Industry Development: ಎಂಬಿ ಪಾಟೀಲ್ 2026ರಲ್ಲಿ ಸಿಂಗಾಪುರ ಭೇಟಿ: ನಿರೀಕ್ಷೆಗಳೇನು?

ಬೆಂಗಳೂರು, ನವೆಂಬರ್ 12: ಜಪಾನ್, ಜರ್ಮನಿ, ದಕ್ಷಿಣ ಕೋರಿಯಾ ಸೇರಿದಂತೆ ವಿದೇಶಗಳಿಗೆ ಕೈಗಾರಿಕಾ ಉದ್ದೇಶದಿಂದ ಭೇಟಿ ನೀಡಿದ್ದ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಮುಂದಿನ ವರ್ಷ 2026ರ ಪ್ರಥಮಾರ್ಧದಲ್ಲಿ ಸಿಂಗಾಪುರ್‌ಗೆ ಭೇಟಿ ನೀಡಲಿದ್ದಾರೆ. ಈ ಬಾರಿಯ ಹೆಚ್ಚಿನ ಪ್ರಮಾಣ ಹೂಡಿಕೆ ಆಕರ್ಷಣೆ ಜೊತೆಗೆ ಒಂದಷ್ಟು ಒಪ್ಪಂದ, ವಿವಿಧ ವಲಯಗಳ ಅಭಿವೃದ್ಧಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ.

ಹೌದು, ಆಸಿಯಾನ್ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ ಮಾಡುತ್ತಿರುವ ಸಿಂಗಪುರ ಜತೆ ಕೈಗಾರಿಕಾ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಒಳ್ಳೆಯ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರಲ್ಲಿ ಸಿಂಗಾಪುರ್‌ಗೆ ಭೇಟಿ ನೀಡಲಾಗುವುದು. ಅದಕ್ಕೂ ಪೂರ್ವದಲ್ಲಿ ದ್ವಿಪಕ್ಷೀಯ ಕೈಗಾರಿಕಾ ಬಾಂಧವ್ಯ ವರ್ಧನೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಬುಧವಾರ ಸಚಿವರು ಮಾಹಿತಿ ನೀಡಿದ್ದಾರೆ.

M B Patil Plans 2026 Singapore Visit to Strengthen Industrial Ties Know Invest Expections

ಬೆಂಗಳೂರಿನ ಖನಿಜ ಭವನದಲ್ಲಿ ಭೇಟಿಯಾದ ಸಿಂಗಪುರದ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆಗಳ ಸಹಾಯಕ ಸಚಿವೆ ಗಾನ್ ಸಿಯೋವೋ ಹುವಾಂಗ್ ಅವರು ಸಚಿವರನ್ನು ಭೇಟಿಯಾದರು. ಈ ವೇಳೆ ಬಂಡವಾಳ ಹೂಡಿಕೆ ಮತ್ತು ಸಹಭಾಗಿತ್ವ ಕುರಿತು ಅವರು ಮಾತುಕತೆ ನಡೆಸಿದರು. ಸಿಂಗಾಪುರ್ ಸರ್ಕಾರವು ಇಲ್ಲಿ ಹೊಸದಾಗಿ ನಿರ್ಮಿಸಿರುವ "ಎಂಟರಪ್ರೈಸ್ ಸಿಂಗಪುರ್' ಕೇಂದ್ರದ ಉದ್ಘಾಟನೆಗಾಗಿ ಗಾನ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಇವರು, ಸಿಂಗಾಪುರದ ವಾಯುಪಡೆಯ ಮುಖ್ಯಸ್ಥರಾಗಿ (ಬ್ರಿಗೇಡಿಯರ್) ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ನಮ್ಮಿಂದ ಸಿಂಗಪುರದ ಕಂಪನಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಗಬೇಕಾದದ್ದು ಏನು?ಆ ದೇಶದಲ್ಲಿರುವ ನಮ್ಮಲ್ಲಿನ ಕಂಪನಿಗಳಿಗೆ ಅಲ್ಲಿಯ ಸರ್ಕಾರ ಮಟ್ಟದಲ್ಲಿ ಯಾವ ಕೆಲಸಗಳಾಗಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಾಯಿತು. ವೈಮಾನಿಕ ಕ್ಷೇತ್ರದಲ್ಲಿ ಪ್ರಮುಖವಾಗಿರುವ ಎಂ.ಆರ್.ಒ. ವಲಯದಲ್ಲಿ ಸಿಂಗಪುರ್ ಹೆಸರುವಾಸಿಯಾಗಿದೆ. ಈ ಕ್ಷೇತ್ರದಲ್ಲಿ ರಾಜ್ಯಕ್ಕೆ ಸಹಾಯ ಮಾಡುವ ಭರವಸೆಯನ್ನು ಗಾನ್ ಅವರು ನೀಡಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಔಷಧಿ ತಯಾರಿಕ, ಸೆಮಿಕಂಡಕ್ಟರ್,ಚಿಪ್ ವಿನ್ಯಾಸ, ಫಿನ್-ಟೆಕ್ ಸೇರಿದಂತೆ ಇನ್ನಿತರ ವಲಯಗಳಲ್ಲಿ ಸಾಕಷ್ಟು ಹೂಡಿಕೆ ಮಾಡಲು ಅವಕಾಶಗಳು ಇವೆ. ಈ ಬಗ್ಗೆ ಸಿಂಗಾಪುರ ಪ್ರತಿನಿಧಿಗಳಿಗೆ ಅರಿವು ಮೂಡಿಸಲಾಯಿತು. ಸದ್ಯ ಅರಂಭಿಕ ಹಂತದಲ್ಲಿದ್ದು, ಎರಡು ಕಡೆಗೂ ಉಪಯೋಗವಾಗುವಂತೆ ಒಂದು ಭೂಮಿಕೆ ರೂಪಿಸಲಾಗುವುದೆಂದು ಅವರು ಹೇಳಿದರು.

174.88 ಬಿಲಿಯನ್ ಡಾಲರ್ ಹೂಡಿಕೆ

ಬೆಂಗಳೂರು ಮತ್ತು ಸಿಂಗಪುರ ನಡುವೆ ಅನೇಕ ವಿಷಯಗಳಲ್ಲಿ ಸಾಮ್ಯತೆ ಇದೆ. ಎರಡೂ ನಗರಗಳು ವಿಶ್ವದರ್ಜೆಯ ನಗರಗಳು. ಹೀಗಾಗಿ ಪರಸ್ಪರ ಸಹಭಾಗಿತ್ವದ ಸಮನ್ವಯಕ್ಕೆ ಒತ್ತು ನೀಡಲಾಗುವುದು. 2020ರಿಂದ ಇಲ್ಲಿಯವರೆಗೆ ಸಿಂಗಾಪುರದ ಕಂಪನಿಗಳು ಭಾರತದಲ್ಲಿ 174.88 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಇದು ದೇಶಕ್ಕೆ ಹರಿದು ಬಂದಿರುವ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಶೇ.24ರಷ್ಟಿದೆ. ಆ ದೇಶದಲ್ಲಿ 9 ಸಾವಿರಕ್ಕೂ ಹೆಚ್ಚು ಭಾರತೀಯ ಕಂಪನಿಗಳಿವೆ. ಸಿಂಗಪುರದ 440 ಕಂಪನಿಗಳು ಭಾರತದಲ್ಲಿ ಸಕ್ರಿಯವಾಗಿವೆ ಎಂದು ಅವರು ವಿವರಿಸಿದರು.

ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಭೇಟಿ

ರಾಜ್ಯದಲ್ಲಿ ಶಿಕ್ಷಣ, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ಆಧುನಿಕ ತಯಾರಿಕೆ, ವೈಮಾಂತರಿಕ್ಷ, ರಕ್ಷಣೆ, ಪರಿಸರಸ್ನೇಹಿ ಮತ್ತು ಮರುಬಳಕೆ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಸಂಬಂಧ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್-ಗೀಚಿ ಅವರು ಸಚಿವ ಎಂ ಬಿ ಪಾಟೀಲರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+