ಸಂಸದೆ ರಮ್ಯಾ ಜತೆ ಹ್ಯಾಂಗ್ ಔಟ್ ಲೈವ್
ಬೆಂಗಳೂರು, ಮಾ.20: ಮಂಡ್ಯಕ್ಷೇತ್ರದ ಸಂಸದೆ, ಕನ್ನಡ ಚಿತ್ರರಂಗದ ಲಕ್ಕಿ ಸ್ಟಾರ್ ರಮ್ಯಾ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವ ಸಂವಾದ ಕಾರ್ಯಕ್ರಮವನ್ನು ಗೂಗಲ್ ಹ್ಯಾಂಗ್ ಔಟ್ ಮೂಲಕ ಪಬ್ಲಿಕ್ ಟಿವಿ ಆಯೋಜಿಸಿದೆ.
ಮಂಡ್ಯ ಕ್ಷೇತ್ರದಲ್ಲಿ ಕಳೆದ ಆಗಸ್ಟ್ ನಲ್ಲಿ ನಡೆದ ಉಪ ಚುನಾವಣೆಗೆ ಸ್ಪರ್ಧಿಸುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದ ರಮ್ಯಾ ಅವರು ಮೊದಲ ಚುನಾವಣೆಯಲ್ಲಿಯೇ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದವರು. ಈಗ 2014ರ ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಾ ತಮ್ಮ ಪ್ರಚಾರ, ಪಾದಯಾತ್ರೆ, ಭಾರತ ನಿರ್ಮಾಣ್ ಸಮಾವೇಶದ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ನೀಡುತ್ತಾ ಬಂದಿದ್ದಾರೆ. ಹೆಚ್ಚಾಗಿ ಟ್ವಿಟ್ಟರ್ ನಲ್ಲಿ ಆಕ್ಟಿವ್ ಆಗಿರುವ ರಮ್ಯಾ ಅವರನ್ನು ಈಗ ಗೂಗಲ್ ಪ್ಲಸ್ ನ ಹ್ಯಾಂಗ್ ಔಟ್ ಗೆ ಕರೆತರಲಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕರ ಜತೆ ನೇರವಾಗಿ ವಿಡಿಯೋ ಸಂವಾದ ನಡೆಸಲಿದ್ದಾರೆ. [ರಮ್ಯಾ ಸಂಕ್ಷಿಪ್ತ ಪರಿಚಯ]
ಮಂಡ್ಯ ಸಂಸದೆ ರಮ್ಯಾ ಅವರಿಗೆ ಕೇಳಲು ನಿಮ್ಮಲ್ಲೂ ಪ್ರಶ್ನೆಗಳಿದ್ದರೆ #askramya ಎಂದು ಟೈಪಿಸಿ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ನೇರ ಪ್ರಸಾರದ ವಿಡಿಯೋ ಲಿಂಕ್ ಇಲ್ಲಿದೆ ತಪ್ಪದೇ ವೀಕ್ಷಿಸಿ...ಲೈವ್ ಸಂವಾದ ವಿಡಿಯೋ ಇಲ್ಲಿ ನೋಡಿ..












Click it and Unblock the Notifications