ರೋಗಿಗಳಿಗೆ 'ಲವ್ ಇನ್ ಆಕ್ಷನ್' ಪ್ರೇಮದ ಕಾಣಿಕೆ

ಬೆಂಗಳೂರು, ಏ.4: ಈಸ್ಟರ್ ಅನ್ನು ದೇವರ ಪುನರುತ್ಥಾನವಾಗಿ ಕ್ರಿಶ್ಚಿಯನ್ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಕುಟುಂಬದವರು ಒಟ್ಟಾಗಿ ಪ್ರಾರ್ಥಿಸುವ ಹಾಗೂ ಊಟ ಮಾಡುವ ದಿನ. ಎಲ್ಲರ ಭರವಸೆಗಳಿಗೂ ದೇವರ ಆಶೀರ್ವಾದವಿದೆ ಎಂದು ನಂಬಲಾಗಿದೆ.

ಈ ಈಸ್ಟರ್ ನಲ್ಲಿ, ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಾ ಗುಂಪಾದ ಲವ್ ಇನ್ ಆಕ್ಷನ್ (ಎಲ್ ಐಎ) ನ ಸದಸ್ಯರು, ಹಾಗೂ ಜಾಸನ್ ಫರ್ಟಡೋ ಅವರ ನಾಯಕತ್ವವು ಆಸ್ಪತ್ರೆಯಲ್ಲಿರುವ ರೋಗಿಗಳು ಹಾಗೂ ದುರ್ಬಲರಿಗೆ ಹೊಸ ಭರವಸೆ ಹಾಗೂ ಸಂತೋಷ ತುಂಬಿದೆ.

ವರ್ಷದುದ್ದಕ್ಕೂ, ಎಲ್‍ಐಎ ಸ್ವಯಂಸೇವಕರು ಅನೇಕ ಆರ್ಟ್ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ಅವುಗಳು ಆಸ್ಪತ್ರೆಯ ಫಿಸಿಯೋಥೆರಪಿ ಘಟಕದ ಎಲ್‍ಐಎ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯ ಇರುತ್ತವೆ. ವಾಲ್ ಹ್ಯಾಂಗಿಂಗ್ ಗಳು, ಪೈಂಟಿಂಗ್ ಗಳು, ಸೂಕ್ಷ್ಮ ಕ್ಯೂರಿಯಸ್ ಹಾಗೂ ಬಟ್ಟೆಯ ಎಂಬ್ರಾಯಿಡರಿ ಪೀಸ್ ಗಳು ಇತ್ಯಾದಿ ಇರುತ್ತವೆ.

Love in action
ವರ್ಷದ ಈ ಸಮಯದಲ್ಲಿ, ಸಹಜವಾಗಿ ಈಸ್ಟರ್ ಆಧಾರಿತ ಅಲಂಕಾರವಿರುತ್ತದೆ. ಪ್ರತಿಯೊಂದು ವಸ್ತುಗಳನ್ನು ಎಚ್ಚರಿಕೆಯಿಂದ ನಿಜವಾದ ಮೊಟ್ಟೆಯ ಹಳದಿ ಲೋಳೆಯನ್ನು ಖಾಲಿ ಮಾಡಿದ ಚಿಪ್ಪಿನಿಂದ ತಯಾರಿಸಲಾಗಿದೆ. ಕಾರ್ಡ್ ಪೇಪರ್ ಸ್ಟಾಂಡ್ ಮೇಲೆ ನಿಲ್ಲಿಸಿ ಪೈಂಟಿಂಗ್ ಮಾಡಿರುವ ಈ ಕಲಾ ತುಣುಕುಗಳು ಅಪೂರ್ವವವಾಗಿದೆ. ಪ್ರತಿಯೊಂದು ತುಣುಕಿನ ಬೆಲೆ ರು.100 ನಿಂದ ಆರಂಭಗೊಳ್ಳುತ್ತವೆ.

