ವೀಕೆಂಡ್‌ನಲ್ಲಿ ಪಾರ್ಟಿ ಮಾಡಲು ಪ್ಲೇಸ್ ಹುಡುಕುತ್ತಿದ್ದೀರಾ? ಇಲ್ಲಿವೇ ಬೆಂಗಳೂರಿನ ಐದು ಮಜಾಮಸ್ತಿ ತಾಣಗಳು
ಸೋಮವಾರದಿಂದ ಶುಕ್ರವಾರದ ವರೆಗೆ ಕೆಲಸದ ಒತ್ತಡ ಬ್ಯೂಸಿ ಶೆಡ್ಯೂಲ್‌ಗಳ ಮಧ್ಯೆ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಸಮಯವನ್ನು ನೀಡಲು ಆಗಿರುವುದಿಲ್ಲ. ಒಂದು ವೇಳೆ ಸಮಯ ಸಿಕ್ಕರೂ ಪಾರ್ಟಿ ಮಾಡುವ ವಾತಾವರಣ ಸರಿಯಾಗಿ ಇರುವುದಿಲ್ಲ. ಇದರಿಂದ ಪಾರ್ಟಿ ಮೂಡ್ ಸಹ ಹಾಳಾಗಿ ಬಿಡುತ್ತದೆ. ವೀಕೆಂಡ್ ಜೋಶ್ ಫುಲ್ ಆಗಿ ಎಂಜಾಯ್ ಮಾಡಬೇಕು ಎಂಬ ಆಸೆ ಕೈ ಕೊಡುತ್ತದೆ.
ಮೊದಲೇ ಪ್ಲ್ಯಾನ್ ಮಾಡಿ ಬೆಂಗಳೂರಿನಲ್ಲೇ ಇರುವ ವೀಕೆಂಡ್ ಮೋಜು ಮಸ್ತಿ ತಾಣಗಳಲ್ಲಿ ರಜೆಯ ಮಜೆಯನ್ನು ಸವಿಯಬಹುದು. ಅಲ್ಲದೆ ಅಲ್ಲಿಯ ಆಂಬಿಯನ್ಸ್ ನಿಜಕ್ಕೂ ನೆರದವರಿಗೆ ಖುಷಿ ನೀಡುತ್ತದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಪಾರ್ಟಿ ಮಾಡಲು ಇರುವ ಬೆಸ್ಟ್ ಐದು ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ.

ದಿ ಬ್ಲಾಕ್ ರ್ಯಾಬಿಟ್
ಬೆಂಗಳೂರಿನ ಟ್ರೈ ಮಾಡಬಹುದಾದ ಬಾರ್‌ಗಳಲ್ಲಿ ಒಂದು ದಿ ಬ್ಲಾಕ್ ರೆಬಿಟ್. ಇಲ್ಲಿ ದಿ ಪೋರ್ನ್ ಸ್ಟಾರ್ ಎಂಬ ಹೆಸರಿನ ಒಂದು ಡ್ರಿಂಕ್ ಸಿಗುತ್ತದೆ. ಈ ಡ್ರಿಂಕ್ಸ್‌ನ್ನು ಕಿವಿ ಹಣ್ಣು, ಗುಲಾಬಿ ಮತ್ತು ವೋಡ್ಕಾದಿಂದ ತಯಾರಿಸಲಾಗುತ್ತದೆ. ಅಲ್ಲದೆ ವಾಟರ್‌ಮೆಲನ್ ಮಾರ್ಟಿನ್, ಚೋಕೋ ಲೊಕೊ, ಇದು ಕಹ್ಲುವಾ, ವೋಡ್ಕಾ ಮತ್ತು ವೆನಿಲ್ಲಾ ಐಸ್‌ಕ್ರೀಮ್ ಅನ್ನು ಸಹ ನೀವು ಇಲ್ಲಿ ಸವಿಯಬಹುದಾಗಿದೆ. ಇದು ಇಂದಿರಾನಗರ 12 ಮೇನ್ 100 ಫೀಟ್ ರೋಡ್‌ನಲ್ಲಿದೆ.

ಟೋಸ್ಟಾ ಹಾಗೂ ಟಾನಿಕ್
ಬೆಂಗಳೂರಿನ ಅತ್ಯಂತ ಜನಪ್ರಿಯ ಪಬ್‌ಗಳಲ್ಲಿ ಟೋಸ್ಟಾ ಹಾಗೂ ಟಾನಿಕ್ ಸಹ ಒಂದು. ಇಲ್ಲಿ ನೀವು ಹೋದರೆ, ಕ್ಯಾಪ್ಸಿಕಂ ಮತ್ತು ರೋಸ್‌ಮರಿಯೊಂದಿಗೆ ಗಾರ್ಡನ್ ಟಾನಿಕ್ ಅನ್ನು ಪ್ರಯತ್ನಿಸಬಹುದಾಗಿದೆ. ಇಲ್ಲಿ ಸಿಗುವ ಪಾನಿಯಗಳು ಖಾದ್ಯಗಳು ಬೆಲೆಗೆ ಪೂರಕವಾಗಿವೆ. ಈ ಪಬ್ ರಿಚಮಂಡ್ ರೋಡ್‌ನಲ್ಲಿರುವ ವುಡ್ ಸ್ಟ್ರೀಟ್‌ನಲ್ಲಿದೆ.

