ನೀರು ಸಂರಕ್ಷಣೆಗೆ ಜಲಮಂಡಳಿಯ ಹೊಸ ತಂತ್ರ
ಬೆಂಗಳೂರು, ಜು. 01 : ನೀರು ಪೂರೈಕೆ ಹಾಗೂ ಸೋರಿಕೆ ಬೆಂಗಳೂರನ್ನು ತೀವ್ರತರವಾಗಿ ಕಾಡುತ್ತಿರುವ ಒಂದು ಬೃಹತ್ತಾದ ಸಮಸ್ಯೆ. ಇದನ್ನು ನಿವಾರಿಸಲು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಒಂದು ಉತ್ತಮ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಮುಂದಾಗಿದೆ.
ನಾಗರೀಕ ಪ್ರತಿನಿತ್ಯ 38 %ನಷ್ಟು ನೀರಿನ ಪೂರೈಕೆಯಾಗುತ್ತದೆ ಮತ್ತು ಸುಮಾರು 1,375 ಎಮ್‌ಎಲ್‌ಡಿ (million litres per day) ನೀರು ಅನಾವಶ್ಯಕ ಸೋರಿಕೆಯಾಗುತ್ತದೆ. ಇದನ್ನು ಉತ್ತಮ ನಿರ್ವಹಣೆ ಮೂಲಕ ನಿವಾರಿಸಲು ಸಾಧ್ಯ ಎಂದು ನಿರ್ಧರಿಸಿದ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಮಾತ್ರವಲ್ಲ ಅಭಿವೃದ್ಧಿ ಚೌಕಟ್ಟಿಗೆ ಸಂಬಂಧಿಸಿದ ಆಸ್ತಿ, ನೆಲಮಟ್ಟದ ಜಲಾಶಯಗಳು ಹಾಗೂ ಒಳಚರಂಡಿ ಘಟಕಗಳಲ್ಲೂ ವಿಭಿನ್ನ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದೆ.

2003 ರಲ್ಲಿ, ಮಂಡಳಿಯು 2025 ರ ಹೊತ್ತಿಗೆ ಬೆಂಗಳೂರು ನೀರು ಪೂರೈಕೆ ಮತ್ತು ಪರಿಸರ ನೈರ್ಮಲೀಕರಣ ಯೋಜನೆಗೆ ಸಂಬಂಧಪಟ್ಟಂತೆ, ಆಸ್ಟ್ರೇಲಿಯಾ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನ ಪ್ರಾಯೋಜಕತ್ವದಲ್ಲಿ ಯೋಜನೆ ತಯಾರಿಸಿತ್ತು. ಈ ಯೋಜನೆಗೆ ಸುಮಾರು 11 ಕೋಟಿ ರೂ ವೆಚ್ಚ ತಗುಲಲಿದ್ದು, 2016 ರ ಆಗಸ್ಟ್ ಕ್ಕೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಬಿಡಬ್ಲ್ಯೂಎಸ್ಎಸ್ ಬಿ ಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಎನ್ ರವೀಂದ್ರ ಯೋಜನೆಯ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಸಿಂಗಪೂರಿನ ಸಿಎಚ್2ಎಮ್ ಹಿಲ್ ಎಂಬ ಕಂಪನಿ ಯೋಜನೆ ರೂಪಿಸಲು ಮುಂದಾಗಿದೆ. ಈ ಹೊಸ ಯೋಜನೆ ವಿಶ್ವಾಸಾರ್ಹ ಹಾಗೂ ಸುಸ್ಥಿರವಾದುದಾಗಿರುವುದಲ್ಲದೇ, ಪರಿಣಾಮಕಾರಿ ಬಂಡವಾಳ ಹೂಡಿಕೆಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.ಅಲ್ಲದೇ ನೀರು ಸಂರಕ್ಷಣೆ , ಪುನರ್ಬಳಕೆ, ಮಳೆನೀರು ಕೊಯ್ಲು ಈ ಎಲ್ಲಾ ಪರಿಸರ ಸ್ನೇಹಿ ಕಾರ್ಯಕ್ಕೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
-
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ












Click it and Unblock the Notifications