Liquor: ಮದ್ಯ ಪ್ರಿಯರಿಂದ ಸರ್ಕಾರಕ್ಕೆ ಮತ್ತೆ ಶಾಕ್: ಬೆಲೆ ಇಳಿಕೆ ಮಾಡಲಿದೆಯೇ ಸರ್ಕಾರ ?

Liquor: ಕರ್ನಾಟಕ ಸರ್ಕಾರವು ನಿರಂತರವಾಗಿ ಮದ್ಯ ಬೆಲೆ ಏರಿಕೆ ಮಾಡುತ್ತಿದ್ದು, ಮದ್ಯ ಪ್ರಿಯರು ಸರ್ಕಾರಕ್ಕೇ ಶಾಕ್ ಕೊಡುವುದನ್ನು ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಭಾರೀ ಮೂರು ಬಾರಿ ಮದ್ಯದ ಬೆಲೆ ಹೆಚ್ಚಳವಾಗಿದೆ. ಈ ರೀತಿ ಮದ್ಯದ ಬೆಲೆ ಏರಿಕೆ ಮಾಡಿರುವ ಪರಿಣಾಮ ಇದೀಗ ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ಪೆಟ್ಟು ನೀಡಿದೆ. ಮದ್ಯಗಳ ಬೆಲೆ ಏರಿಕೆ ಮಾಡುವ ಮೂಲಕ ಹೆಚ್ಚು ಆದಾಯ ಗಳಿಸುವ ಪ್ಲ್ಯಾನ್ ಅನ್ನು ಸರ್ಕಾರ ಹಾಕಿಕೊಂಡಿತ್ತು. ಆದರೆ ಸರ್ಕಾರದ ಲೆಕ್ಕಾಚಾರವನ್ನು ಮದ್ಯ ಪ್ರಿಯರು ತಲೆಕೆಳಗಾಗಿಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಮದ್ಯ ಹಾಗೂ ಬಿಯರ್ ಮಾರಾಟ ಪ್ರಮಾಣವು ಭಾರೀ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಅದರ ವಿವರ ಇಲ್ಲಿದೆ.

ಮದ್ಯದ ಬೆಲೆ ಹಾಗೂ ಸಿಗರೇಟ್ ಸೇರಿದಂತೆ ಕೆಲವೊಂದು ವಸ್ತುಗಳ ಬೆಲೆ ಎಷ್ಟು ಹೆಚ್ಚಳವಾದರೂ ಜನ ಖರೀದಿ ಮಾಡುತ್ತಾರೆ ಎನ್ನುವ ಅಭಿಪ್ರಾಯವೊಂದು ಸದಾ ಚಾಲ್ತಿಯಲ್ಲಿದೆ. ಆದರೆ, ಮದ್ಯ ಪ್ರಿಯರು ಈ ಬಾರಿ ಈ ಮಾತನ್ನು ಸುಳ್ಳು ಮಾಡಿದ್ದಾರೆ. ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲದೇ ಬಿಯರ್ ಮಾರಾಟ ಪ್ರಮಾಣವೂ ಭಾರೀ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬಿಯರ್‌ ಮಾರಾಟವು ಬರೋಬ್ಬರಿ ಶೇ.19.75 ರಷ್ಟು ಕುಸಿತ ಕಂಡಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಆದಾಯ ಕಡಿಮೆಯಾಗುವ ಆತಂಕವೂ ಎದುರಾಗಿದೆ.

Liquor Lovers Jolt Government Again Will Prices Finally Drop

ಸಾಮಾನ್ಯವಾಗಿ ಉಳಿದ ಮದ್ಯಗಳಿಗೆ ಹೋಲಿಕೆ ಮಾಡಿದರೆ, ಬಿಯರ್‌ಗೆ ಬೇಡಿಕೆ ಹೆಚ್ಚಾಗಿ ಇರುತ್ತದೆ. ಬಿಯರ್‌ನಿಂದ ಆದಾಯವೂ ಭಾರೀ ದೊಡ್ಡ ಮಟ್ಟದಲ್ಲಿಯೇ ಸರ್ಕಾರಕ್ಕೆ ಬರುತ್ತದೆ. ಆದರೆ, ಮದ್ಯದ ಬೆಲೆ ಏರಿಕೆಯಾದ ಮೇಲೆ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಇಳಿಕೆಯಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಬೇಸಿಗೆ ಸಮಯದಲ್ಲಿ ಬಿಯರ್ ಮಾರಾಟ ಹೆಚ್ಚಾಗಿ ಇರುತ್ತದೆ. ಆದರೆ, ಬಿಯರ್ ಮಾರಾಟ ಈ ಬಾರಿ ಬೇಸಿಗೆ ಸಮಯದಲ್ಲೂ ಕಡಿಮೆಯಾಗಿದೆ. ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಬೇಡಿ ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಆಗಲಿದೆ ಎಂದು ಈಗಾಗಲೇ ಬಿಯರ್ ಮಾರಾಟ ಕಂಪನಿಗಳು ಸರ್ಕಾರವನ್ನು ಎಚ್ಚರಿಸಿದ್ದವು ಇದೀಗ ಅದೇ ಬೆಳವಣಿಗೆ ಆಗಿದೆ ಎಂದು ಹೇಳಲಾಗುತ್ತಿದೆ.

2025ನೇ ಸಾಲಿನ ಏಪ್ರಿಲ್‌ನಿಂದ ಬಿಯರ್ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಜನವರಿ 20ರಿಂದ ಜಾರಿಗೆ ಬರುವಂತೆ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಳ ಮಾಡಲಾಗಿತ್ತು. ಎಲ್ಲಾ ಮಾದರಿಯ ಬಿಯರ್‌ಗಳ ಬೆಲೆಯೂ ಹೆಚ್ಚಳವಾಗಿತ್ತು. ಅಲ್ಲದೇ ಪ್ರತಿ ಬಿಯರ್‌ ಬಾಟಲ್‌ನ ಬೆಲೆಯು ಕನಿಷ್ಠ 10ರಿಂದ 50 ರೂ.ವರೆಗೆ ಹೆಚ್ಚಾಗಿತ್ತು. ಇದಾದ ನಂತರ ಮತ್ತೆ ಮೇ ತಿಂಗಳಿನಲ್ಲೂ ಮದ್ಯದ ಬೆಲೆ ಹೆಚ್ಚಾಗಿತ್ತು. ಇದು ಮದ್ಯ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+