ಮ್ಯಾರೇಜ್ ಲೋನ್: ಬೆಂಗಳೂರಿನಲ್ಲಿ ಸಿಗುತ್ತೆ ಮದುವೆಗಾಗಿ ಸಾಲ- ಶುರುವಾಯ್ತು ಇಎಂಐ ಟ್ರೆಂಡ್
ಸಾಮಾನ್ಯವಾಗಿ ಕಾರು, ಬೈಕ್, ನಿವೇಶನಗಳ ಮೇಲೆ ಸಾಲ ಕೊಡುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದ್ದೂರಿ ಮದುವೆ ಆಗಬೇಕು ಅನ್ನೋರಿಗೆ ಸಾಲ ಕೊಡಲಾಗುತ್ತಿದೆ. ಸಾಲ ತೆಗೆದುಕೊಂಡ ಬಳಿಕ ಅದನ್ನು ಇಎಂಐ ಮೂಲಕ ಪೇ ಮಾಡಬೇಕು. ಹಾಗಾದರೆ ಏನಿದು ಹೊಸ ಟ್ರೆಂಡ್? ಎಲ್ಲಿ ಲೋನ್ ಸಿಗುತ್ತೆ? ಯಾರು ಕೊಡ್ತಾರೆ? ಅದರ ಸಂಪೂರ್ಣ ವರದಿ ಈಗ ತಿಳಿಯೋಣ.
ಮದುವೆ ಮಾಡಿಕೊಳ್ಳುವ ಸಮಯ ಹೇಳಿಕೇಳಿ ಬರುವಂತದ್ದಲ್ಲ. ಕಂಕಣಭಾಗ್ಯ ಕೂಡಿ ಬಂದರೆ ಮದುವೆ ಆಗಲೇ ಬೇಕು. ದಿಢೀರ್ ಅಂತ ಮದುವೆ ಫಿಕ್ಸ್ ಆದರೆ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವುದಿರಲಿ, ಸಣ್ಣದಾಗಿ ಕಾರ್ಯಕ್ರಮ ಮಾಡಿಕೊಳ್ಳುವುದು ಕಷ್ಟವಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಸಹಾಯವಾಗಲೆಂದು ಮದುವೆ ಸಾಲ ನೀಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ.

ಹೌದು ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತು ಇದೆ. ಮದುವೆ ಮಾಡೋದಕ್ಕೆ ಹಾಗೂ ಮನೆ ಕಟ್ಟೋದಕ್ಕೆ ಎರಡಕ್ಕೂ ಕೈ ತುಂಬಾ ದುಡ್ಡು ಬೇಕು. ಮದುವೆಗೆ ಎಷ್ಟೇ ಅಳೆದು ತೂಗಿದರೂ ಕೂಡ ಖರ್ಚಿಗೆ ಹಣ ಸಾಕಾಗುವುದಿಲ್ಲ. ಅದರಲ್ಲೂ ಇಂತಹ ಸಂದರ್ಭದಲ್ಲಿ ಜನ ಮನೆ ಜಮೀನನ್ನು ಮಾರಾಟ ಮಾಡುತ್ತಾರೆ. ಇಂತಹ ಜನರಿಗೆ ಅಥವಾ ಬಜೆಟ್‌ಗಿಂತ ಹೆಚ್ಚಾಗಿ ಖರ್ಚು ಮಾಡಿ ಮದುವೆ ಆಗಬೇಕು ಅನ್ನೋರಿಗೆ ವೆಡ್ಡಿಂಗ್ ಪ್ಲಾನರ್‌ಗಳು ಇಎಂಐ ಆಪ್ಷನ್‌ಗಳನ್ನು ಕೊಡುತ್ತಿದ್ದಾರೆ.
