ಕುತೂಹಲ ಮೂಡಿಸಿದ ಡಿಕೆಶಿ ಎಚ್‌ಡಿ ರೇವಣ್ಣ ಪುತ್ರನ ಗೌಪ್ಯ ಚರ್ಚೆ- ಎಚ್ಡಿಕೆಗೆ ಶುರುವಾಯ್ತಾ ತಲೆನೋವು?

ಬೆಂಗಳೂರು, ಜನವರಿ, 28: ಲೋಕಸಭೆ ಚುನಾವಣೆ ಗೆಲುವಿಗಾಗಿ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಬಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಪಕ್ಷಗಳು ಭಾರೀ ಪೈಪೋಟಿ ನಡೆಸುತ್ತಿವೆ. ಅದರಲ್ಲೂ ಕೆಲವೊಂದು ಕಣಗಳಂತೂ ಟಿಕೆಟ್‌ಗಾಗಿ ಭಾರೀ ರಣರೋಚಕ ಪೈಪೋಟಿ ಏರ್ಪಟ್ಟಿದೆ. ಇನ್ನು ಇದೀಗ ಎಚ್‌.ಡಿ.ರೇವಣ್ಣನವರ ಪುತ್ರ, ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಶನಿವಾರ (ಜನವರಿ 27) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರುವುದು ಭಾರೀ ಕುತೂಹಲ ಹುಟ್ಟುಹಾಕಿದೆ.

ಸದಾಶಿವನಗರದಲ್ಲಿರುವ ಮನೆಗೆ ಬೆಳಗ್ಗೆ ಬಂದ ಸೂರಜ್‌ ಜೊತೆ ಶಿವಕುಮಾರ್ ಗೌಪ್ಯವಾಗಿ ಮಾತುಕತೆ ನಡೆಸಿದರು. ಯಾವ ಉದ್ದೇಶಕ್ಕೆ ಶಿವಕುಮಾರ್‌ ಅವರನ್ನು ಸೂರಜ್‌ ಭೇಟಿ ಮಾಡಿದರು ಎಂಬ ಮಾಹಿತಿ ಇನ್ನು ತಿಳಿಬಂದಿಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್‌ ಈಗಾಗಲೇ ಮೈತ್ರಿ ಮಾಡಿಕೊಂಡಿದೆ.

Lok sabha election: Suspense Discussion Between DCM DK Shivakumar and Suraj Revanna

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜೊತೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಯಲ್ಲಿದ್ದಾರೆ. ಈ ವೇಳೆ ಸೂರಜ್‌ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ಸೇರ್ಪಡೆ ಆಗುವ ಮೂಲಕ ಕಾಂಗ್ರೆಸ್‌ಗೆ ಹೊಡೆತ ಕೊಟ್ಟಿದ್ದರು. ಇದರ ಬೆನ್ನಲ್ಲೇ ಬಿ.ವೈ.ವಿಜಯೇಂದ್ರ ಅವರು ಡಿಕೆಶಿ ಬೆಂಬಲಿಗರನ್ನು ಕೂಡ ಬಿಜೆಪಿಯೆಡೆಗೆ ಕರೆದೊಯ್ಯಲು ರಣತಂತ್ರವನ್ನು ರೂಪಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ ನಿನ್ನೆ ಡಿಕೆ ಶಿವಕುಮಾರ್‌ ಅವರನ್ನು ರೇವಣ್ಣನ ಪುತ್ರ ಭೇಟಿಯಾಗಿರುವುದು ಕುತೂಹಲ ಕೇರಳಿಸಿದ್ದು, ಇದು ಎಲ್ಲೋ ಒಂದಿ ಕಡೆ ಎಚ್‌ಡಿಕೆಗೆ ಹೊಡೆತಾ ಕೊಡಬಹುದಾ ಎನ್ನುವ ಸಂಶಯಗಳು ಮೂಡಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+