ಚುನಾವಣಾ ಸಮೀಕ್ಷೆಗಳು ನಿಜಕ್ಕೂ ನಂಬಿಕಾರ್ಹವೇ?
ನವದೆಹಲಿ, ಮೇ 13: 16ನೇ ಲೋಕಸಭೆ ಮಹಾ ಚುನಾವಣೆ ಸಮರ ಮುಗಿದಿದೆ. ದಾಖಲೆಯ ಪ್ರಮಾಣದಲ್ಲಿ ಮತದಾರರು ಮನೆಯಿಂದ ಹೊರಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತ್ತು ವಿವೇಚನೆ ಬಳಸಿ ಖಡಕ್ಕಾಗಿಯೇ ತಮ್ಮ ತೀರ್ಪು ನೀಡಿದ್ದಾರೆ. ಚುನಾವನಾ ಪೂರ್ವ ಸಮೀಕ್ಷೆಗಳು ಮತ್ತು ಎಕ್ಸಿಟ್ ಪೋಲ್ ಗಳನ್ನು ನೋಡಿದರೆ ಈ ಭಾವನೆ ಮೂಡುತ್ತಿದೆ.
ಆದರೆ ಇಲ್ಲಿ ವಿಷಯ ಅದಲ್ಲ. ಇಲ್ಲಿ ಮೂಲ ಪ್ರಶ್ನೆ ಕಾಡುತ್ತಿದೆ. ಅಸಲಿಗೆ ಈ ಎಕ್ಸಿಟ್ ಪೋಲ್ ಗಳನ್ನು ನಂಬುವುದು ಹೇಗೆ? ಅಷ್ಟೊಂದು ನಿಖರವಾ ಈ ಸಮೀಕ್ಷೆಗಳು? ಸರಿ ಅನ್ನುವುದಾದರೆ ಹಿಂದಿನ ದಾಖಲೆಗಳು ಏನು? ತಪ್ಪು ಅನ್ನುವುದಾದರೆ ಅವು ತಪ್ಪು ಹಾದಿ ಹಿಡಿಯುವುದೇಕೆ? ಇವೇ ಮುಂತಾದ ಪ್ರಶ್ನೆಗಳು ಕಾಡಲಾರಂಭಿಸಿವೆ. (ಕರ್ನಾಟಕ: ರಾಜದೀಪ್ ಸರ್ದೇಸಾಯಿ ಫಲಿತಾಂಶವೇನು?)
ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳುವ ಮುನ್ನ... ಚುನಾವಣೆಗಳು 50ಕ್ಕೂ ಹೆಚ್ಚು ದಿನಗಳ ಕಾಲ ಸುದೀರ್ಘವಾಗಿ ನಡೆದರೂ ನಿಧಾನವೇ ಪ್ರಧಾನ ಎಂಬಂತೆ ಚುನಾವಣೆ ಆಯೋಗವು ಅಚ್ಚುಕಟ್ಟಾಗಿ/ಕರಾರುವಕ್ಕಾಗಿ ಯಾವುದೇ ಹೆಚ್ಚಿನ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ತನ್ನ ಕಾರ್ಯ ಮುಗಿಸಿದೆ. Hats off to Election Commission of India!

