ಆಕೆ ಗುಡ್ ನ್ಯೂಸ್ ಕೊಟ್ಲು, ವಿಷಯ ಕೇಳಿ ಪ್ರಿಯಕರ ಪರಾರಿ

ಬೆಂಗಳೂರು, ಜುಲೈ 12: ಪ್ರೇಯಸಿ ತಾಯಿಯಾಗುತ್ತಿದ್ದಾಳೆ ಎಂದು ತಿಳಿದ ತಕ್ಷಣ ಪ್ರಿಯಕರ ಓಡಿ ಹೋಗಿರುವ ಘಟನೆ ಬೆಂಗಳೂರಲ್ಲಿ ನಡೆದಿದ್ದು ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಆಕೆ ತಾನು ತಾಯಿಯಾಗುತ್ತಿರುವ ಸಂತಸವನ್ನು ಪ್ರಿಯಕರನ ಬಳಿ ಹಂಚಿಕೊಂಡಿದ್ದಾಳೆ, ಆದರೆ ಆತ ಮಾತ್ರ ಆಕೆಯ ಭಾವನೆಗಳಿಗೆ ಬೆಲೆ ಕೊಡದೆ ಊರಿಂದ ಪರಾರಿಯಾಗಿದ್ದಾನೆ.

23 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿಯುತ್ತಿದ್ದಂತೆ ಆಕೆಯ ಪ್ರಿಯಕರ ಆಂಧ್ರಪ್ರದೇಶಕ್ಕೆ ಓಡಿ ಹೋಗಿದ್ದಾನೆ. ಆತನ ಮನೆಗೆ ಹೋಗಿ ವಿಚಾರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.

Lover escapes when came to know she is pregnant

ಹಾಗಾಗಿ ಪ್ರಿಯಕರನ ಮೇಲೆ ಅತ್ಯಾಚಾರ ಆರೋಪ ಮಾಡಲಾಗಿದೆ. ಶಾಫಿ ಸಾಮಾಜಿಕ ಜಾಲತಾಣ ಮೂಲಕ ಮಹಿಳೆಯನ್ನು ಪರಿಚಯ ಮಾಡಿಕೊಮಡಿದ್ದ, ಮಹಿಳೆಯು ತುಮಕೂರಿನಲ್ಲಿ ತನ್ನ ಪೋಷಕರೊಂದಿಗೆ ವಾಸವಿದ್ದಳು.

2018ರ ಡಿಸೆಂಬರ್‌ನಲ್ಲಿ ಆಕೆ ಶಫಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದಳು. ಬಳಿಕ ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಮನೆಯಲ್ಲಿ ಪೋಷಕರೊಂದಿಗೆ ಜಗಳವಾಡಿಕೊಂಡು ಶಫಿ ನಡೆಸುತ್ತಿದ್ದ ಪಿಜಿಯಲ್ಲಿ ಬಂದು ವಾಸವಿದ್ದಳು.

ಪಿಜಿಯಲ್ಲಿ ಎರಡು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ಆತನ ಜೊತೆಗೆ ಸುಮಾರು 10 ದಿನಗಳ ಕಾಲ ಇದ್ದಿದ್ದಾಗಿ ತಿಳಿಸಿದ್ದಾಳೆ. ಪೋಷಕರು ಆಕೆಯನ್ನು ಮನೆಗೆ ಬರುವಂತೆ ಹೇಳಿದ್ದು, ಅವರ ಜೊತೆಯಲ್ಲೇ ಆಕೆ ವಾಪಸಾಗಿದ್ದಾಳೆ.

ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆಕೆ ಗರ್ಭಿಣಿಯಾದ ವಿಚಾರ ತಿಳಿಯುತ್ತಿದ್ದಂತೆ ನಿರ್ಲಕ್ಷ್ಯಿಸುತ್ತಿದ್ದ. ಆಕೆಯ ಕರೆಯನ್ನು ರಿಸೀವ್ ಮಾಡುತ್ತಿರಲಿಲ್ಲ ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ಅವರ ಮನೆಯಲ್ಲಿ ವಿಚಾರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಮಹಿಳೆ ವಿವರಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+