Industry: ಬಿಇಎಲ್ ಸಹಭಾಗಿತ್ವದ ಥೇಲ್ಸ್ ಕಂಪನಿಯ 'ಇನ್-ಫ್ಲೈಟ್ ಲ್ಯಾಬ್' ಆರಂಭ

ಬೆಂಗಳೂರು, ಜೂನ್ 04: ವೈಮಾಂತರಿಕ್ಷ ಕ್ಷೇತ್ರದಲ್ಲಿ ಮುಂಚೂಣಿ ಕಂಪನಿಯಾಗಿರುವ 'ಥೇಲ್ಸ್' ಬೆಂಗಳೂರಿನಲ್ಲಿರುವ ಸಾರ್ವಜನಿಕ ಸ್ವಾಮ್ಯದ ಬಿಇಎಲ್ ಜತೆ ದೀರ್ಘಕಾಲದಿಂದಲೂ ಸಹಭಾಗಿತ್ವ ಹೊಂದಿದೆ. ಈ ಥೇಲ್ಸ್ ಕಂಪನಿಯು ಈಗ ರಾಜ್ಯದಲ್ಲಿ ತನ್ನ ಎರಡನೆಯ ಕಚೇರಿ ಆರಂಭಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಿರುವ 'ಥೇಲ್ಸ್' ಕಂಪನಿಯ ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್ಟೇನ್ಮೆಂಟ್ ಮತ್ತು ಸರ್ವೀಸಸ್ ಲ್ಯಾಬ್ ಅನ್ನು ಅವರು ಉದ್ಘಾಟಿಸಿ ಮಾತನಾಡಿದರು. ಬಿಇಎಲ್ ಜೊತೆಗೆ ನಿರಂತರ ಒಡನಾಟ ಹೊಂದಿರುವ ಕಂಪನಿಯು ಹೊಸ ಕಚೇರಿ ತೆರೆದಿರುವುದು ಸ್ವಾಗತಾರ್ಹ. ಇದರಿಂದಾಗಿ ಕರ್ನಾಟಕದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ವಲಯಗಳಿಗೆ ಮತ್ತಷ್ಟು ಬಲ ಬರಲಿದೆ ಎಂದು ಅವರು ವಿವರಿಸಿದರು.

MB Patil inagurated Second In-Flight Lab office of Thales Company in Karnataka

ಥೇಲ್ಸ್ ಕಂಪನಿಯ ಈ ಹೆಜ್ಜೆಯು ಸ್ಥಳೀಯವಾಗಿ ಲಭ್ಯವಿರುವ ಪ್ರತಿಭಾವಂತ ಎಂಜಿನಿಯರುಗಳಿಗೆ ಮಹತ್ವದ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಲಿದೆ. ಈ ಕೇಂದ್ರದ ಮೂಲಕ ಏವಿಯಾನಿಕ್ಸ್, ವಿಮಾನ ಸಂಚಾರ ನಿರ್ವಹಣೆ, ಸಂಪರ್ಕ ಸುಧಾರಣೆ ಮತ್ತು ವೈಮಾನಿಕ ನಿರ್ವಹಣೆ ಮುಂತಾದ ಚಟುವಟಿಕೆಗಳು ನಡೆಯಲಿವೆ. ಅಲ್ಲದೆ, ಈ ಉದ್ಯಮಗಳಿಗೆ ಬೇಕಾದ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಇದು ಸಜ್ಜುಗೊಳಿಸಲಿದೆ ಎಂದು ಹೆಳಿದರು.

ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ಕೈಗಾರಿಕೆಗಳ ಒಟ್ಟು ವಹಿವಾಟಿನಲ್ಲಿ ರಾಜ್ಯದ ಪಾಲು ಶೇಕಡ 65ರಷ್ಟಿದೆ. ಈ ಕ್ಷೇತ್ರದಲ್ಲಿ ರಾಜ್ಯವು ಜಾಗತಿಕ ಸ್ತರದಲ್ಲಿ ತೃತೀಯ ಸ್ಥಾನದಲ್ಲಿದೆ. ಸರಕಾರದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯ ಫಲವಾಗಿ ಟಾಟಾ ಸಮೂಹವು ನಮ್ಮಲ್ಲಿ ಎಚ್125 ದರ್ಜೆಯ ಹೆಲಿಕಾಪ್ಟರುಗಳ ಬಿಡಿಭಾಗಗಳ ಜೋಡಣೆ ಘಟಕವನ್ನು ಆರಂಭಿಸುತ್ತಿದೆ. ಇಂಡಿಗೋ ಕಂಪನಿಯ 'ಎಂ.ಆರ್.ಒ ಸ್ಥಾವರ' ಮತ್ತು ಸಾಫ್ರಾನ್ ಕಂಪನಿಯ ಏವಿಯಾನಿಕ್ಸ್ ಘಟಕಗಳು ಕೂಡ ರಾಜ್ಯದಲ್ಲಿ ಶುರುವಾಗುತ್ತಿವೆ. ಇವು ಉದ್ಯೋಗಸೃಷ್ಟಿಯ ಜತೆಗೆ ಸ್ಥಳೀಯ ಉದ್ಯಮಿಗಳು ಮತ್ತು ಸೇವಾದಾರರಿಗೂ ಉಜ್ವಲ ಅವಕಾಶಗಳನ್ನು ನಿರ್ಮಿಸುತ್ತಿವೆ ಎಂದರು.

ಕರ್ನಾಟಕವು ನವೋದ್ಯಮಗಳ ನೆಲೆ

ಜಾಗತಿಕ ಮಟ್ಟದಲ್ಲಿ ವೈಮಾನಿಕ ಎಂಜಿನ್ ತಯಾರಿಸುವ ರೋಲ್ಸ್ ರಾಯ್ಸ್, ಅಡ್ವಾನ್ಸ್ಡ್ ಮೆಟೀರಿಯಲ್ಸ್ ತಯಾರಿಸುವ ನೋಪೋ ನ್ಯಾನೋಟೆಕ್ ತರಹದ ನವೋದ್ಯಮಗಳು, ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ ಅಭಿವೃದ್ಧಿಗೆ ಹೆಸರಾಗಿರುವ ಪಿಕ್ಸೆಲ್, ಮತ್ತು ಯುಎವಿ (ಅನ್-ಮ್ಯಾನ್ಡ್ ಏರಿಯಲ್ ವೆಹಿಕಲ್ಸ್) ತರಹದ ಸಾಧನಗಳನ್ನು ಅಭಿವೃದ್ಧಿಪಡಿಸುವ ನ್ಯೂಸ್ಪೇಸ್ ರೀಸರ್ಚ್ ತರಹದ ಕಂಪನಿಗಳೆಲ್ಲವೂ ರಾಜ್ಯದಲ್ಲಿ ನೆಲೆಯೂರಿವೆ. ಈ ಕಾರ್ಯಪರಿಸರವನ್ನು ಉದ್ಯಮಿಗಳು ಹೂಡಿಕೆ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನಿಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+