ಪ್ರತಿದಿನ ಶಿಕ್ಷಕಿಗೆ ಹೂವು ತಂದುಕೊಡುವ ಪುಟ್ಟ ಬಾಲಕ: ನೆಟ್ಟಿಗರ ಮನಗೆದ್ದ Viral Video

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಅದೆಷ್ಟೋ ವಿಡಿಯೋಗಳು, ಫೋಟೋಗಳು ನೋಡಲು ಸಿಗುತ್ತಲೇ ಇರುತ್ತವೆ. ಇದರಲ್ಲಿ ಕೇಲವು ಮನರಂಜನೆಗೆ ಮಾತ್ರ ಸೀಮಿತವಾದರೇ, ಇನ್ನು ಕೆಲವು ನಮ್ಮ ಮನಸ್ಸಿಗೆ ಮುದ ನೀಡುವಂತಹ, ಮುಖದಲ್ಲಿ ನಗು ತರಿಸುವಂತಹ ಅದ್ಭುತ ವಿಡಿಯೋಗಳೂ ಇಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ ಅಂತಹದ್ದೇ ಒಂದು ಕ್ಯೂಟ್ ವಿಡಿಯೋ ಇಂಟರ್ನೆಟ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪುಟ್ಟ ಬಾಲಕನೊಬ್ಬ ತನ್ನ ನೆಚ್ಚಿನ ಶಿಕ್ಷಕಿಗೆ ಪ್ರತಿದಿನವೂ ತಪ್ಪದೆ ಹೂವು ತಂದುಕೊಡುವ ವಿಡಿಯೋ ಇದೀಗ ನೆಟ್ಟಿಗರ ಹೃದಯ ಕದ್ದಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ಇನ್‌ಸ್ಟಾಗ್ರಾಮ್ ಬಳಕೆದಾರರಾದ ಲಾಂಗ್ತ್ಸು ಬೆನಿ ಒವುಂಗ್ (Longtsu Beni Ovung) ಎಂಬುವವರು ಈ ಸುಂದರವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶಾಲೆಯ ಕಾರಿಡಾರ್‌ನಲ್ಲಿ ನಡೆಯುವ ಈ ದೃಶ್ಯ ನೋಡುಗರ ಕಣ್ಮನ ಸೆಳೆಯುವಂತಿದೆ. ವಿಡಿಯೋದಲ್ಲಿ, ಶಾಲಾ ಸಮವಸ್ತ್ರ ಧರಿಸಿರುವ, ಕುತ್ತಿಗೆಗೊಂದು ಮುದ್ದಾದ ಬೋ ಟೈ (Bow tie) ಕಟ್ಟಿಕೊಂಡಿರುವ ಹಾಗೂ ಬೆನ್ನಿನ ಮೇಲೆ ತನ್ನ ಗಾತ್ರಕ್ಕಿಂತ ದೊಡ್ಡದಾದ ಸ್ಕೂಲ್ ಬ್ಯಾಗ್ ಹೊತ್ತಿರುವ ಪುಟ್ಟ ಬಾಲಕನೊಬ್ಬ ನಾಚಿಕೆ ಮಿಶ್ರಿತ ಮುಖಭಾವದೊಂದಿಗೆ ಶಿಕ್ಷಕಿಯತ್ತ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು.

Little Boy

ವಿಡಿಯೋದ ಮೇಲಿರುವ ಬರಹದಲ್ಲಿ ಆ ಶಿಕ್ಷಕಿ, "ನನ್ನ ಉದ್ಯೋಗದ ವಿವರಣೆಯಲ್ಲಿ ಈ 'ಪುಟ್ಟ ಸಭ್ಯಸ್ಥ'ನಿಂದ (Tiny gentleman) ಪ್ರತಿದಿನ ಬರುವ ಹೂವಿನ ಡೆಲಿವರಿಗಳ ಬಗ್ಗೆ ಉಲ್ಲೇಖಿಸಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳು, ಪುಟ್ಟ ಬಾಲಕನ ಈ ಪ್ರೀತಿಯ ನಡವಳಿಕೆಯು ಈಗ ಆಕೆಯ ದಿನಚರಿಯ ಒಂದು ಸುಂದರ ಭಾಗವಾಗಿದೆ ಎಂಬುದನ್ನು ಸೂಚಿಸುತ್ತದೆ.

ವಿಡಿಯೋದಲ್ಲಿ, ಆ ಪುಟ್ಟ ಮಗು ತನ್ನ ಶಾಲಾ ಬ್ಯಾಗ್‌ನ ಭಾರದಿಂದ ಸ್ವಲ್ಪ ಕಷ್ಟಪಡುತ್ತಿರುವಂತೆ ಕಂಡರೂ, ತನ್ನ ಗುರಿಯತ್ತ ಅಂದರೆ ಶಿಕ್ಷಕಿಗೆ ಹೂವು ಕೊಡುವ ಕಡೆಗೆ ಮಾತ್ರ ಗಮನಹರಿಸಿ ಅತ್ಯಂತ ಎಚ್ಚರಿಕೆಯಿಂದ ಅವರೆಡೆಗೆ ಬರುತ್ತಾನೆ. ಈ ವಿಡಿಯೋ ಕ್ಲಿಪ್ ಚಿಕ್ಕದಾಗಿದ್ದರೂ, ಆ ಬಾಲಕ ಪ್ರತಿದಿನವೂ ಹೂವು ತಂದುಕೊಡುವ ಮೂಲಕ ಸರಳವಾದ ತರಗತಿಯ ವಾತಾವರಣವನ್ನು ಎಷ್ಟು ಅರ್ಥಪೂರ್ಣವಾಗಿ ಬದಲಾಯಿಸಿದ್ದಾನೆ ಎಂಬುದನ್ನು ತೋರಿಸುತ್ತದೆ.

ಬಾಲಕನ ಅಚ್ಚುಕಟ್ಟಾದ ಸಮವಸ್ತ್ರ, ಆತನ ಆತ್ಮವಿಶ್ವಾಸದ ನಡಿಗೆ ಹಾಗೂ ಮುಗ್ಧ ಮನಸ್ಸು ಈ ವಿಡಿಯೋದ ಭಾವನಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಮೆಂಟ್ ವಿಭಾಗವು ಪ್ರಶಂಸೆ ಮತ್ತು ಭಾವುಕ ಮಾತುಗಳಿಂದ ತುಂಬಿಹೋಗಿದ್ದು, ವೀಕ್ಷಕರು ಮಕ್ಕಳ ಮುಗ್ಧತೆ ಮತ್ತು ದಯೆಯನ್ನು ಕೊಂಡಾಡುತ್ತಿದ್ದಾರೆ. ಅನೇಕ ಬಳಕೆದಾರರು ಬಾಲಕನ ಸಂಸ್ಕಾರವನ್ನು ಹೊಗಳಿದ್ದಾರೆ. "ಇಂತಹ ಉತ್ತಮ ಮೌಲ್ಯಗಳೊಂದಿಗೆ ಆತನನ್ನು ಬೆಳೆಸಿದ ಆತನ ತಾಯಿಗೆ ನಿಜಕ್ಕೂ ಕ್ರೆಡಿಟ್ ಸಲ್ಲಬೇಕು. ಆತ ಭವಿಷ್ಯದ ರಾಜ (King in the making)" ಎಂದು ಕಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಆತನ ಮುದ್ದಾದ ಬೋ ಟೈ ನೋಡಿ ಮರುಳಾಗಿದ್ದಾರೆ. ಅದು ಆತನ 'ಪುಟ್ಟ ಸಭ್ಯಸ್ಥ' (Tiny gentleman) ಎಂಬ ಇಮೇಜ್‌ಗೆ ಹೇಳಿಮಾಡಿಸಿದಂತಿದೆ ಎಂದಿದ್ದಾರೆ. ಕೆಲವು ನೆಟ್ಟಿಗರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದು, ಮಕ್ಕಳು ಜನ್ಮತಃ ಎಷ್ಟು ಮುಗ್ಧರು ಹಾಗೂ ದಯಾಮಯಿಗಳು ಎಂಬುದನ್ನು ಸ್ಮರಿಸಿದ್ದಾರೆ. ಒಟ್ಟಿನಲ್ಲಿ ಈ ಪುಟ್ಟ ಬಾಲಕನ ಈ ಗುಣ ಇಡೀ ಇಂಟರ್ನೆಟ್ ಮಂದಿಯ ಮುಖದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+