ಈ ಉತ್ಪನ್ನಗಳ ಮಾರಾಟದಿಂದ ಸಂಗ್ರಹಿಸಲಾಗುವ ಹಣವು ಬಡ ರೋಗಿಗಳ ನಿಧಿಗೆ ಹೋಗುತ್ತದೆ ಮತ್ತು ಇದನ್ನು ಅಗತ್ಯವಿರುವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲು ಉಪಯೋಗಿಸಲಾಗುತ್ತದೆ.

ಈ ಕಾರ್ಯದ ಮುಂದಾಳತ್ವ ವಹಿಸಿರುವ ಜಾಸನ್ ಫರ್ಟಡೋ ಅವರು ಮಾತನಾಡಿ, "ಯಾವುದನ್ನೇ ಆಗಲಿ ಹಾಳು ಮಾಡುವುದರಲ್ಲಿ ನಮಗೆ ಇಷ್ಟ ಇಲ್ಲ. ಆಸ್ಪತ್ರೆಯಾದ್ಯಂತ ಮತ್ತು ಹೊರಗಡೆ ನಮ್ಮ ಸ್ವಯಂಸೇವಕರು ಸಾಕಷ್ಟು ಸಾಮಗ್ರಿಗಳನ್ನು ಸಂಗ್ರಹಿಸುತ್ತಾರೆ. ಅವುಗಳೊಂದಿಗೇ ಕುಸುರಿ ಕಾರ್ಯ ಮಾಡಲಾಗುತ್ತದೆ. ಈ ಕಲಾ ಕಾರ್ಯವು ಬಡ ಕುಟುಂಬಕ್ಕೆ, ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯಲು ನೆರವಾದರೆ, ನಮ್ಮ ಪ್ರಯತ್ನ ಪೂರ್ಣವಾಗುತ್ತದೆ" ಎಂದು ಹೇಳಿದರು.

ಸೈಂಟ್ ಮಾರ್ಥಾಸ್ ಆಸ್ಪತ್ರೆಯ ನಿರ್ದೇಶಕರಾದ ಜಯಕರ್ ಜೆರೋಮ್ ಮಾತನಾಡಿ, "ಸೈಂಟ್ ಮಾರ್ಥಾಸ್ 128 ವರ್ಷಗಳ ಹಿಂದೆ ಗುಣಮಟ್ಟದ ವೈದ್ಯಕೀಯ ನೆರವನ್ನು ಕೈಗೆಟಕುವ ದರದಲ್ಲಿ ನೀಡಲು ಆರಂಭವಾದ ಒಂದು ಸಂಸ್ಥೆಯಾಗಿದೆ. ನೀಡುವ ಸಮುದಾಯವನ್ನು ಸೃಷ್ಟಿಸುವ ದೂರದ ಹಾದಿಯಲ್ಲಿ ಈ ಸಣ್ಣ ಕಾರ್ಯಗಳು ಹೆಜ್ಜೆಗಳಾಗಿವೆ ಎಂದು ನಾವು ನಂಬಿದ್ದೇವೆ'' ಎಂದರು.

Love in action
ಲವ್ ಇನ್ ಆಕ್ಷನ್ ಬಗ್ಗೆ : ಎಲ್‍ಐಎ ಎಂದೂ ಕರೆಯಲಾಗುವ ಈ ಸ್ವಯಂಸೇವಾ ಗುಂಪು 2008ರಲ್ಲಿ ಆರಂಭಗೊಂಡಿತು ಮತ್ತು ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಹಾಗೂ ತಮ್ಮ ಸಮಯವನ್ನು ಹಂಚಿಕೊಳ್ಳಲು ಸಿದ್ಧರಿರುವ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಪಡೆಯಿತು.

