Liquor Price Hike: ರಾಜ್ಯ ಸರ್ಕಾರಕ್ಕೆ ಮದ್ಯ ಕಂಪನಿಗಳ ಡಿಮ್ಯಾಂಡ್: ಎಷ್ಟಾಗಿದೆ ಬಿಯರ್ ಬೆಲೆ ಹೆಚ್ಚಳ ?!
Liquor Price Hike: ರಾಜ್ಯ ಕಾಂಗ್ರೆಸ್ ಸರ್ಕಾರವು ಮತ್ತೊಮ್ಮೆ ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರವು ಮದ್ಯ ಪ್ರಿಯರಿಗೆ ಪದೇ ಪದೇ ಬೆಲೆ ಏರಿಕೆಯ ಶಾಕ್ ನೀಡುವುದನ್ನು ಮುಂದುವರಿಸಿದೆ. ಮದ್ಯದ ಬೆಲೆಯನ್ನು ಹೆಚ್ಚಳ ಮಾಡಬಾರದು ಎಂದು ಮದ್ಯ ಕಂಪನಿಗಳು ಮನವಿ ಮಾಡಿರುವುದರ ಹೊರತಾಗಿಯೂ ರಾಜ್ಯ ಸರ್ಕಾರವು ಇದೀಗ ಮೂರನೇ ಬಾರಿ ಮದ್ಯದ ಬೆಲೆ ಏರಿಕೆಯನ್ನು ಮಾಡಿದೆ. ಬಿಯರ್ ಬೆಲೆ ಜಾಸ್ತಿ ಏನು ಹೆಚ್ಚಳ ಮಾಡಿಲ್ಲ. ಕೇವಲ 10 ರೂಪಾಯಿ ಹೆಚ್ಚಳವಾಗಿದೆ ಅಷ್ಟೇ ಅಂತ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಹೇಳಿದ್ದಾರೆ. ಆದರೆ, ಬಿಯರ್ ದುಬಾರಿಯಾಗಿದೆ.
ಕರ್ನಾಟಕದಲ್ಲಿ ಬಿಯರ್ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಈ ಬಗ್ಗೆ ಮಾತನಾಡಿರುವ ಸಚಿವ ತಿಮ್ಮಾಪುರ ಅವರು, ನೆರೆಯ ರಾಜ್ಯಗಳಿಗಿಂತ ನಮ್ಮಲ್ಲಿ ಬೆಲೆ ಇನ್ನೂ ಕಡಿಮೆಯೇ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸ್ಲ್ಯಾಬ್‌ಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಇನ್ನೂ ಕಡಿಮೆ ಇದೆ. ನಮ್ಮಲ್ಲಿ ಪ್ರೀಮಿಯಮ್ ಬ್ರ್ಯಾಂಡ್ ಬೆಲೆಯನ್ನು ಏರಿಕೆ ಮಾಡಿಲ್ಲ. ಯಾವುದೇ ಸರ್ಕಾರ ಬಂದರೂ ಸಹ ಮದ್ಯದ ಬೆಲೆ ನಿರಂತರವಾಗಿ ಹೆಚ್ಚಳವಾಗುವುದು ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಕರ್ನಾಟಕದಲ್ಲಿ ಇತ್ತೀಚೆಗೆ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಮದ್ಯ ಕಂಪನಿಗಳು ಬಿಯರ್ ಬೆಲೆಯಲ್ಲಿ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿವೆ. ಒಟ್ಟಾರೆ ರಾಜ್ಯದಲ್ಲಿ ಪ್ರತಿ ಬಾಟಲಿಗೆ 10-45 ರೂಪಾಯಿಯಷ್ಟು ಬೆಲೆ ಏರಿಕೆ ಆಗಿದೆ. ಇನ್ನು ಈ ಬೆಲೆ ಏರಿಕೆಯಿಂದಾಗಿ ಬಿಯರ್ ಮಾರಾಟದಲ್ಲಿ ಭಾರೀ ಎದುರಾಗಿದೆ. ಹೀಗಾಗಿ ಬಿಯರ್ ಬೆಲೆ ಏರಿಕೆಯನ್ನು ಇಳಿಕೆ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಇನ್ನು ಕೇವಲ 18 ತಿಂಗಳ ಅವಧಿಯಲ್ಲಿ ಮೂರರಿಂದ ನಾಲ್ಕು ಬಾರಿ ಮದ್ಯ & ಬಿಯರ್ ಬೆಲೆ ಹೆಚ್ಚಳವಾದಂತೆ ಆಗಿದೆ.
ಕರ್ನಾಟಕ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವುದರಿಂದ ಬ್ರ್ಯಾಂಡ್‌ಗಳನ್ನು ಅವಲಂಬಿಸಿ 650 ಮಿಲಿ ಬಾಟಲಿಗೆ ರೂ. 10-45 ರಷ್ಟು ಬೆಲೆ ಏರಿಕೆಗೆ ಆಗಿದೆ. ಮುಂದುವರಿದು ಇತ್ತೀಚಿನ ದಿನಗಳಲ್ಲಿ ಬಿಯರ್ ಮಾರಾಟ ಭರ್ಜರಿ ಕುಸಿತ ಕಂಡಿದೆ.
ಬಿಯರ್ ಮಾತ್ರವಲ್ಲ ವಿವಿಧ ಮದ್ಯವೂ ದುಬಾರಿ
ಇನ್ನು ಕರ್ನಾಟಕದಲ್ಲಿ ಕೇವಲ ಬಿಯರ್ ಬೆಲೆ ಮಾತ್ರವಲ್ಲ ವಿವಿಧ ಬೆಲೆ ಏರಿಕೆ ಆಗಲಿದೆ ಎಂದು ಹೇಳಲಾಗಿದೆ. ಮೊದಲು ಬಿಯರ್ ಬೆಲೆ ಮಾತ್ರ ಹೆಚ್ಚಳವಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆ ಮಾಡುವುದು ಸಹ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಬ್ರಾಂಡಿ, ವಿಸ್ಕಿ, ರಮ್ ಹಾಗೂ ಜಿನ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆ ಆಗಿದೆ. ಮದ್ಯಗಳ ಬೆಲೆಯು ಪ್ರತಿ ಕ್ವಾಟರ್‌ಗೆ ಬರೋಬ್ಬರಿ 10 ರೂಪಾಯಿಂದ 15 ರೂಪಾಯಿಯ ವರೆಗೆ ಹೆಚ್ಚಳವಾಗಿದೆ. ಇನ್ನು ಬಿಯರ್‌ಗೆ ಸಂಬಂಧಿಸಿದಂತೆ ಎಲ್ಲಾ ವರ್ಗಗಳಲ್ಲಿ ಬರೋಬ್ಬರಿ ಶೇ.10ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications