ನೀವು ಮನುಷ್ಯರಾಗಿದ್ದರೆ ಪೊಟಾಟೊ ಎಂದು ಟೈಪ್ ಮಾಡಿ: Uberಗೆ ವ್ಯಕ್ತಿಯ ಸವಾಲು, ಉತ್ತರ ನೋಡಿ ನೆಟ್ಟಿಗರು ಕಂಗಾಲು

ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಕಂಪನಿಗಳು ತಮ್ಮ ಗ್ರಾಹಕರ ಸಮಸ್ಯೆಗಳನ್ನ ಆಲಿಸಲು ಕೃತಕ ಬುದ್ಧಿಮತ್ತೆ ಅಥವಾ ಆಟೋಮೇಟೆಡ್ ವ್ಯವಸ್ಥೆಯನ್ನ ಅವಲಂಬಿಸಿವೆ. ಆದರೆ, ಈ ಯಾಂತ್ರಿಕ ಗ್ರಾಹಕ ಸೇವಾ ವ್ಯವಸ್ಥೆಗಳು ಕೆಲವೊಮ್ಮೆ ಗ್ರಾಹಕರ ತಾಳ್ಮೆ ಪರೀಕ್ಷಿಸುತ್ತವೆ ಎಂದರೆ ತಪ್ಪಲ್ಲ. ಗ್ರಾಹಕರು ಕೇಳುವ ಪ್ರಶ್ನೆಗೂ, ಅಲ್ಲಿಂದ ಬರುವ ಉತ್ತರಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಇಂತಹದ್ದೇ ಒಂದು ತಮಾಷೆಯ ಪ್ರಸಂಗವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಉಬರ್ ಕಂಪನಿಯ ಕಸ್ಟಮರ್‌ ಸಪೋರ್ಟ್‌ ವಿಭಾಗವು ನಿಜಕ್ಕೂ ಮನುಷ್ಯರಿಂದ ನಡೆಯುತ್ತಿದೆಯಾ ಅಥವಾ ಕೇವಲ ರೋಬೋಟ್‌ಗಳೇ ಉತ್ತರಿಸುತ್ತಿವೆಯಾ ಎಂದು ಪರೀಕ್ಷಿಸಲು ವ್ಯಕ್ತಿಯೊಬ್ಬರು ಮಾಡಿದ ವಿನೂತನ ಪ್ರಯೋಗ ಇದೀಗ ವೈರಲ್ ಆಗಿದೆ.

Man Asks Uber Support to Say Potato to Prove They Are Human Gets Hilarious Automated Reply Instead

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಎಕ್ಸ್ ವೈರಲ್ ಪೋಸ್ಟ್

ಡೇರಿಯನ್ ಎಂಬ ಎಕ್ಸ್ ಬಳಕೆದಾರರೊಬ್ಬರು ಉಬರ್ ಗ್ರಾಹಕ ಸೇವಾ ಕೇಂದ್ರದ ಕಾರ್ಯವೈಖರಿಯಿಂದ ಬೇಸತ್ತು ಒಂದು ತಮಾಷೆಯ ಸವಾಲನ್ನು ಹಾಕಿದ್ದರು. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಉಬರ್ ಸಪೋರ್ಟ್ ಅನ್ನು ಟ್ಯಾಗ್ ಮಾಡಿದ ಅವರು, "ನಿಮ್ಮ ಗ್ರಾಹಕ ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಒಬ್ಬರಾದರೂ ಮನುಷ್ಯರಿದ್ದರೆ, 'ಪೊಟಾಟೊ' (Potato) ಎಂದು ಟೈಪ್ ಮಾಡಿ ಕಳುಹಿಸಿ" ಎಂದು ಅತ್ಯಂತ ಸರಳವಾದ ವಿನಂತಿಯನ್ನ ಮಾಡಿದ್ದರು.

ಈ ಪೋಸ್ಟ್‌ನ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ತಮಗೆ ಉತ್ತರ ನೀಡುತ್ತಿರುವುದು ರೋಬೋಟ್ ಅಲ್ಲ, ಬದಲಾಗಿ ಒಬ್ಬ ಮನುಷ್ಯ ಎಂಬುದನ್ನ ಖಚಿತಪಡಿಸಿಕೊಳ್ಳುವುದು. ಆದರೆ, ಆ ಕಡೆಯಿಂದ ಬಂದ ಪ್ರತಿಕ್ರಿಯೆ ಮಾತ್ರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವಂತಿತ್ತು.

