ಆಯಸ್ಕಾಂತದ ಚೂರುಗಳನ್ನು ನುಂಗಿದ್ದ ಮಗು ಪವಾಡದಂತೆ ಪಾರು
ಬೆಂಗಳೂರು, ಜೂನ್ 19: ಆಟವಾಡುವಾಗ ಎರಡು ಆಯಸ್ಕಾಂತದ ಚೂರುಗಳನ್ನು ನುಂಗಿದ್ದ 2 ವರ್ಷದ ಮಗು ಪವಾಡವೆಂಬಂತೆ ಬದುಕುಳಿದಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಮೇ ತಿಂಗಳಿನಲ್ಲಿ ನಡೆದಿದ್ದು ಈಗ ಬೆಳಕಿಗೆ ಬಂದಿದೆ.
ಮರುದಿನ ಎಕ್ಸ್‌ರೇ ಮಾಡಿದಾಗ ಮಗುವಿನ ಹೊಟ್ಟೆಯಲ್ಲಿ ಎರಡು ಆಯಸ್ಕಾಂತದ ಚೂರು ಇರುವುದು ಕಂಡುಬಂದಿತ್ತು. ಮೊದಲ ಎಕ್ಸ್‌ರೇಯಲ್ಲಿ ಮಗುವಿನ ಹೊಟ್ಟೆಯಲ್ಲಿ ಆಯಸ್ಕಾಂತದ ಚೂರುಗಳು ಇರುವುದು ಕಂಡುಬಂದಿದ್ದರೆ ಎರಡನೇ ಎಕ್ಸ್‌ರೇಯಲ್ಲಿ ಕರುಳಿನೊಳಗೆ ಇರುವುದು ದೃಢಪಟ್ಟಿತ್ತು. ಆದಷ್ಟು ಬೇಗ ಅದನ್ನು ತೆಗೆಯದಿದ್ದರೆ ಮಗುವಿನ ಜೀವಕ್ಕೆ ಅಪಾಯ ಎಂದು ಮನದಟ್ಟಾಗಿತ್ತು.

ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಎರಡೂ ಆಯಸ್ಕಾಂತವನ್ನು ಹೊರತೆಗೆಯಲಾಯಿತು. ಇದು 6 ಎಂಎಂನಷ್ಟಿದ್ದರೂ, ಅದರ ಪ್ರಭಾವ ಹೆಚ್ಚಿತ್ತು. ಮಕ್ಕಳಿಂದ ಇಂತಹ ವಸ್ತುಗಳನ್ನು ದೂರವಿಡಬೇಕು, ಒಂದೊಮ್ಮೆ ಒಂದೇ ಆಯಸ್ಕಾಂತವನ್ನು ನುಂಗಿದ್ದರೆ ತನ್ನಿಂತಾನೆ ಬರುತ್ತಿತ್ತು.
ಆದರೆ ಎರಡೂ ಆಯಸ್ಕಾಂತಗಳನ್ನು ನುಂಗಿದ್ದರಿಂದ ಅದರ ಗುಣದಂತೆ ಒಂದನ್ನೊಂದು ಆಕರ್ಷಿಸುತ್ತವೆ. ಹೀಗಾಗಿ ಜೀವಕ್ಕೆ ಅಪಾಯವಿತ್ತು ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications