ಬೆಂಗಳೂರು: ಫುಡ್ ಡೆಲಿವರಿ ಮಾಡುವವನಂತೆ ವೇಷ ಧರಿಸಿ ಡ್ರಗ್ಸ್ ಕಳ್ಳಸಾಗಣೆ, ಬಂಧನ

ಬೆಂಗಳೂರು, ಡಿ. 18: ಫುಡ್ ಡೆಲಿವರಿ ಏಜೆಂಟ್ ಸೋಗಿನಲ್ಲಿ ಮಾದಕ ದ್ರವ್ಯ ವಿತರಣೆ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿ ಸೆಂಟ್ರಲ್ ಕ್ರೈಂ ಬ್ರಾಂಚ್‌ ನಡೆಸಿದ ದಾಳಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಬಂಧಿತ ಆರೋಪಿಯ ಗುರುತನ್ನು ಹಂಚಿಕೊಂಡಿಲ್ಲ. ಸದ್ಯಕ್ಕೆ ಬಂಧಿತನ ಸಹಚರರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಅಧಿಕಾರಿಗಳ ತಪಾಸಣೆಯ ವೇಳೆ ಶಂಕಿತ ವ್ಯಕ್ತಿ ಹೊತ್ತೊಯ್ಯುತ್ತಿದ್ದ ಆಹಾರ ವಿತರಣಾ ಬ್ಯಾಗ್‌ನಿಂದ 3 ಕೆಜಿ ಗಾಂಜಾ ಮತ್ತು 0.14 ಗ್ರಾಂ ತೂಕದ 12 ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಸೆಂಟ್ರಲ್ ಕ್ರೈಂ ಬ್ರಾಂಚ್‌ ಹೇಳಿಕೆಯಲ್ಲಿ ತಿಳಿಸಲಾಗಿದೆ.

Man smuggled drugs in disguise as food delivery agent, arrested

ಮಾದಕ ವಸ್ತುಗಳ ಜೊತೆಗೆ ಆ್ಯಪ್ ಆಧಾರಿತ ಜನಪ್ರಿಯ ಆಹಾರ ವಿತರಣಾ ಸಂಸ್ಥೆಗಳ ಟೀ ಶರ್ಟ್‌ಗಳು ಮತ್ತು ಬ್ಯಾಗ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸೆಂಟ್ರಲ್ ಕ್ರೈಂ ಬ್ರಾಂಚ್‌ ಪ್ರಕಾರ, ಪ್ರಕರಣದ ಪ್ರಮುಖ ಶಂಕಿತ ಮತ್ತು ಸರಬರಾಜುದಾರ ತಲೆಮರೆಸಿಕೊಂಡಿದ್ದಾನೆ. "ಪ್ರಮುಖ ಆರೋಪಿ ಮತ್ತು ಎರಡನೇ ಶಂಕಿತ ಆರೋಪಿಗಳಿಬ್ಬರು ಬಿಹಾರ ನಿವಾಸಿಗಳು. ಮೊದಲನೇಯವನು ಆರ್ಡರ್ ಪಡೆದು, ಗಾಂಜಾವನ್ನು ಸರಬರಾಜು ಮಾಡಬೇಕಾದ ಗ್ರಾಹಕರ ಸ್ಥಳದ ಬಗ್ಗೆ ಎರಡನೇ ಆರೋಪಿಗೆ ತಿಳಿಸುತ್ತಿದ್ದರು ಎಂದಿದ್ದಾರೆ.

ಬಳಿಕ ಎರಡನೇ ಆರೋಪಿ ಆಹಾರ ಡೆಲಿವರಿ ಮಾಡುವ ಕಂಪನಿಯ ಟಿ ಶರ್ಟ್ ಧರಿಸಿ, ಆಹಾರ ವಿತರಣಾ ಸಂಸ್ಥೆಗಳ ಚೀಲಗಳಲ್ಲಿ ಸುತ್ತಿ ಪ್ಯಾಕೆಟ್‌ಗಳನ್ನು ಗ್ರಾಹಕರಿಗೆ ತಲುಪಿಸುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Man smuggled drugs in disguise as food delivery agent, arrested

"ಈ ಹಿಂದೆ ಎರಡನೇ ಶಂಕಿತ ಆರೋಪಿ ಆ್ಯಪ್ ಆಧಾರಿತ ಆಹಾರ ವಿತರಣಾ ಸಂಸ್ಥೆಗಳಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು, ಆ ಸಂಸ್ಥೆಗಳಲ್ಲಿ ಕೆಲಸ ಬಿಟ್ಟ ನಂತರ ಅಲ್ಲಿನ ಬಟ್ಟೆ, ಬ್ಯಾಗ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಬ್ಬರೂ ಬಿಹಾರ ಮೂಲದವರಾಗಿದ್ದು, ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು, ಡ್ರಗ್ಸ್ ವಿತರಣೆಗೆ ಆಹಾರ ವಿತರಣಾ ಸೇವೆಯನ್ನು ದುರುಪಯೋಗ ಪಡಿಸಿಕೊಂಡ ಎರಡನೇ ಪ್ರಕರಣ ಇದಾಗಿದೆ. ಅಕ್ಟೋಬರ್ 24, 2021 ರಂದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಭೇದಿಸಿದ್ದ ಪ್ರಕರಣವೊಂದರಲ್ಲಿಯೂ ಹೀಗೆ ಆಗಿತ್ತು. ಅಂದಿನ ಗ್ಯಾಂಗ್ ಸದಸ್ಯರು ಆಹಾರ ವಿತರಣಾ ಏಜೆಂಟ್‌ಗಳಂತೆ ನಟಿಸಿ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+