ಇದು ಸಮಾಜದಲ್ಲಿರುವ ಬಡವರಿಗೆ ಹಾಗೂ ಅಗತ್ಯವಿರುವವರಿಗೆ ಸೇವೆ ಮಾಡುವಲ್ಲಿ ಸಮಯವನ್ನು ಮೀಸಲಿಡುವುದಕ್ಕೊಂದು ಅರ್ಥ ನೀಡಿತು. ಸ್ವಯಂಸೇವೆ ಮಾಡುವವರಿಗೆ ಆಸ್ಪತ್ರೆಯ ಹಾಸ್ಪೈಸ್ ಕೇರ್, ನಲ್ಲಿ ಅವಕಾಶವಿದೆ, ಅದರಲ್ಲಿ ಆಸ್ಪತ್ರೆಯ ಡೆಸ್ಕ್ ಕಾರ್ಯಕ್ಕೆ ನೆರವಾಗಬಹುದು ಮತ್ತು ರೋಗಿಗಳ ಸಂಬಂಧಿ ಸೇವೆಗಳನ್ನು ಮಾಡಬಹುದಾಗಿದೆ; ಅಪ್ ಸೈಕ್ಲಿಂಗ್ ಮತ್ತು ಮರುಬಳಕೆಯಂತಹ ಹಸಿರು ಯೋಜನೆಗಳು, ಜತೆಗೆ ಆರೋಗ್ಯ ಸಬಲೀಕರಣ ಯೋಜನೆಗಳು ರೋಗಿಗಳನ್ನು ಸಬಲಗೊಳಿಸುತ್ತದೆ ಮತ್ತು ಅರಿವು ಮೂಡಿಸುತ್ತದೆ.

ಪ್ರಾಜೆಕ್ಟ್ ನ ನೇತೃತ್ವವನ್ನು ಸೈಂಟ್ ಮಾರ್ಥಾಸ್ ಫಿಸಿಯೋಥೆರಪಿ ಮತ್ತು ಸ್ಟ್ರೋಕ್ ರಿಹಾಬಿಲಿಟೇಶನ್ ಸೆಂಟರ್ ನ ಜಾಸನ್ ಫರ್ಟಡೋ ಅವರು ವಹಿಸಿದ್ದಾರೆ. ಸ್ವಯಂಸೇವಕರಾಗಲು ನೀವು ಅವರನ್ನು +91 9844083977 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಸೈಂಟ್ ಮಾರ್ಥಾಸ್ ಆಸ್ಪತ್ರೆ ಬಗ್ಗೆ : ಸೈಂಟ್ ಮಾರ್ಥಾಸ್ ಆಸ್ಪತ್ರೆಯು ಗುಡ್ ಶೆಫರ್ಡ್ ಆರ್ಡರ್ ಸಿಸ್ಟರ್‍ಗಳಿಂದ 1886ರಲ್ಲಿ ನೃಪತುಂಗ ರಸ್ತೆಯಲ್ಲಿ ಸಂಸ್ಥಾಪನೆಗೊಂಡಿತು. ಕೇವಲ 50 ಹಾಸಿಗೆಗಳೊಂದಿಗೆ ಆರಂಭವಾಗಿದ್ದ ಇದು ಇಂದು 550ಕ್ಕೂ ಹೆಚ್ಚು ಹಾಸಿಗೆಗಳಿರುವ ಒಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಒಬ್ ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ, ಪೀಡಿಯಾಟ್ರಿಕ್ಸ್, ಯುರೋಲಜಿ, ಕಾರ್ಡಿಯಾಲಜಿ, ನ್ಯೂರೋಸರ್ಜರಿ ಮೊದಲಾದ ವಿವಿಧ ವಿಶೇಷ ವಿಭಾಗಗಳ ಆರೋಗ್ಯ ಸೇವೆಯನ್ನು ನೀಡುತ್ತಿದೆ.

ಸೈಂಟ್ ಮಾರ್ಥಾಸ್ ಆಸ್ಪತ್ರೆಯು ಯಾವತ್ತೂ ದುರ್ಬಲ ವರ್ಗದವರಿಗೆ ವೈದ್ಯಕೀಯ ಆರೈಕೆಯನ್ನು ನೀಡಬೇಕೆಂಬ ದೃಷ್ಟಿಕೋನದಿಂದ ವಿಮುಖವಾಗಿಲ್ಲ. ಅಗತ್ಯವಿರುವ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಆಸ್ಪತ್ರೆಯು ನೀಡಿದೆ. ಲವ್ ಇನ್ ಆಕ್ಷನ್ ಎಂಬ ಸ್ವಯಂಸೇವಾ ಕಾರ್ಯಕ್ರಮವನ್ನೂ ನಡೆಸುತ್ತಿದೆ. (ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+