• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ಗೋಲಿಬಾರ್‌ ಗೆ ಆದೇಶಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ

|

ಬೆಂಗಳೂರು, ಡಿಸೆಂಬರ್ 25: ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಸಮಯ ನಡೆದ ಗೋಲಿಬಾರ್‌ ಗೆ ಆದೇಶ ನೀಡಿದ್ದು ಯಡಿಯೂರಪ್ಪ ಎಂಬುದು ಖಾತ್ರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಫೇಸ್‌ಬುಕ್‌ ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ಮಂಗಳೂರು ಗೋಲಿಬಾರ್‌ ನಲ್ಲಿ ಮೃತರಾದವರಿಗೆ ನೀಡಿದ್ದ ಪರಿಹಾರ ಹಿಂಪಡೆದಿರುವ ಯಡಿಯೂರಪ್ಪ ನಿರ್ಧಾರವನ್ನು ಕಟುಮಾತಿನಲ್ಲಿ ಖಂಡಿಸಿದ್ದಾರೆ.

"ಮಂಗಳೂರು ಗೋಲಿಬಾರ್: ಸರ್ಕಾರದಿಂದ ಮೃತರ ಕುಟುಂಬಕ್ಕಿಲ್ಲ ಪರಿಹಾರ"

'ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯ, ಕ್ರೂರಿ, ಕೋಮುವಾದಿ ಆಗಬಾರದು' ಎಂದಿರುವ ಸಿದ್ದರಾಮಯ್ಯ, ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ತನಿಖೆಯ ಮೊದಲೇ ತೀರ್ಪು ನೀಡಿದ್ದಾರೆ ಎಂದಿದ್ದಾರೆ.

'ಮಂಗಳೂರು ಗಲಭೆಗೆ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ತೀರ್ಪು ನೀಡಿರುವ ಮುಖ್ಯಮಂತ್ರಿಗಳೇ, ಸಿಐಡಿ ತನಿಖೆಯ ನಾಟಕ ಯಾಕೆ? ಅದನ್ನು ನಿಲ್ಲಿಸಿಬಿಡಿ. ಈಗ ಖಾತ್ರಿಯಾಗಿದೆ, ಹೆಣ ಬೀಳಿಸಲು ಪೊಲೀಸರಿಗೆ ಆದೇಶ ನೀಡಿದವರು ನೀವೇ ಎಂದು' ಎಂದು ಸಿದ್ದರಾಮಯ್ಯ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮಂಗಳೂರು ಗಲಭೆ ವಿಡಿಯೋ; ಸಿದ್ದರಾಮಯ್ಯ ಹೇಳಿದ್ದೇನು?

ಕೆಲವು ದಿನಗಳ ಹಿಂದಷ್ಟೆ 'ಮಂಗಳೂರು ಗೋಲಿಬಾರ್‌ ಗೆ ಸರ್ಕಾರ ಆದೇಶ ನೀಡಿರಲಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದರು. ಮಂಗಳೂರು ಗೋಲಿಬಾರ್‌ ನಲ್ಲಿ ಸತ್ತಿದ್ದ ಇಬ್ಬರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದರು.

ಮಂಗಳೂರು ಗಲಭೆಗೆ ಮೊದಲೇ ನಡೆದಿತ್ತಾ ಪ್ಲಾನ್..? ಸಿಸಿಟಿವಿಯಲ್ಲಿ ಸೆರೆ

ಆದರೆ ಇಂದು ಮಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, 'ಮಂಗಳೂರು ಗೋಲಿಬಾರ್‌ ನಲ್ಲಿ ಮೃತರಾದವರಿಗೆ ನೀಡಿದ್ದ ಪರಿಹಾರ ರದ್ದು ಮಾಡಲಾಗಿದೆ, ಅವರು ಅಪರಾಧಿಗಳಲ್ಲ ಎಂಬುದು ಸಾಬೀತಾದರೆ ಮಾತ್ರವೇ ಪರಿಹಾರ ನೀಡಲಾಗುವುದು' ಎಂದು ಹೇಳಿದ್ದಾರೆ.

English summary
Former CM Siddaramaiah said that Mangaluru Golibar order was given by Yediyurappa. Siddaramaiah opposed government taking back compensation given to protesters who died in Mangaluru golibar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X