ಈ ವೆಡ್ಡಿಂಗ್ ಪ್ಲಾನರ್‌ಗಳು ಸ್ವತ: ಅವರೇ ಅಥವಾ ಫೈನಾನ್ಷಿಯಲ್ ಕಂಪನಿ ಅಥವಾ ಬ್ಯಾಂಕ್‌ಗಳಿಂದ ಇಎಂಐ ಸಾಲ ಸೌಲಭ್ಯಗಳನ್ನು ಕೊಡಿಸುತ್ತಿದ್ದಾರೆ. ಹೀಗಾಗಿ ವೆಡ್ಡಿಂಗ್ ಪ್ಲಾನ್‌ಗಳಲ್ಲಿ ಇಎಂಐ ಸೌಲಭ್ಯವಿದೆ ಎಂದು ಪ್ರಚಾರ ಕೂಡ ಮಾಡುತ್ತಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇವೆಂಟ್ ಪ್ಲಾನರ್ ಅರುಣ್, 'ಬೆಂಗಳೂರಿನಲ್ಲಿ ಹೆಚ್ಚೆಚ್ಚು ದುಬಾರಿ ಮದುವೆಗಳೇ ಆಗುತ್ತವೆ. 5 ಲಕ್ಷ, 10, 15ರಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರು ಇರುತ್ತಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮದುವೆ ಮಾಡಿಕೊಳ್ಳುತ್ತಾರೆ. ಜನ ಯಾಕೆ ತುಂಬಾ ಹಣ ಖರ್ಚು ಮಾಡಿ ಮದುವೆ ಆಗ್ತಾಯಿದ್ದಾರೆ ಅಂದರೆ ಹೊಸ ಹೊಸ ವೆಡ್ಡಿಂಗ್ ಪ್ಲಾನರ್‌ಗಳು ಬೆಂಗಳೂರಿನಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ವೆಡ್ಡಿಂಗ್ ಲೋನ್ ಸಾಕಷ್ಟು ಹರಿದಾಡುತ್ತಿದೆ. ತುಂಬಾ ಜನ ಮದುವೆಗಾಗಿ ಸ್ವಲ್ಪ ಮಾತ್ರ ಹಣ ಕೂಡಿ ಇಟ್ಟಿರುತ್ತಾರೆ. ಹೀಗಿರುವಾಗ ಹೆಚ್ಚುವರಿ ಹಣ ಬೇಕು ಅಂದರೆ ವೆಡ್ಡಿಂಗ್ ಲೋನ್ ಮಾಡಿಕೊಳ್ಳಬಹುದು. ಇದು ಅವರಿಗೆ ಸಹಾಯ ಮಾಡುತ್ತದೆ' ಎಂದಿದ್ದಾರೆ.
ಇನ್ನೂ ಈ ವರ್ಷ ಮದುವೆ ಸೀಸನ್ ಸೇರಿದಂತೆ 30 ರಿಂದ 50 ಸಾವಿರ ಮದುವೆಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಇನ್ನೂ ಮದುವೆಗಾಗಿನೇ ನೀಡುವಂತಹ ಈ ಸಾಲದ ಆಧಾರಕ್ಕಾಗಿ ಕೆಲವೊಂದು ಡಾಕ್ಯೂಮೆಂಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಜೊತೆಗೆ ಈ ಇಎಂಐಗೆ ಬಡ್ಡಿ ಸಹ ಹಾಕಲಾಗುತ್ತದೆ.
ಈ ವೆಡ್ಡಿಂಗ್ ಪ್ಲಾನರ್ ನೀಡುವ ವೆಡ್ಡಿಂಗ್ ಪ್ಲಾನ್‌ನಲ್ಲಿ ಹೋಟೆಲ್, ಅತಿಥಿಗಳು, ಫೋಟೋ ಗ್ರಾಫರ್ ಹೀಗೆ ಒಂದೇ ಸಲಾದ ಅಡಿ ಖರ್ಚು ಮಾಡಬಹುದು. ಇದರಿಂದಾಗಿ ಒಟ್ಟಿಗೆ ಹಣವನ್ನು ತೀರುಸುವ ಸಮಸ್ಯೆ ಇಲ್ಲದೆ ಪ್ರತೀ ತಿಂಗಳು ತೀರಿಸಬಹುದು ಎನ್ನುವ ಮನಸ್ಥಿತಿ ಇರುವವರಿಗೆ ಇದು ಅವಕಾಶವಾಗುತ್ತದೆ.
ಒಟ್ಟಿನಲ್ಲಿ ಇದುವರೆಗೂ ಫೋನ್, ಬೈಕ್, ಕಾರು, ಮನೆ ಸಾಲಗಳನ್ನು ಇಎಂಐ ಮೂಲಕ ಕಟ್ಟುತ್ತಿದ್ದ ಜನ ಇದೀಗ ಮದುವೆಗೂ ಸಹ ಇಎಂಐ ಸಾಲ ಮಾಡಿಕೊಳ್ಳುವಂತಾಗಿದೆ. ಆದರೂ ಮದುವೆ ಬದುಕಿಗೆ ನಷ್ಟವನ್ನುಂಟು ಮಾಡದಿರಲಿ. ಮ್ಯಾರೇಜ್ ಲೋನ್ ತೆಗೆದುಕೊಳ್ಳುವ ಮುನ್ನ ಒಮ್ಮೆ ವಿಚಾರ ಮಾಡುವುದು ಒಳ್ಳೆಯದು.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications