ಇದು ಮಹಾ ಫಲಿತಾಂಶದ ತಿಂಗಳು; ಎಲ್ಲರ ಚಿತ್ತ ಇಲ್ಲಿದೆ
ಬೆಂಗಳೂರು, ಮೇ 2- ಇದು ಮಹಾ ಫಲಿತಾಂಶದ ತಿಂಗಳು. ಇಂದಿನ ಅಕ್ಷಯ ದಿನ ಮುಂದೆ ಅಕ್ಷಯ ತಿಂಗಳೂ ಆಗುವ ಸಾಧ್ಯತೆ. ಭಾರತದಮಟ್ಟಿಗೆ ಹೇಳುವುದಾದರೆ ಇದೇ 16ರಂದು ಅತ್ಯಂತ ಮಹತ್ವದ ಘಳಿಗೆ!
ಹಾಗಾಗಿಯೇ ಸಕಲ ಸಿದ್ಧತೆ ನಡೆದಿದೆ. ಬಹುತೇಕ ಚುನಾವಣೆಗಳು ಮುಗಿಯುತ್ತಾ ಬಂದಿದೆ. ಇನ್ನೇನಿದ್ದರೂ ಫಲಿತಾಂಶಕ್ಕಾಗಿ ಕಾಯುವ ಸಮಯ. ಏಪ್ರಿಲ್ 17ರಂದು ರಾಜ್ಯದಲ್ಲಿ ನಡೆದ 28 ಲೋಕಸಭಾ ಚುನಾವಣೆಗಳ ಫಲಿತಾಂಶವೂ ಮೇ 16ರಂದು ಬಹಿರಂಗವಾಗಲಿದೆ. (ಈ ಬಾರಿ ಚುನಾವಣೆ ಭವಿಷ್ಯ ಹೇಳಿ 10 ಲಕ್ಷ ರೂ ಗೆಲ್ಲಿ!)
ಅದಕ್ಕಾಗಿ ರಾಜ್ಯದಲ್ಲಿ ಒಟ್ಟು 28 ಕೇಂದ್ರಗಳು ಸಜ್ಜಾಗಿದ್ದು, ಚುನಾವಣಾ ಆಯೋಗ 28 ಮತ ಎಣಿಕೆ ಕೇಂದ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸೋ, ಎಲ್ಲರ ಚಿತ್ತ ಈ ಇಪ್ಪತ್ತೆಂಟೂ ಮತ ಎಣಿಕೆ ಕೇಂದ್ರಗಳತ್ತ ನೆಟ್ಟಿವೆ. ಮೇ 16ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಬಹಿರಂಗವಾಗಲಿದೆ.

2. ಬೆಳಗಾವಿ - ಬಾವೂರಾವ್ ಕಾಕತ್ಕರ್ ಕಾಲೇಜು
3. ಬಾಗಲಕೋಟೆ - ಶ್ರೀ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು
4. ಬಿಜಾಪುರ - ಸೈನಿಕ್ ಶಾಲೆ ಕ್ಯಾಂಪಸ್
5. ಗುಲ್ಬರ್ಗ - ಗುಲ್ಬರ್ಗ ವಿಶ್ವವಿದ್ಯಾಲಯ
6. ರಾಯಚೂರು - ಎಸ್ಆರ್ ಪಿಎಸ್ ಕಾಲೇಜು ಮತ್ತು ಎಲ್‌ವಿಡಿ ಕಾಲೇಜು
7. ಬೀದರ್ - ಬಿವಿಬಿ ಕಾಲೇಜು ಮತ್ತು ಬಸವೇಶ್ವರ ಬಿಇಡಿ ಕಾಲೇಜು
8. ಕೊಪ್ಪಳ - ಶ್ರೀ ಗವಿಸಿದ್ದೇಶ್ವರ ಕಾಲೇಜು
9. ಬಳ್ಳಾರಿ - ರಾವ್ ಬಹದ್ದೂರ್ ಎಲ್ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು
10. ಹಾವೇರಿ - ದೇವಗಿರಿ ಸರಕಾರಿ ಇಂಜಿನಿಯರಿಂಗ್ ಕಾಲೇಜು
11. ಧಾರವಾಡ - ಕೃಷಿ ವಿಶ್ವವಿದ್ಯಾಲಯ
12. ಉತ್ತರ ಕನ್ನಡ - ಡಾ. ಎವಿ ಬಾಳಿಗ ಕಾಲೇಜು, ಕುಮಟಾ
13. ದಾವಣಗೆರೆ - ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು
14. ಶಿವಮೊಗ್ಗ - ಎಸ್ಆರ್ ನಾಗಪ್ಪಶೆಟ್ಟಿ ಕಾಲೇಜು ಮತ್ತು ನ್ಯಾಷನಲ್ ಪಿಯು ಕಾಲೇಜು
15. ಉಡುಪಿ-ಚಿಕ್ಕಮಗಳೂರು - ಟಿಎ ಪೈ ಹೈಸ್ಕೂಲು, ಕುಂಜುಬೆಟ್ಟು
16. ಹಾಸನ - ಸರಕಾರಿ ಇಂಜಿನಿಯರಿಂಗ್ ಕಾಲೇಜು
17. ದಕ್ಷಿಣ ಕನ್ನಡ - ಮಹಾತ್ಮ ಗಾಂಧಿ ಶತಮಾನೋತ್ಸವ ಕಾಲೇಜು, ಬೋಂದೇಲ್
18. ಚಿತ್ರದುರ್ಗ - ಸರಕಾರಿ ಕಲಾ ಕಾಲೇಜು ಮತ್ತು ಸರಕಾರಿ ಬಾಲಕರ ಕಾಲೇಜು
19. ತುಮಕೂರು - ತುಮಕೂರು ವಿವಿ ವಿಜ್ಞಾನ ಕಾಲೇಜು
20. ಮಂಡ್ಯ - ಸರಕಾರಿ ಕಾಲೇಜು
21. ಮೈಸೂರು - ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು
22. ಚಾಮರಾಜನಗರ - ಸರಕಾರಿ ಇಂಜಿನಿಯರಿಂಗ್ ಕಾಲೇಜು
23. ಬೆಂಗಳೂರು ಗ್ರಾ - ಸರಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ
24. ಬೆಂಗಳೂರು (ಉ) - ಗೃಹ ವಿಜ್ಞಾನ ಕಾಲೇಜು, ಶೇಷಾದ್ರಿ ರಸ್ತೆ, ಬೆಂಗಳೂರು
25. ಬೆಂಗಳೂರು (ಸೆಂಟ್ರಲ್) - ಆರ್ ಸಿ ಕಾಲೇಜು, ಅರಮನೆ ರಸ್ತೆ, ಬೆಂಗಳೂರು
26. ಬೆಂಗಳೂರು ದಕ್ಷಿಣ - ಎಸ್ಎಸ್ಎಂಆರ್ ವಿ ಕಾಲೇಜು, ಟಿ ಬ್ಲಾಕ್ ಜಯನಗರ, ಬೆಂಗಳೂರು
27. ಚಿಕ್ಕಬಳ್ಳಾಪುರ - ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜು, ಬಿಡಿಗಾನಹಳ್ಳಿ
28. ಕೋಲಾರ - ಸರಕಾರಿ ಬಾಲಕರ ಕಾಲೇಜು, ಗೌರಿಪೇಟೆ












Click it and Unblock the Notifications