ಹೊಸತನವನ್ನು ಬಯಸುತ್ತಿದ್ದ ಭಾರತೀಯರು ಈ ಚುನಾವಣೆಯಲ್ಲಿ ಭ್ರಷ್ಟಾಚಾರ, ಆಡಳಿತ ವಿರೋಧಿ ಅಲೆ, ರಾಹುಲ್ ಗಾಂಧಿ ಅವರಿಗಿಂತ ಹೆಚ್ಚಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಒಪ್ಪಿಗೆ ಸೂಚಿಸುತ್ತಾರಾ, ಇಲ್ಲವಾ? ಎಂಬುದರ ಸುತ್ತ ಗಿರಕಿ ಹೊಡೆಯಿತು ಅನ್ನಬಹುದು. ಹಾಗಾಗಿಯೇ ನಿನ್ನೆ ಸಂಜೆಯಿಂದ ಎಲ್ಲಾ ಮಾಧ್ಯಮಗಳು ಫಲಿತಾಂಶ ಮೋದಿ ಪತರವಾಗಿದೆಯಾ ಅಥವಾ ಅವರನ್ನು ಸಾರಾಸಗಟಾಗಿ ತಿರಸ್ಕರಿಸಿದೆಯಾ? ಎಂಬುದರ ಬಗ್ಗೆ ತನ್ನ ತೀರ್ಪು ನೀಡಿದೆ. ಅರ್ಥಾತ್ ಮತದಾರರ ತೀರ್ಪನ್ನು ಹೇಳಿದೆ.
ಈ ಹಂತದಲ್ಲಿ ನೀವು ಆತುರಕ್ಕೆ ಬಿದ್ದು ಮೋದಿ ಅಲೆಯಲ್ಲಿ ಕೊಚ್ಚಿ ಹೋಗುವ ಮುನ್ನ ಸ್ವಲ್ಪ ವಾಸ್ತವತೆಯತ್ತ ನೋಟ ಹರಿಸುವುದು ಒಳಿತು. ಮತದಾರ ಬಯಸಿದಂತೆ ಮೇ 16ರಂದು ಮೋದಿ ಗೆಲುವು ನಿಜವೇ ಆದರೆ ಯಾರದೇನೂ ಅಭ್ಯಂತರವಿಲ್ಲ. ಆದರೆ...
ಹಿಂದಿನ ವೃತ್ತಾಂತ ಹೀಗಿದೆ: 1999 ಮತ್ತು 2009 ನಡುವೆ ಮೂರು ಚುನಾವಣೆಗಳು ನಡೆದವು. ಅವುಗಳಲ್ಲಿ ಚುನಾವಣೆ ವಿಶ್ಲೇಷಕರು ಬಿಜೆಪಿಗೆ ತುಸು ಹೆಚ್ಚೇ ಸೀಟುಗಳನ್ನು ದಯಪಾಲಿಸಿದ್ದರು. ಆದರೆ ಅಕ್ಚುಯಲ್ ರಿಸಲ್ಟ್ ಬೇರೆಯೇ ಆಗಿತ್ತು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಿತ್ತು. 2009ರಲ್ಲಿಯೂ ಹೀಗೆಯೇ ಆಯಿತು.
ಅದಕ್ಕೂ ಮುನ್ನ 1998ರಲ್ಲಿ ಮಾತ್ರವೇ ತುಸು ನಿಖರ ಫಲಿತಾಂಶ ಬಂದಿತ್ತು. exit polls ಸರಾಸರಿ ಪ್ರಮಾಣದಲ್ಲಿ ಬಿಜೆಪಿಗೆ 240 ಸ್ಥಾನ ಘೋಷಿಸಿದ್ದವು. ಅಂತಿಮವಾಗಿ ಬಿಜೆಪಿಗೆ ಒಲಿದಿದ್ದು 252 ಸ್ಥಾನ. ಇನ್ನು ಕಾಂಗ್ರೆಸ್ಸಿಗೆ ಸರಾಸರಿ 155 ಸ್ಥಾನಗಳನ್ನು ಘೋಷಿಸಿದ್ದವು. ಆ ಪಕ್ಷ ಗಳಿಸಿದ್ದು 166. ಇನ್ನು ಇತರೆ ಪಕ್ಷಗಳು 165 ಸ್ಥಾನಗಳನ್ನು ಗಳಿಸುತ್ತವೆ ಎಂಬ ಲೆಕ್ಕಾಚಾರವಿತ್ತು. ಆದರೆ ಅವುಗಳಿಗೆ ಬಂದಿದ್ದು 119 ಸ್ಥಾನ. (ಸಿವೋಟರ್ ಸಮೀಕ್ಷೆ ಪ್ರಕಾರವೂ ಯುಪಿಎ ಧೂಳಿಪಟ)
