ಬಾಲಕಿಯ ಜೊತೆ ಅನುಚಿತ ವರ್ತನೆ: ಯುವಕನಿಗೆ ಗೂಸಾ

rape
ಬೆಂಗಳೂರು, ಜು.28: ಏಳು ವರ್ಷದ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೋಣನಕುಂಟೆ ಕ್ರಾಸ್‌ ಸಮೀಪ ಭಾನುವಾರ ರಾತ್ರಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಸೂರಜ್‌(28) ಪೆಟ್ಟು ತಿಂದವ. ಚಿನ್ನಾಭರಣ ಮಾರಾಟ ಮಳಿಗೆಯ ಮಾಲೀಕರ ಪುತ್ರಿ ಮತ್ತು ಅವಳ ತಾತ ರಾತ್ರಿ 8.30ರ ವೇಳೆಗೆ ತರಕಾರಿ ತರಲು ಅಂಗಡಿಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ.[ವಿಬ್ ಗಯಾರ್ ಶಾಲೆ ಆರಂಭ, ಶಾಲೆಗೆ ಬಂದ ಮಕ್ಕಳು]

ಬೈಕಿನಲ್ಲಿ ಬಂದ ಸೂರಜ್‌ ರಸ್ತೆಯಲ್ಲಿ ನಡೆದುಕೊಂದು ಹೋಗುತ್ತಿದ್ದಾಗ ತಾತನನ್ನು ತಳ್ಳಿ ಬಾಲಕಿಯನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ತಾತ ಜೋರಾಗಿ ಬೊಬ್ಬೆ ಹಾಕಿದ್ದಾರೆ. ಸಾರ್ವ‌ಜನಿಕರು ಸ್ಥಳಕ್ಕೆ ಆಗಮಿಸಿ ಸೂರಜ್‌ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಸುಬ್ರಮಣ್ಯಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+