ರಂಗಶಂಕರದಲ್ಲಿ ಭಾನುವಾರ ಮ್ಯಾಂಗೋ ಪಾರ್ಟಿ

ಬೆಂಗಳೂರು, ಮೇ 30 : ಮಾರುಕಟ್ಟೆಗೆ ಬಗೆಬಗೆಯ ಮಾವಿನ ಹಣ್ಣುಗಳು ಬಂದಿವೆ. ಮಾವಿನ ಹಣ್ಣಿನೊಡನೆ ಜನರೊಂದಿಗೆ ಸೇರಿ ಪಾರ್ಟಿ ಮಾಡುವ ಆಸೆ ಇದ್ದರೆ ಭಾನುವಾರ ರಂಗ ಶಂಕರಕ್ಕೆ ಹೋಗಿ. ಹೌದು, ರಂಗ ಶಂಕರ ವಾರ್ಷಿಕ 'ಮ್ಯಾಂಗೋ ಪಾರ್ಟಿ'ಯನ್ನು ಮೇ 31ರಂದು ಆಯೋಜಿಸಿದೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ರಂಗ ಶಂಕರ ಹಲವಾರು ವರ್ಷಗಳಿಂದ ಮ್ಯಾಂಗೋ ಪಾರ್ಟಿಯನ್ನು ಆಯೋಜಿಸುತ್ತಿದೆ. ಸಂಗೀತ, ರಂಗ ಚಟುವಟಿಕೆ, ಸಾಹಿತ್ಯ, ರಂಗಭೂಮಿ ಪ್ರಮುಖರ ಒಡನಾಟ ಮುಂತಾದವುಗಳು ಈ ಮ್ಯಾಂಗೋ ಪಾರ್ಟಿಯ ವಿಶೇಷತೆ. [ಲಾಲ್ ಬಾಗ್ ನಲ್ಲಿ ಮಾವು ಮೇಳ ಆರಂಭವಾಗಿದೆ]

mango

ಮೇ 31ರ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರವರೆಗೆ ಮ್ಯಾಂಗೋ ಪಾರ್ಟಿ ನಡೆಯಲಿದೆ. ಇದಕ್ಕೆ ಆಗಮಿಸುವವರು ಯಾವುದೇ ಬಗೆಯ 1 ಕೆಜಿ ಮಾವಿನ ಹಣ್ಣು ತಂದರೆ ಸಾಕು. ಪಾರ್ಟಿಗೆ ಆಗಮಿಸುವವರು ಹಸಿರು ಅಥವ ಹಳದಿ ವಸ್ತ್ರ ಧರಿಸಿರಬೇಕು. [ರಂಗ ಶಂಕರ ವೆಬ್ ಸೈಟ್]

ಕಥೆ ಹೇಳಿ, ಬಹುಮಾನ ಗೆಲ್ಲಿ : ಮ್ಯಾಂಗೋ ಪಾರ್ಟಿಯಲ್ಲಿ 6 ರಿಂದ 9ವರ್ಷದೊಳಗಿನ ಮಕ್ಕಳಿಗೆ ಕಥೆ ಹೇಳುವ ಸ್ಪರ್ಧೆ ಇದೆ. ಮಾವಿನ ಹಣ್ಣಿಗೆ ಸಂಬಂಧಿಸಿದ ಕತೆಗಳನ್ನು ಮಾತ್ರ ಹೇಳಬೇಕು. [email protected]ಗೆ ಇಂಗ್ಲಿಶ್‌ನಲ್ಲಿ ಕಥೆಯನ್ನು ಕಳಿಸಿಕೊಟ್ಟು ಮಕ್ಕಳ ಹೆಸರನ್ನು ನೋಂದಾಯಿಸಿ.

ರೆಸಿಪಿ ಕಳಿಸಿ : ಮ್ಯಾಂಗೋಮೇನಿಯಾ ಎಂಬ ಮ್ಯಾಂಗೋ ಸ್ಪೆಷಲ್ ರೆಸಿಪಿ ತಯಾರಿಸುವ ಕಾರ್ಯಕ್ರಮವೂ ಇದೆ. [email protected]ಗೆ ನೀವು ರೆಸಿಪಿಯನ್ನು ಕಳಿಹಿಸಿಕೊಡಬಹುದು. ಪಾರ್ಟಿಯ ಬಗ್ಗೆ ಹೆಚ್ಚಿನ ಮಾಹಿತಿಗೆ 080-26493982 ಸಂಖ್ಯೆಗೆ ಕರೆ ಮಾಡಬಹುದು.

ಮ್ಯಾಂಗೋ ಪಾರ್ಟಿ ವಿವರಗಳು

* ಸ್ಥಳ : ರಂಗ ಶಂಕರ, ಜೆ.ಪಿ.ನಗರ ಬೆಂಗಳೂರು
* ಸಮಯ : ಮಧ್ಯಾಹ್ನ 3 ರಿಂದ 6.30
* ದಿನಾಂಕ : ಮೇ 31, ಭಾನುವಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+