1999 ಚುನಾವಣೆಯ exit polls:
ಬಿಜೆಪಿ ಸರಾಸರಿ ಪ್ರಮಾಣ -330, ಗಳಿಸಿದ್ದು 296 ಸ್ಥಾನ
ಕಾಂಗ್ರೆಸ್ ಸರಾಸರಿ ಪ್ರಮಾಣ -140, ಗಳಿಸಿದ್ದು 134 ಸ್ಥಾನ
ಇತರೆ ಪಕ್ಷಗಳು ಸರಾಸರಿ ಪ್ರಮಾಣ -85, ಗಳಿಸಿದ್ದು 113 ಸ್ಥಾನ
2004 ಚುನಾವಣೆಯ exit polls:
ಬಿಜೆಪಿ ಸರಾಸರಿ ಪ್ರಮಾಣ -275, ಗಳಿಸಿದ್ದು 189 ಸ್ಥಾನ
ಕಾಂಗ್ರೆಸ್ ಸರಾಸರಿ ಪ್ರಮಾಣ -190, ಗಳಿಸಿದ್ದು 222 ಸ್ಥಾನ
ಇತರೆ ಪಕ್ಷಗಳು ಸರಾಸರಿ ಪ್ರಮಾಣ -105, ಗಳಿಸಿದ್ದು 132 ಸ್ಥಾನ
2009 ಚುನಾವಣೆಯ exit polls:
ಬಿಜೆಪಿ ಸರಾಸರಿ ಪ್ರಮಾಣ -190, ಗಳಿಸಿದ್ದು 159 ಸ್ಥಾನ
ಕಾಂಗ್ರೆಸ್ ಸರಾಸರಿ ಪ್ರಮಾಣ -200, ಗಳಿಸಿದ್ದು 262 ಸ್ಥಾನ
ಇತರೆ ಪಕ್ಷಗಳು ಸರಾಸರಿ ಪ್ರಮಾಣ -170, ಗಳಿಸಿದ್ದು 79 ಸ್ಥಾನ
exit pollಗಳಿಗೆ ಈ ಬಾರಿ ನಿಜಕ್ಕೂ ಅಗ್ನಿಪರೀಕ್ಷೆ:
ಕೊನೆಗೆ ಎಚ್ಚೆತ್ತ ಆಯೋಗ ಆ exit pollಗಳನ್ನೇ ರದ್ದುಪಡಿಸಿತು. ಒಟ್ಟಾರೆ ಚುನಾವಣೆ ಮುಗಿಯುವವರೆಗೂ ದೇಶದ ಯಾವುದೇ ಮೂಲೆಯಲ್ಲೂ ಎಕ್ಸಿಟ್ ಪೋಲ್ ಫಲಿತಾಂಶ ಬಿತ್ತರಿಸಬಾರದು ಎಂದು ಈ ಬಾರಿ ಕಡಿವಾಣ ಹಾಕಿಬಿಟ್ಟಿತು. ಹಾಗಾಗಿಯೇ ನಿನ್ನೆ ಸಂಜೆ 6.30ರವರೆಗೂ ಎಲ್ಲ ಚಾನೆಲ್ ಗಳೂ ಗಪ್ ಚುಪ್ ಆಗಿದ್ದವು. ಹಾಗಾದರೆ ಈ ಬಾರಿಯ exit pollಗಳು ಹೆಚ್ಚು ವಿಶ್ವಾಸಾರ್ಹವಾ? ಮೇ 16ರಂದು ಅದು ಸಾಬೀತಾಗಬೇಕಿದೆ. (ಟೈಮ್ಸ್ ನೌ ಚುನಾವಣೋತ್ತರ ಸಮೀಕ್ಷೆ ಬಹಿರಂಗ)












Click it and Unblock the Notifications