ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯಕ್ಕೆ ಬರುವಂತೆ ಅಂಬಿ ನಿವಾಸಕ್ಕೆ ದೌಡಾಯಿಸಿದ ಮುಖಂಡರು

|
Google Oneindia Kannada News

Recommended Video

ನಟ ಮಾಜಿ ಸಚಿವ ಅಂಬರೀಷ್ ಚುನಾವಣೆಯಲ್ಲಿ ಆಸಕ್ತಿ ತೋರದೆ ಇರೋದಕ್ಕೆ ಕಾರಣ ಏನು? | Oneindia Kannada

ಬೆಂಗಳೂರು, ಏಪ್ರಿಲ್ 18 : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುವವರು ಯಾರೆಂದು ನಿಗದಿಯಾಗಿದೆ. ಜಿಲ್ಲೆಯ ಕಾರ್ಯಕರ್ತರು ಕೂಡ ತಮ್ಮ ನಾಯಕನಿಗಾಗಿ ಕಾದು ಕುಳಿತಿದ್ದಾರೆ. ಆದರೆ, ಅಂಬರೀಷ್ ಮಾತ್ರ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧೆ ಕುರಿತಂತೆ ಶಾಸಕ ಅಂಬರೀಶ್ ಮುಖಂಡರ ಜೊತೆ ಬೆಂಗಳೂರಿನ ನಿವಾಸದಲ್ಲಿ ಚರ್ಚೆ ನಡೆಸಿದರು. ಕ್ಷೇತ್ರಕ್ಕೆ ಬರುವಂತೆ ಅಂಬರೀಶ್ ಗೆ ಮಂಡ್ಯದ ಮುಖಂಡರು ಆಹ್ವಾನ ನೀಡಿದರು.

ಈಗ ಚುನಾವಣೆ ಘೋಷಣೆ ಆಗಿದೆ‌ ಕಾಂಗ್ರೆಸ್ ನಿಂದ ‌ನಿಮಗೆ ಟಿಕೆಟ್ ಫೈನಲ್ ಆಗಿದೆ, ಪಕ್ಷದ ಅಧ್ಯಕ್ಷರು ಬಿ ಫಾರಂ ಕೂಡ ವಿತರಣೆ ಮಾಡುತ್ತಿದ್ದಾರೆ. ನಾವು ಕೂಡ ಕ್ಷೇತ್ರದಲ್ಲಿ ‌ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ‌ಮಾಡಿಕೊಂಡಿದ್ದೇವೆ. ನೀವು ಕ್ಷೇತ್ರಕ್ಕೆ ಬನ್ನಿ, ಕಾರ್ಯಕರ್ತರ ಮುಖಂಡರ ಜೊತೆ ಸಭೆ ಮಾಡಿ.. ಈಗಾಗಲೇ ನಮ್ಮ ಕಾರ್ಯಕರ್ತರು ನಿಮಗಾಗಿ ಕಾಯುತ್ತಿದ್ದಾರೆ ಎಂದು ಅಂಬರೀಶ್ ಅವರನ್ನು ಒತ್ತಾಯಿಸಿದರು.

ಮಂಡ್ಯ ಟಿಕೆಟ್ ಬಗ್ಗೆ ಸ್ವತಃ ಅಂಬರೀಶ್ ಹೀಗಂದಿದ್ದಾರೆಮಂಡ್ಯ ಟಿಕೆಟ್ ಬಗ್ಗೆ ಸ್ವತಃ ಅಂಬರೀಶ್ ಹೀಗಂದಿದ್ದಾರೆ

ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಾಲ ಮುಖಂಡರ ಜೊತೆಗೆ ಎಚ್. ಅಂಬರೀಶ್ ಚರ್ಚೆ ನಡೆಸಿದರು. ನಾಮಪತ್ರ ಸಲ್ಲಿಸುವ ಸಮಯ ತಿಳಿಸಿ ಎಂಬ ಮುಖಂಡರ ಮನವಿಗೆ ಆಯ್ತು ಮೊದಲು ಬಿ ಫಾರಂ ಬರಲಿ ಆಮೇಲೆ ನೋಡೋಣ ಎಂದು ಅಂಬರೀಶ್ ಉತ್ತರ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ಅಂಬರೀಶ್ ನಕಾರ: ಕೈ ಸನ್ನೆ ಮೂಲಕ ಪಕ್ಕಕ್ಕೆ ಹೋಗುವಂತೆ ಹೇಳಿ ಕಾರಿನಲ್ಲಿ ಅಂಬರೀಶ್ ತೆರಳಿದರು. ನಂತರ ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡರಾದ ಪಲ್ಲವಿ ಮಾತನಾಡಿ, ಕ್ಷೇತ್ರಕ್ಕೆ ಬರುವಂತೆ ಅಂಬರೀಶ್ ಅವರಿಗೆ ಆಹ್ವಾನ ನೀಡಿದ್ದೇವೆ.

ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ

ಅವರು ಕೂಡ ಬಂದು ಕ್ಷೇತ್ರದಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದಾರೆ ಅವರಿಗೆ ಯಾರ ಮೇಲೂ ಅಸಮಾಧಾನ ಇಲ್ಲ. ಅವರೇ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಬಿ ಫಾರಂನ್ನು ಕೂಡ ಅವರೆ ಪಡೆದು ಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಂಡ್ಯದ ಟಿಕೆಟ್ ಬಗ್ಗೆ ಅಂಬರೀಶ್ ಮಾತುಗಳು

ಮಂಡ್ಯದ ಟಿಕೆಟ್ ಬಗ್ಗೆ ಅಂಬರೀಶ್ ಮಾತುಗಳು

ಮಂಡ್ಯ ರಾಜಕೀಯ ಸದಾ ಕುತೂಹಲಕಾರಿಯಾದ್ದು, ಅದರಲ್ಲೂ ಈ ಬಾರಿ ಅಂಬರೀಶ್ ನಡೆಯಂತೂ ಮಂಡ್ಯ ರಾಜಕೀಯದತ್ತ ಎಲ್ಲರು ಚಿತ್ತ ಹರಿಸುವಂತೆ ಮಾಡಿದೆ.ಅಂಬರೀಶ್ ಅವರು ಕಾಂಗ್ರೆಸ್‌ ಟಿಕೆಟ್ ಗಾಗಿ ಅರ್ಜಿಯೇ ಹಾಕದೆ, ಪ್ರಚಾರಕ್ಕೂ ಇಳಿಯದೇ ಚಲನಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇಂತಿಪ್ಪ ಅಂಬರೀಶ್ ಅವರನ್ನು ಸುದ್ದಿಗಾರರು ಭೇಟಿ ಮಾಡಿದಾಗ ತಮ್ಮ ಚುನಾವಣಾ ಸ್ಪರ್ಧೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಅಂಬಿ. ಕಾಂಗ್ರೆಸ್‌ನಲ್ಲಿ ಬಿ ಫಾರಂ ಅನ್ನು ಅಭ್ಯರ್ಥಿಗೆ ಕೊಟ್ಟರೆ ಅದು ಕನ್‌ಫರ್ಮ್ ಆದಂತಲ್ಲ, ಅಭ್ಯರ್ಥಿ ಅದನ್ನು ಚುನಾವಣಾ ಅಧಿಕಾರಿಗೆ ಕೊಟ್ಟು ನಾಮಪತ್ರ ಸಲ್ಲಿಕೆಯಾದಾಗಲಷ್ಟೆ ಕನ್‌ಫರ್ಮ್‌ ಆಗುವುದು' ಎಂದಿದ್ದಾರೆ. ಆ ಮೂಲಕ ತಮಗೆ ಇನ್ನೂ ಟಿಕೆಟ್ ಕನ್‌ಫರ್ಮ್‌ ಆಗಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಅಂಬರೀಶ್.

ಅಂಬರೀಶ್ ಅವರ ಬೇಡಿಕೆ ಏನು?

ಅಂಬರೀಶ್ ಅವರ ಬೇಡಿಕೆ ಏನು?

ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ನಡೆ ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಹುಟ್ಟು ಹಾಕಿದೆ. ಅಂಬರೀಶ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಸಹ ಪ್ರಯತ್ನ ನಡೆಸಿತ್ತು.. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಅಂಬರೀಶ್ ಇನ್ನೂ ಮೌನ ಮುರಿದಿಲ್ಲ.
ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗದೇ ಇದ್ದ ಅಂಬರೀಶ್ ಅವರಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆ ಮಾಡಿದ್ದರು. ಚುನಾವಣೆಗೆ ಸ್ಪರ್ಧಿಸುವ ಕುರಿತು ಇದುವರೆಗೂ ಗೊಂದಲದಿಂದ ಹೊರಗಡೆ ಬಂದಿಲ್ಲ.

