ಫಿಲ್ಡ್‌ನಲ್ಲಿ ''ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ಸ್ಥಾಪಿಸುವ ಸಾಧ್ಯತೆಗಳು ಇವೆ ಎಂದು ರಾಜ್ಯ ಕೈಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಭಾರತದಲ್ಲಿನ ಅಮೆರಿಕದ ಕಾನ್ಸುಲೇಟ್‌ ಜನರಲ್‌ ಕ್ರಿಸ್ಟೋಫರ್ ಡಬ್ಲ್ಯು ಹೋಡ್ಜಸ್ ಅವರ ಜೊತೆ ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಿದರು.

 MB Patil invites US Consulate General to open office at Whitefield Of Bengaluru

ಈ ಸಭೆಯಲ್ಲಿ ಕೈಗಾರಿ ಸಚಿವ ಎಂಬಿ ಪಾಟೀಲ್ ಅವರೇ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಗುರುತಿಸಿರುವ ಪ್ರದೇಶದಲ್ಲಿ ಕಾನ್ಸುಲೇಟ್ ಜನರಲ್ ಕಚೇರಿ ಸ್ಥಾಪಿಸುವುದನ್ನು ಪರಿಗಣಿಸಬೇಕು ಎಂದು ಅಮೆರಿಕದ ಕಾನ್ಸುಲೇಟ್‌ ಜನರಲ್ ಅವರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಅಮೆರಿಕಾ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನಲಾಗಿದೆ.

ಬೆಂಗಳೂರಿನ ಸ್ಥಾನ ಬಲಪಡಿಡಲು ಮನವಿ

ಸದ್ಯ ಬೆಂಗಳೂರಿನ ಹೊರವಲಯದಲ್ಲಿ ಉದ್ದೇಶಿತ ಜ್ಞಾನ, ಆರೋಗ್ಯ ರಕ್ಷಣೆ, ನಾವೀನ್ಯತೆ ಮತ್ತು ಸಂಶೋಧನೆ (KHIRCT) ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಮರಿಕಾಕ್ಕೆ ಸಚಿವರು ಮಾಹಿತಿ ನೀಡಿದರು.ಇದು ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.

2,000 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಸಂಶೋಧನಾ ನಗರಕ್ಕೆ ಸಂಬಂಧಿಸಿದ ಅಂತಿಮ ಯೋಜನೆಯು ಮುಂದಿನ 2 ರಿಂದ 3 ತಿಂಗಳಲ್ಲಿ ಸಿದ್ಧಗೊಳ್ಳಲಿದೆ. 'ಕೆಎಚ್‌ಐಆರ್‌ ಸಿಟಿ'ಗೆ ಸಂಬಂಧಿಸಿದಂತೆ ಮುಂಬರುವ ತಿಂಗಳುಗಳಲ್ಲಿ ಅಮೆರಿಕ ಮತ್ತು ಅರಬ್‌ ಅಮೀರರ ಒಕ್ಕೂಟದಲ್ಲಿ (ಯುಎಇ) ರೋಡ್‌ಷೋಗಳನ್ನು ನಡೆಸಲು ನಾವು ಯೋಜಿಸಿದ್ದೇವೆ ಎಂದು ಸಚಿವರು ಹೇಳಿದರು.

ವಿವಿಧ ವಲಯಗಳಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶವಿದೆ

ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಮಷಿನ್‌ಟೂಲ್ಸ್‌ ಮತ್ತಿತರ ವಲಯಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳ ಬಗ್ಗೆಯೂ ಸಚಿವ ಪಾಟೀಲ ಅವರು ಕಾನ್ಸುಲೇಟ್‌ ಜನರಲ್‌ ಅವರಿಗೆ ವಿವರಿಸಿದರು.

ಕರ್ನಾಟಕವು ಈಗಾಗಲೇ ಐಟಿ ಮತ್ತು ಡಿಸೈನ್‌ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದೆ. ಸರಕುಗಳ ತಯಾರಿಕಾ ವಲಯದಲ್ಲಿಯೂ ರಾಜ್ಯವನ್ನು ಇದೇ ಬಗೆಯಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಹೊಸ ಉದ್ಯಮಗಳ ಸ್ಥಾಪನೆಗೆ ನೆರವಾಗುವ ಅತ್ಯುತ್ತಮ ಸಂಪರ್ಕ ಸೌಲಭ್ಯಗಳು ಇವೆ ಎಂದರು.

ಕರ್ನಾಟಕದ 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಅಮೆರಿಕದ ಕಂಪನಿಗಳು ಆಸಕ್ತಿ ಹೊಂದಿವೆ ಎ ಎಂದು ಸಚಿವರ ಜೊತೆಗಿನ ಸಭೆಯಲ್ಲಿ ಅಮೆರಿಕದ ಕಂಪನಿಗಳ ಪರವಾಗಿ ಕ್ರಿಸ್ಟೋಫರ್ ಡಬ್ಲ್ಯು. ಹೋಡ್ಜಸ್ ಅವರು ಹೇಳಿದರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು.

 MB Patil invites US Consulate General to open office at Whitefield Of Bengaluru

ಮೈಸೂರು-ಮಂಗಳೂರಿನಲ್ಲಿ ಉದ್ಯಮಗಳಿಗೆ ಅವಕಾಶ

ಭವಿಷ್ಯದಲ್ಲಿ ಮೈಸೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ ಅಮೆರಿಕದ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಇಂತಹ ನಗರಗಳಲ್ಲಿ ಇರುವ ಮೂಲಸೌಲಭ್ಯಗಳ ಲಭ್ಯತೆ ಕುರಿತೂ ಹೋಡ್ಜಸ್ ಚರ್ಚಿಸಿದರು.

ಬೆಂಗಳೂರಿನ ಆಚೆಗಿನ ನಗರಗಳಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಅಮೆರಿಕದ ವಾಣಿಜ್ಯ ನಿಯೋಗವು ಫೆಬ್ರುವರಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಲಿದೆ. ರಾಜ್ಯದಲ್ಲಿನ 2 ಮತ್ತು 3 ಹಂತದ ನಗರಗಳು ಅಮೆರಿಕದ ಕಂಪನಿಗಳಿಗೆ ಸೂಕ್ತವಾದ ಮೂಲ ಸೌಲಭ್ಯಗಳನ್ನು ಒದಗಿಸಲಿವೆಯೇ ಎನ್ನುವುದನ್ನು ನಿಯೋಗವು ಪರಿಶೀಲಿಸಲಿದೆ ಎಂದು ಹೋಡ್ಜಸ್ ಸಚಿವರ ಗಮನಕ್ಕೆ ತಂದರು.

ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+