ಶಿರೋ
ನಗರದ ಹೃದಯ ಭಾಗದಲ್ಲಿರುವ ಯುಬಿ ಸಿಟಿ ಮಾಲ್‌ನಲ್ಲೂ ಇಂತಹದ್ದೇ ಒಂದು ಪಬ್ ಇದೆ. ಇದರ ಹೆಸರು ಶಿರೋ. ಇಲ್ಲಿ ನೀವು ದಿ ಸೀಕ್ರೆಟ್ ಗಾರ್ಡನ್, ಆಪಲ್ ಸೋಕ್ಡ್ ಮೊಜಿಟೊ; ಯಮಗುಚಿ ಸನ್‌ಸೆಟ್, ಪೀಚ್ ಮತ್ತು ಸುಟ್ಟ ಕಿತ್ತಳೆ ತುಂಡುಗಳನ್ನು ಹೊಂದಿರುವ ಜಿನ್ ಆಧಾರಿತ ಪಾನೀಯಗಳನ್ನು ಟ್ರೈ ಮಾಡಬಹುದು.

ಫೆನ್ನಿ
ಕೋರಮಂಗಲದ ಏಳನೇ ಬ್ಲಾಕ್‌ನಲ್ಲಿ ಫೆನ್ನಿ ಹೆಸರಿನ ಬಾರ್ ಕಮ್ ರೆಸ್ಟೊರೆಂಟ್ ಇದೆ. ಇಲ್ಲಿ ಭೇಟಿ ನೀಡಿದಲ್ಲಿ ನೀವು ಮಾಲ್ಡಿವ್ ಮ್ಯಾಂಗೋ, ಆಮ್ ಪನ್ನಾ ಮತ್ತು ಬ್ಯಾಂಕಾಕ್ ಪ್ಯಾರಡೈಸ್‌ನೊಂದಿಗೆ ವೋಡ್ಕಾ ಪಾನೀಯ ಸವಿಯಬಹುದು. ಇದು ಸಹ ಮಧ್ಯಮ ವರ್ಗವದವರನ್ನು ಗಮನದಲ್ಲಿಟ್ಟುಕೊಂಡು ಬೆಲೆಯನ್ನು ನಿಗದಿ ಪಡಿಸಲಾಗಿದೆ.

ತ್ರಿ ಡಾಟ್ಸ್ ಆಂಡ್ ಎ ಡ್ಯಾಶ್
ಬೆಂಗಳೂರಿನಲ್ಲಿ ಹೆಚ್ಚು ಆಕರ್ಷಿತ ಪಬ್‌ಗಳಲ್ಲಿ ತ್ರಿ ಡಾಟ್ಸ್ ಆಂಡ್ ಎ ಡ್ಯಾಶ್ ಪಬ್ ಸಹ ಒಂದು. ; ಬಿಳಿ ರಮ್, ಬ್ರಾಂಡಿ, ಆಪಲ್ ಜ್ಯೂಸ್, ರೆಡ್ ಬುಲ್ ಜೊತೆಗೆ ಅವರ ಸಿಗ್ನೇಚರ್ ಡ್ರಿಂಕ್, ತ್ರೀ ಡಾಟ್ಸ್ ಮತ್ತು ಎ ಡ್ಯಾಶ್ ಅನ್ನು ಇಲ್ಲಿ ಟ್ರೈ ಮಾಡಬಹುದು. ಇದು ಇಂದಿರಾನಗರದ 100 ಫೀಟ್ ರಸ್ತೆಯಲ್ಲಿದೆ.
ಕಾಕ್‌ಟೆಲ್ ಎಂದರೆನು?
ಕಾಕ್‌ಟೆಲ್‌ಗಳು ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಒಳಗೊಂಡಿರುತ್ತವೆ. ಸರಳ ಭಾಷೆಯಲ್ಲಿ, ಬಿಯರ್, ವೈನ್ ಮುಂತಾದ ಆಲ್ಕೊಹಾಲಿರುವ ಪಾನೀಯಗಳಿಂದ ತಯಾರಿಸಿದ ಪಾನೀಯಗಳನ್ನು ಕಾಕ್‌ಟೆಲ್ ಎಂದು ಕರೆಯಲಾಗುತ್ತದೆ. ಕಾಕ್‌ಟೆಲ್ ಪಾನೀಯಗಳನ್ನು ತಯಾರಿಸಲು, ಮದ್ಯ, ಬಿಯರ್ ಇತ್ಯಾದಿಗಳನ್ನು ಹಣ್ಣಿನ ರಸ ಅಥವಾ ಸೋಡಾದೊಂದಿಗೆ ಬೆರೆಸಲಾಗುತ್ತದೆ.












Click it and Unblock the Notifications