ಮಂಡ್ಯದ 4 ವಿಧಾನಸಭಾ ಕ್ಷೇತ್ರಗಳಿಗೆ ನಾನು ಹೇಳಿದಂತೆ ಟಿಕೆಟ್ ಹಂಚಿಕೆಯಾಗಬೇಕು. ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಕೆ.ಆರ್.ಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ಜವಾಬ್ದಾರಿಯನ್ನು ನೀಡಬೇಕು ಎಂದು ಅಂಬರೀಶ್ ಬೇಡಿಕೆ ಇಟ್ಟಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಪುಟ್ಟೇಗೌಡ, ಮದ್ದೂರಿನಲ್ಲಿಕಲ್ಪನಾ ಸಿದ್ದರಾಜು, ಕೆ.ಆರ್.ಪೇಟೆಯಲ್ಲಿ ಕಿಕ್ಕೇರಿ ಸುರೇಶ, ಮೇಲುಕೋಟೆಯಲ್ಲಿ ಎಲ್.ಡಿ.ರವಿಗೆ ಟಿಕೆಟ್ ನೀಡಬೇಕು ಎಂಬದು ಅಂಬರೀಶ್ ಬೇಡಿಕೆ ಇಟ್ಟಿದ್ದರು.

ಕಾಂಗ್ರೆಸ್ ಮುಖಂಡರಿಂದ ಮಂಡ್ಯಕ್ಕೆ ಬರುವಂತೆ ಒತ್ತಾಯ

ಕಾಂಗ್ರೆಸ್ ಮುಖಂಡರಿಂದ ಮಂಡ್ಯಕ್ಕೆ ಬರುವಂತೆ ಒತ್ತಾಯ

ಚುನಾವಣೆಯಲ್ಲಿ ಸ್ಪರ್ಧೆ ಕುರಿತಂತೆ ಶಾಸಕ ಅಂಬರೀಶ್ ಮುಖಂಡರ ಜೊತೆ ಬೆಂಗಳೂರಿನ ನಿವಾಸದಲ್ಲಿ ಚರ್ಚೆ ನಡೆಸಿದರು. ಕ್ಷೇತ್ರಕ್ಕೆ ಬರುವಂತೆ ಅಂಬರೀಶ್ ಗೆ ಮಂಡ್ಯದ ಮುಖಂಡರು ಆಹ್ವಾನ ನೀಡಿದರು.

ಈಗ ಚುನಾವಣೆ ಘೋಷಣೆ ಆಗಿದೆ‌ ಕಾಂಗ್ರೆಸ್ ನಿಂದ ‌ನಿಮಗೆ ಟಕೇಟ್ ಫೈನಲ್ ಆಗಿದೆ, ಪಕ್ಷದ ಅಧ್ಯಕ್ಷರು ಬಿ ಫಾರಂ ಕೂಡ ವಿತರಣೆ ಮಾಡುತ್ತಿದ್ದಾರೆ. ನಾವು ಕೂಡ ಕ್ಷೇತ್ರದಲ್ಲಿ ‌ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ‌ಮಾಡಿಕೊಂಡಿದ್ದೇವೆ. ನೀವು ಕ್ಷೇತ್ರಕ್ಕೆ ಬನ್ನಿ, ಕಾರ್ಯಕರ್ತರ ಮುಖಂಡರ ಜೊತೆ ಸಭೆ ಮಾಡಿ.. ಈಗಾಗಲೇ ನಮ್ಮ ಕಾರ್ಯಕರ್ತರು ನಿಮಗಾಗಿ ಕಾಯುತ್ತಿದ್ದಾರೆ ಎಂದು ಅಂಬರೀಶ್ ಅವರನ್ನು ಒತ್ತಾಯಿಸಿದರು.

ವೇಣುಗೋಪಾಲ್ ಅಂಬರೀಶ್ ಜೊತೆ ಮಾತುಕತೆ

ವೇಣುಗೋಪಾಲ್ ಅಂಬರೀಶ್ ಜೊತೆ ಮಾತುಕತೆ

ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಬಗ್ಗೆ ಕರ್ನಾಟಕ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಅಂಬರೀಶ್ ಅವರು 2018ರ ಚುನಾವಣೆಗೆ ಸ್ಪರ್ಧಿಸುವ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಆದ್ದರಿಂದ, ರಾಜ್ಯ ನಾಯಕರು ಹೈ ಕಮಾಂಡ್ ಮೊರೆ ಹೋಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದ್ದರು. ಅಂಬರೀಶ್ ಅವರು ಯಾರ ಸಂಪರ್ಕಕ್ಕೂ ಸಿಗದೆ ಅವರ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಇದೀಗ ಕಾಂಗ್ರೆಸ್ ಮುಖಂಡರು ಮಂಡ್ಯದಿಂದ ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸುತ್ತಿದ್ದಾರೆ.

English summary
Hundreds of Congress party leaders have visited Rebel star Ambareesh's residence at Golf course on Wednesday and urged him to come to Mandya to contest in the assembly poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X