ಸವಾಲಿಗೆ ಪ್ರತಿಕ್ರಿಯಿಸಲು ವಿಫಲವಾದ ಉಬರ್

ಡೇರಿಯನ್ ಅವರ 'ಪೊಟಾಟೊ' ಸವಾಲಿಗೆ ಉಬರ್ ಸಂಸ್ಥೆ ನೀಡಿದ ಉತ್ತರ ನೋಡಿ ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ. ಗ್ರಾಹಕ ಕೇಳಿದ ಒಂದೇ ಒಂದು ಪದವನ್ನು ಟೈಪ್ ಮಾಡುವ ಬದಲು, ಉಬರ್ ಸಪೋರ್ಟ್ ಖಾತೆಯು ಸಂಪೂರ್ಣವಾಗಿ ಸಂಬಂಧವೇ ಇಲ್ಲದ ಒಂದು ದೊಡ್ಡ ಪ್ಯಾರಾಗ್ರಾಫ್ ಅನ್ನು ಉಬರ್ ಆಟೋಮೇಟೆಡ್ ಉತ್ತರ ಆಗಿ ನೀಡಿದೆ.

"ನಿಮಗಾಗಿರುವ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಖಾತೆಯ ವಿವರಗಳು ಮತ್ತು ವಹಿವಾಟಿನ ಹಿಸ್ಟರಿಯನ್ನ ನಾವು ಪರಿಶೀಲಿಸಿದ್ದೇವೆ. ಆದರೆ, ಈ ಆರ್ಡರ್‌ಗೆ ಸಂಬಂಧಿಸಿದಂತೆ ನಿಮಗೆ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ" ಎಂದು ಕೇವಲ ಕಾಪಿ-ಪೇಸ್ಟ್ ಮಾಡಿದಂತಹ ಆಟೋಮೇಟೆಡ್ ಉತ್ತರವನ್ನ ನೀಡಿದೆ.

ಗ್ರಾಹಕ ಕೇಳಿದ್ದೇನು, ಕಂಪನಿ ಹೇಳಿದ್ದೇನು ಎಂಬುದು ಇಲ್ಲಿ ಸ್ಪಷ್ಟವಾಗಿ ಕಂಡು ಬಂದಿದ್ದು, ಉಬರ್‌ನ ಈ ಪ್ರತಿಕ್ರಿಯೆ ಆಟೋಮೇಟೆಡ್ ವ್ಯವಸ್ಥೆಯ ದೊಡ್ಡ ವೈಫಲ್ಯವನ್ನ ಎತ್ತಿತೋರಿಸಿದೆ.

ನೆಟ್ಟಿಗರ ವ್ಯಂಗ್ಯ

ಉಬರ್ ನೀಡಿದ ಈ ಹಾಸ್ಯಾಸ್ಪದ ಉತ್ತರವು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಕಂಪನಿಯನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಉಬರ್ ಸಂಸ್ಥೆಯ ಗ್ರಾಹಕ ಸೇವೆ ಎಷ್ಟು ಕಳಪೆಯಾಗಿದೆ ಎಂಬುದಕ್ಕೆ ಇದೇ ಅತ್ಯುತ್ತಮ ಉದಾಹರಣೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

"ಗ್ರಾಹಕರ ಸಮಸ್ಯೆಗಳನ್ನ ಆಲಿಸುವ ಬದಲು, ಕೇವಲ ಕಾಪಿ-ಪೇಸ್ಟ್ ಉತ್ತರಗಳನ್ನ ನೀಡುವುದರಲ್ಲೇ ಇಂತಹ ಕಂಪನಿಗಳು ನಿರತವಾಗಿವೆ, ಇದು ಸ್ಪಷ್ಟವಾದ ಗ್ರಾಹಕ ಸೇವೆ ವೈಫಲ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಾ, "ಉಬರ್ ಸಂಸ್ಥೆ 'ಪೊಟಾಟೊ' ಎಂಬ ಪದವನ್ನು ಬಹಳ ತಪ್ಪಾಗಿ ಸ್ಪೆಲ್ ಮಾಡಿದೆ" ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು "ಗ್ರಾಹಕರು ನೀಡುವ ಒಂದು ಸಾಮಾನ್ಯ ಸೂಚನೆಯನ್ನೂ ಅರ್ಥಮಾಡಿಕೊಳ್ಳಲಾಗದ ಇಂತಹ ಗ್ರಾಹಕ ಸೇವೆ ಇದ್ದರೂ ಏನು ಪ್ರಯೋಜನ?" ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ, ಆಟೋಮೇಟೆಡ್ ವ್ಯವಸ್ಥೆಗಳು ಎಷ್ಟೇ ಮುಂದುವರಿದಿದ್ದರೂ, ಮಾನವ ಸ್ಪರ್ಶವಿಲ್ಲದ ಗ್ರಾಹಕ ಸೇವೆಯು ಇಂತಹ ಪ್ರಮಾದಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನ ಈ ಘಟನೆ ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+