ಸ್ಮಾರ್ಟ್ ಸಿಟಿ ಯೋಜನೆ: ಬೆಂಗಳೂರಿನ ಬೀದಿಗಳಲ್ಲಿ ಶೀಘ್ರ ಎಲ್‌ಇಡಿ ಬೆಳಕು
ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನ ಬೀದಿಗಳಲ್ಲಿ ಇನ್ನು ಎಲ್‌ಇಡಿ ದೀಪಗಳು ಬೆಳಗಲಿವೆ, ಸ್ಮಾರ್ಟ್ ಸಿಟಿ ಯೋಜನೆಯಡಿ 4.7 ಲಕ್ಷ ಸ್ಟ್ರೀಟ್‌ಲೈಟ್‌ಳ ಜಾಗದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ.
ಟೆಂಡರ್ ಪ್ರಕ್ರಿಯೆ ಶೀಘ್ರ ಮುಕ್ತಾಯಗೊಳ್ಳಲಿದ್ದು ಯೋಜನೆ ಆರಂಭವಾಗಲಿದೆ. ಬಿಬಿಎಂಪಿಯು ತಿಂಗಳ ವಿದ್ಯುತ್ ವೆಚ್ಚವಾಗಿ 12 ಕೋಟಿ ಅಥವಾ ವಾರ್ಷಿಕ ವೆಚ್ಚವಾಗಿ 140 ಕೋಟಿಯನ್ನು ಭರಿಸುತ್ತಿದೆ.
ಬೀದಿದೀಪಗಳ ಕುರಿತು ಬಿಬಿಎಂಪಿ ಹಾಗೂ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಈ ಎಲ್‌ಇಡಿ ದೀಪಗಳನ್ನು ಅಳವಡಿಸುವುದರಿಂದ ಪ್ರತಿ ತಿಂಗಳು 3.2 ಕೋಟಿ ರೂಗಳನ್ನು ಉಳಸಬಹುದು ಎಂದು ಅಂದಾಜಿಸಲಾಗಿದೆ.

ಒಂದೊಮ್ಮೆ ಈ ಯೋಜನೆ ಜಾರಿಯಾದಲ್ಲಿ ಬಿಬಿಎಂಪಿಯು ಒಂದೇ ಒಂದು ಪೈಸೆ ಬಂಡವಾಳವನ್ನು ಕೂಡ ನೀಡುವ ಅಗತ್ಯವಿರುವುದಿಲ್ಲ, ಹಾಗೆಯೇ 7 ವರ್ಷಗಳ ಕಾಲ ನಿರ್ವಹಣೆ ಮಾಡುವ ಹೊಣೆಯೂ ಬಿಬಿಎಂಪಿ ಮೇಲಿರುವುದಿಲ್ಲ. ಈಗಾಗಲೇ ಈ ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.












Click it and Unblock the Notifications