ಕೆ.ಎಸ್.ಆರ್.ಟಿ.ಸಿ ಸಂಚಾರ: ಹೊಸ ನಿಯಮಗಳು ಇಂತಿವೆ

ಬೆಂಗಳೂರು: ಮೇ 31 ರವರೆಗೂ ಲಾಕ್ ಡೌನ್ 4.0 ಮುಂದುವರೆಯಲಿದ್ದು, ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ, ಹಲವು ಷರತ್ತುಗಳ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಕ್ಕೆ ಚಿಂತನೆ ನಡೆಸಲಾಗಿದೆ.

''ಕರ್ನಾಟಕದಲ್ಲಿ ಸರ್ಕಾರಿ ಸಾರಿಗೆ ಬಸ್ ಗಳ ಸಂಚಾರ ಪುನರ್ ಪ್ರಾರಂಭದ ಬಗ್ಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು'' ಅಂತ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸದ್ಯಕ್ಕೆ ಡಿಪೋಗಳಲ್ಲೇ ಬಸ್ ಗಳು ಉಳಿದುಕೊಂಡಿದ್ದು, ಸರ್ಕಾರದಿಂದ ಆದೇಶ ಬರುವವರೆಗೂ ರಸ್ತೆಗೆ ಬಸ್ ಗಳು ಇಳಿಯುವುದಿಲ್ಲ.

ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ನಿಯಮಗಳು

ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ನಿಯಮಗಳು

* KSRTC ಬಸ್​ನಲ್ಲಿ 20 ರಿಂದ 30 ಪ್ರಯಾಣಿಕರಿಗಷ್ಟೇ ಅವಕಾಶ ಸಾಧ್ಯತೆ.

* ರಾಜಹಂಸ ಬಸ್​ನಲ್ಲಿ 20 ಪ್ರಯಾಣಿಕರಿಗಷ್ಟೇ ಅವಕಾಶ ಸಾಧ್ಯತೆ.

* ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸಲೇಬೇಕು.

* ಡಬಲ್​ ಸೀಟ್ ​ನಲ್ಲಿ ಒಬ್ಬರು, ತ್ರಿಬಲ್ ಸೀಟ್​ನಲ್ಲಿ ಇಬ್ಬರು ಕೂರಲು ಅವಕಾಶ ಸಾಧ್ಯತೆ.

* ಬಸ್​ನಲ್ಲಿ ನಿಂತು ಕೊಂಡು ಪ್ರಯಾಣಿಸಲು ಅವಕಾಶ ಇಲ್ಲ.

* 65 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಮಕ್ಕಳಿಗೆ ಬಸ್ ಪ್ರಯಾಣಕ್ಕೆ ನಿರ್ಬಂಧ

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ನಿಯಮಗಳು

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ನಿಯಮಗಳು

* ಕಂಡಕ್ಟರ್, ಡ್ರೈವರ್, ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿರಲೇಬೇಕು.

* ಮುಖ್ಯ ನಿಲ್ದಾಣಗಳಲ್ಲಷ್ಟೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು.

* ಮಾರ್ಗ ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೇಬಾರದು.

* ಮುಂದಿನ ಸ್ಟಾಪ್​ನಲ್ಲಿ ಎಷ್ಟು ಪ್ರಯಾಣಿಕರು ಇಳಿತಾರೋ ಅಷ್ಟು ಜನರನ್ನೇ ಹತ್ತಿಸಿಕೊಳ್ಳಬೇಕು.

* ಪ್ರಯಾಣಿಕರ ವಿವರ, ವಿಳಾಸ, ಮೊಬೈಲ್ ನಂಬರ್ ಪಡೆಯಬೇಕು.

* ಪ್ರಯಾಣಿಕರು ಅನಾರೋಗ್ಯದಿಂದ ಬಳಲುತ್ತಿದ್ದರೆ, ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತರಬೇಕು.

ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಖಾಲಿ ಖಾಲಿ

ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಖಾಲಿ ಖಾಲಿ

ಬಸ್ ಸಂಚಾರ ಇಲ್ಲದ ಕಾರಣ ಇಂದು ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿ ಕಂಡುಬಂತು.

ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಸ್ ಆರಂಭಕ್ಕೆ ಸಿದ್ಧತೆ

ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಸ್ ಆರಂಭಕ್ಕೆ ಸಿದ್ಧತೆ

ಇವತ್ತು ಸಿಎಂ ಸಭೆ‌ ಬಳಿಕ ಬಸ್ ಕಾರ್ಯಾಚರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಅನುಮತಿ ಸಿಕ್ಕ ಬಳಿಕವಷ್ಟೇ ಬಸ್ ಸಂಚಾರ ಆರಂಭವಾಗಲಿದ್ದು, ಮೆಜೆಸ್ಟಿಕ್ ನಲ್ಲಿ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+