ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ತಡರಾತ್ರಿ ಅಗ್ನಿ ಅವಘಡ
ಬೆಂಗೂರು, ಜ.3: ಕುಂಬಳಗೋಡಿನಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಸೋಮವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಇಲ್ಲಿನ ಸೋನಿ ಇಂಡಸ್ಟ್ರಿಯಲ್ಲಿ ರಾತ್ರಿ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ನಾಲ್ಕು ಅಂತಸ್ತಿನ ಕಟ್ಟಡ ಹೊತ್ತಿ ಉರಿಯಲಾರಂಭಿಸಿದೆ. ಕೂಡಲೇ ಆಗ್ನಿಶಾಮಕ ಪಡೆಯ ನಾಲ್ಕು ವಾಹನಗಳು ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದವು.
ಔಷಧಗಳ ಉತ್ಪಾದನೆಗೆ ಬೇಕಾದ ಪೂರಕ ರಸಾಯನಿಕಗಳನ್ನು ಸೋನಿ ಇಂಡಸ್ಟ್ರಿಯಲ್ಲಿ ಉತ್ಪಾದಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇಡೀ ಕಟ್ಟಡದಲ್ಲಿ ವಿವಿಧ ರೀತಿಯ ರಸಾಯನಿಕಗಳು ತುಂಬಿಟ್ಟಿದ್ದರಿಂದ ಬೆಂಕಿಯ ಜ್ವಾಲೆ ಹೊತ್ತಿ ಉರಿಯಲು ಕಾರಣವಾಯಿತು.

ಕಟ್ಟಡ ತುಂಬ ತೀವ್ರವಾಗಿ ಬೆಂಕಿ ಹೊತ್ತಿ ಉರಿಯುತ್ತಿದ್ದರಿಂದ ಅಕ್ಕಪಕ್ಕದ ಇತರೆ ಫ್ಯಾಕ್ಟರಿಗಳು ಮತ್ತು ಮನೆಗಳಿಗೂ ಬೆಂಕಿ ವಿಸ್ತರಿಸುವ ಆತಂಕ ಎದುರಾಗಿತ್ತು. ಆದರೆ, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರ ಬೆಂಕಿ ನಂದಿಸುವಲ್ಲಿ ತುರ್ತು ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಪ್ರಕರಣದಲ್ಲಿ ಯಾರಿಗೂ ಸಹ ಪ್ರಾಣಾಪಾಯ ಆಗಿಲ್ಲ ಎಂದು ಹೇಳಲಾಗಿದೆ.












Click it and Unblock the Notifications