ಮಹಿಳೆಯರಿಗೆ ನೇಯ್ಗೆ ಮತ್ತು ಕುಚ್ಚು ಕರಕುಶಲ ತರಬೇತಿ
ಬೆಂಳೂರು, ಮೇ 18: ಪ್ರಾಜೆಕ್ಟ್ ಈವ್ ಸಂಸ್ಥೆಯು ಮಹಿಳೆಯರಿಗೆ ನೇಯ್ಗೆ ಮತ್ತು ಕುಚ್ಚು ಕರಕುಶಲ ತರಬೇತಿ 'ದಿ ಸೆಶನ್ಸ್' ನ್ನು ಮೇ 19ರಂದು ಜಯನಗರದಲ್ಲಿರುವ ಮಳಿಗೆಯಲ್ಲಿ ಹಮ್ಮಿಕೊಂಡಿದೆ.
ಮನೆಯ ಗೋಡೆಯನ್ನು ಆಕರ್ಷಕವಾಗಿಸಲು ಮ್ಯಾಕ್ರಮಿಯನ್ನು ಹೆಣೆಯುವುದು ಹೇಗೆ ಎನ್ನುವ ಕುರಿತು ತಜ್ಞರಿಂದ ಮಾಹಿತಿ ದೊರೆಯಲಿದೆ. ಮಹಿಳೆಯರಿಗೆ ಇದರಿಂದ ಸಾಕಷ್ಟು ಸಹಾಯವಾಗಲಿದೆ. ಈ ಕಾರ್ಯಾಗಾರ ಸಂಪೂರ್ಣ ಉಚಿತವಾಗಿರುತ್ತದೆ. ಕಾರ್ಯಾಗಾರಕ್ಕೆ ಬೇಕಾದ ವಸ್ತುಗಳನ್ನು ಅಲ್ಲಿಯೇ ಒದಗಿಸಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.

ಮ್ಯಾಕ್ರಾಮಿಯನ್ನು ತಯಾರಿಸುವುದು ಬಹಳ ಸುಲಭ ಆದರೆ ಪ್ರಾಥಮಿಕ ತರಬೇತಿಯ ಅಗತ್ಯವಿರುತ್ತದೆ. ಮ್ಯಾಕ್ರಾಮಿಯಿಂದ ತಯಾರಿಸಿದ ಆಕರ್ಷಕ ವಸ್ತುಗಳಿಂದ ಮನೆಯ ಗೋಡೆಯ ಅಂದವನ್ನು ಹೆಚ್ಚಿಸಬಹುದಾಗಿದೆ.












Click it and Unblock the Notifications