Operation Sindoor: ಭಾರತ-ಪಾಕಿಸ್ತಾನ ದಾಳಿಗೆ ಬೆಂಗಳೂರಿನ ನಂಟು..
ಬೆಂಗಳೂರು, ಮೇ 08: ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಸೈಟ್‌ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದೆ. ಈ ವೇಳೆ ಯುದ್ಧಕ್ಕೆ ಬಳಸಿದ್ದ ಒಂದಷ್ಟು ಸಾಧನಗಳು ಬೆಂಗಳೂರಿನವು ಎಂಬುದು ಗೊತ್ತಾಗಿದೆ. ಈ ಮೂಲಕ ಭಾರತ-ಪಾಕಿಸ್ತಾನ ಯುದ್ಧಕ್ಕೆ ಕರ್ನಾಟಕವು ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದಂತಾಗಿದೆ. ಬೆಂಗಳೂರಿನಲ್ಲಿ ತಯಾರಿಸಲಾದ ಯುದ್ಧ ಸಲಕರಣೆಗಳು 'ಆಪರೇಷನ್ ಸಿಂದೂರ' (Operation Sindoor) ಕಾರ್ಯಾಚರಣೆಯಲ್ಲಿ ಬಳಕೆ ಆಗಿವೆ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಲು ಭಾರತೀಯ ಸಶಸ್ತ್ರ ಪಡೆಗಳು ಬಳಸಿದ ಯುದ್ಧ ಸಾಮಗ್ರಿಗಳಲ್ಲಿ ಆತ್ಮಹತ್ಯಾ ಡ್ರೋನ್ ಅಥವಾ ಕಾಮಿಕಾಜ್ ಡ್ರೋನ್‌ಗಳು ಬೆಂಗಳೂರಿನಲ್ಲಿ ತಯಾರಿಸಲ್ಪಟ್ಟಿವೆ. ಇವುಗಳು ಸೂಚಿತ ಗುರಿಗಳನ್ನು ತಲುಪಿ ನಾಶಮಾಡುವ ಸಾಮರ್ಥ್ಯ ಹೊಂದಿವೆ. ಯುದ್ಧ ವೇಳೆ ಭಾರೀ ಪರಿಣಾಮ ಬೀರಬಲ್ಲ ಸಾಧನಗಳು ಎಂದು ತಿಳಿದು ಬಂದಿದೆ.

ಯುದ್ಧದ ಸಂದಭದಲ್ಲಿ ವಿಶೇಷ ಪಾತ್ರವ ಹಿಸಿವು ಆತ್ಮಹತ್ಯಾ ಅಥವಾ ಕಾಮಿಕಾಜ್ ಡ್ರೋನ್‌ಗಳು ಎಂದೂ ಕರೆಯಲಾಗುವ ಈ ಸಾಧನಗಳು ಬೆಂಗಳೂರು ಮೂಲದ ಖಾಸಗಿ ಕಂಪನಿಯು ಅಭಿವೃದ್ಧಿಪಡಿಸಿದೆ. ಇಸ್ರೇಲ್ ನ ಮಿಲಿಟರಿ ತಂತ್ರಜ್ಞಾನ ಕಂಪನಿ ಜೊತೆಗೆ ಜಂಟಿಯಾಗಿ ಈ ಸಾಧನ ತಯಾರಿಸಿದೆ. ಈ ಡ್ರೋನ್ ಸಾಧನಗಳು ಸ್ವಯಂ ಆಗಿ ಕಾರ್ಯ ನಿರ್ವಹಿಸಬಲ್ಲ ಅಂದರೆ ಮಾನವರಹಿತ ವೈಮಾನಿಕ ವಾಹನ ವ್ಯವಸ್ಥೆ (UAS) ಹೊಂದಿವೆ. ವಿಮಾನದಿಂದಲೇ ಹಾರಲು ಬಿಟ್ಟರೆ ಸಾಕು, ಗೊತ್ತು ಪಡಿಸಿದ ಗುರಿ ತಲುಪಿ ಹಾನಿ ಮಾಡಲ್ಲ ಶಕ್ತಿ ಹೊಂದಿವೆ. ಇವುಗಳು ನಿಖರ ಕಾರ್ಯಕ್ಷಮತೆ ಹೊಂದಿರುವ ಕಾರಣಕ್ಕೆ ಯುದ್ಧಗಳಲ್ಲಿ ಹೆಚ್ಚಿನ ಬಳಕೆ ಆಗುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಕೆಲವು ವರ್ಷಗಳ ಹಿಂದಿನ ಏರೋ ಇಂಡಿಯಾದಲ್ಲಿ, ಬೆಂಗಳೂರು ಹಾಗೂ ಇಸ್ರೇಲ್ ಕಂಪನಿಗಳು ಈ ಉತ್ಪಾದನಾ ಸಾಧನ ತಯಾರಿಕೆಗೆ ಒಪ್ಪಂದ ಮಾಡಿಕೊಂಡಿದ್ದವು. ಪರಸ್ಪರ ಸಹಕರಿಸುವಾಗಿ ಒಪ್ಪಿಕೊಂಡು ಸಹಿಹಾಕಿದ್ದವು.
ಮಹತ್ವದ ಒಪ್ಪಂದಂತೆ ಯುದ್ಧೋಪಯೋಗಿ ಡ್ರೋನ್‌ಗಳ ತಯಾರಿಕೆ ಆರಂಭವಾಯಿತು. ಒಂದೇ ವರ್ಷದಲ್ಲಿ ಭಾರತೀಯ ರಕ್ಷಣಾ ಪಡೆ (ಸೇನಾ ಪಡೆ) ಬೆಂಗಳೂರಿನ ಈ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿತು. ಅದರ ಅಡಿಯಲ್ಲಿ ಬೆಂಗಳೂರು 100 ಕ್ಕೂ ಹೆಚ್ಚು ಪೂರೈಕೆ ಮಾಡುವುದಾಗಿ ತಿಳಿಸಿತ್ತು. ಅದರ ಪ್ರತಿಫಲವಾಗಿಯೇ ಇಂದಿನ ಸಿಂದೂರ ಆಪರೇಷನ್‌ನಲ್ಲಿ ಬೆಂಗಳೂರು ತಯಾರಿಕೆಯ ಡ್ರೋನ್ ಬಳಕೆ ಆಗಿವೆ..












Click it and Unblock the Notifications