Nelamangala Toll: ನೆಲಮಂಗಲ ಟೋಲ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತ ವಾಹನಗಳು; ಲಾಯರ್ ಜಗದೀಶ್ ಹೇಳಿದ್ದೇನು?
Nelamangala Toll: ಟೋಲ್ ವಿಚಾರ ಆಗಾಗ ಮುನ್ನಲೆಗೆ ಬರುತ್ತಿರುತ್ತದೆ. ನಿಯಮದ ಪ್ರಕಾರ ಯಾವುದೇ ಟೋಲ್‌ಗಳಲ್ಲಿ ಪಾಸ್ಟ್ಯಾಗ್ ಸ್ಕ್ಯಾನ್ ಆಗಿಲ್ಲ ಅಂದ್ರೆ ವಾಹನ ಸವಾರರಿಗೆ ಉಚಿತವಾಗಿ ಯಾವುದೇ ಶುಲ್ಕವಿಲ್ಲದೆ ಬಿಡಬೇಕಾಗುತ್ತದೆ. ಅಲ್ಲದೆ ಅಲ್ಲಿನ ಸಿಬ್ಬಂದಿ ಹೆಚ್ಚು ಕಾಲ ಟೋಲ್ ಬಳಿ ವಾಹನಗಳನ್ನು ಕಾಯ್ದಿರಿಸುವಂತಿಲ್ಲ. ಆದರೆ ಇದೀಗ ನೆಲಮಂಗಲ ಟೋಲ್‌ನಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ವಾಹನಗಳು ಕಿಲೋ ಮೀಟರ್‌ಗಟ್ಟಲೇ ನಿಂತ ಘಟನೆ ನಡೆದಿದೆ.
ನೆಲಮಂಗಲ ಟೋಲ್‌ಗೇಟ್‌ನಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ನಿಂತ ಘಟನೆ ನಡೆದಿದ್ದು, ಇದನ್ನು ಬಿಗ್ ಬಾಸ್ ಲಾಯರ್ ಜಗದೀಶ್ ವಿಡಿಯೋ ಮೂಲಕ ತೋರಿಸಿ ಅಲ್ಲಿ ಸಿಬ್ಬಂದಿ ವಿರುದ್ಧ ಕೆಂಡಕಾರಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ನಿಯಮದ ಪ್ರಕಾರ ಟೋಲ್‌ಗೇಟ್‌ಗಳಲ್ಲಿ ವಾಹನ ಸವಾರರನ್ನು ಹೆಚ್ಚು ಕಾಲ ಕಾಯಿಸುವಂತಿಲ್ಲ. ಆದರೆ ನೆಲಮಂಗಲ ಟೋಲ್ ಬಳಿ 10 ನಿಮಿಷ ಆದರೂ ವಾಹನಗಳನ್ನು ಬಿಟ್ಟಿಲ್ಲ. ಕಿಲೋ ಮೀಟರ್‌ಗ ನಿಯಮ ಬರೀ ಪುಸ್ತಕದಲ್ಲಿ ಮಾತ್ರನಾ? ಎಂದು ಲಾಯರ್ ಜಗದೀಶ್ ಅವರು ಪ್ರಶ್ನೆ ಮಾಡಿದ್ದಾರೆ.
ಕೆಲವು ವೇಳೆ ಯಾವುದಾರೂ ಪ್ರಮುಖ ಕಾರ್ಯಕ್ರಮದ ವೇಳೆ ಟೋಲ್‌ಗೇಟ್‌ಗಳಲ್ಲಿ ಟ್ರಾಫಿಕ್ ಜಾಂ ಆಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಕೆಲ ವಾಹನ ಸವಾರರು ಎಷ್ಟೇ ತಡವಾದರೂ ಹೆಚ್ಚು ಹಣ ಕಟ್ಟಿ ತೆರಳಿಬಿಡುತ್ತಾರೆ. ಆದರೆ ಈ ಬಗ್ಗೆ ಕಾನೂನಿನ ಮಾಹಿತಿಯನ್ನು ಬಿಗ್‌ಬಾಸ್ ಲಾಯರ್ ಜಗದೀಶ್ ಅವರು ನೀಡಿದ್ದಾರೆ.
ಟೋಲ್‌ಗೇಟ್‌ನಲ್ಲಿ ತಡವಾದರೆ, ಅಲ್ಲಿ ಟ್ರಾಫಿಕ್ ಅನ್ನು ಬೇಗ ಕ್ಲಿಯರ್ ಮಾಡದಿದ್ದರೆ, ಹಣ ಪಾವತಿಸಬೇಕಿಲ್ಲ. ಬದಲಾಗಿ ಟೋಲ್ ಫ್ರೀಯಾಗಿ ಹೋಗಬಹುದು ಎನ್ನುವುದನ್ನು ವಿಡಿಯೋವೊಂದಲ್ಲಿ ಲಾಯರ್ ಜಗದೀಶ್ ಅವರು ಹೇಳಿದ್ದಾರೆ ಈ ವಿಡಿಯೋ ಇದೀಗ ಭಾರೀ ವೈರಲ್‌ದ ಆಗುತ್ತಿದೆ.
ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಹೈವೇನಲ್ಲಿ ಈ ವಿಡಿಯೋ ಮಾಡಿರುವ ಜಗದೀಶ್ ಅವರು, ಟೋಲ್‌ನ ನಿಯಮದ ಪ್ರಕಾರ, ಟೋಲ್‌ನಲ್ಲಿ ವಾಹನ ಸವಾರರಿಗೆ ಹೆಚ್ಚು ಸಮಯ ಕಾಯಿಸುವಂತಿಲ್ಲ. ಒಂದು ವಳೆ ಕಾಯಿಸಿದ್ರೆ, ಉಚಿತವಾಗಿ ಪ್ರಯಾಣಿಸಬಹುದು ಎನ್ನುತ್ತಲೇ ಅದನ್ನು ಪರೀಕ್ಷೆ ಮಾಡುತ್ತೇನೆ ಎಂದು ಹೇಳಿದ್ದಾರೆ.
10 ನಿಮಿಷಕ್ಕೂ ಹೆಚ್ಚು ಕಾಲ ಇಲ್ಲೇ ನಿಂತರೂ ಟ್ರಾಫಿಕ್ ಕ್ಲಿಯರ್ ಆಗುವ ಯಾವುದೇ ಲಕ್ಷಣವಿಲ್ಲ ಎನ್ನುತ್ತಲೇ ಅಲ್ಲಿಂದ ವಿಡಿಯೋ ಮಾಡಿದ್ದಾರೆ. ಜೊತೆಗೆ ವಾಹನ ಸವಾರರಿಗೆ ಅನುಕೂಲ ಆಗುವ ನಿಯವವನ್ನೂ ಕೂಡ ಹೇಳಿದ್ದಾರೆ. ನಿಯಮದ ಪ್ರಕಾರ, 3 ನಿಮಿಷಕ್ಕಿಂತ ಟೋಲ್ ಗೇಟ್‌ನಲ್ಲಿ ನಿಂತುಕೊಂಡರೆ, ಹಣ ಪಾವತಿ ಮಾಡಬೇಕೆಂದಿಲ್ಲ ಎಂದು ಹೇಳಿದ್ದಾರೆ.
ಬಳಿಕ ಹತ್ತು ನಿಮಿಷ ಆಗಿದೂ ಇನ್ನೂ ಕ್ಲಿಯರ್ ಆಗಿಲ್ಲದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದ ಅವರು, ನಿಯಮ ಪುಸ್ತಕದಲ್ಲಿ ಮಾತ್ರನಾ ಎಂಬುದನ್ನು ಈಗಲೇ ಪರೀಕ್ಷಿಸುವೆ ಎಂದಿದ್ದಾರೆ. ಟೋಲ್‌ಗೇಟ್‌ಗಳು ದಂಧೆ ಆಗಿಬಿಟ್ಟಿದೆ. ಆದರೆ ಕಿಲೋ ಮೀಟರ್‍ಗಟ್ಟಲೆ ವಾಹನಗಳು ನಿಂತಿವೆ. ನಿಮಯದ ಪ್ರಕಾರ 3 ನಿಮಿಷಕ್ಕಿಂತ ಒಳಗಡೆನೇ ಕ್ಲಿಯರ್ ಮಾಡಬೇಕು. ಆದರೆ ಇವರು ಮಾಡುವ ಹಾಗೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾ ಲಾಯರ್ ಜಗದೀಶ್ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಆದರೆ ಅಲ್ಲಿ ಹಣವನ್ನು ಕೇಳಿದ್ದಾರೆ. ಆಗ ಲಾಯರ್ ಜಗದೀಶ್ ಕಾನೂನಿನ ಬಗ್ಗೆ ಮಾತನಾಡಿದ್ದಾರೆ. ಇವರ ಬಳಿ ಮಾತನಾಡಿ ಪ್ರಯೋಜನ ಇಲ್ಲ ಎನ್ನುವಂತೆ ಸಿಬ್ಬಂದಿ, ಲಾಯರ್ ಜಗದೀಶ್ ಅವರನ್ನು ಶುಲ್ಕವಿಲ್ಲದೆ, ಉಚಿತವಾಗಿ ಬಿಟ್ಟಿದ್ದಾರೆ.
ಈಗ ನಾನು ಬೆಳ್ಳೂರು ಕ್ರಾಸ್ ಶ್ರೀ ಶ್ರೀ ನಿರ್ಮಲಾನಂದ ಗುರೂಜಿ ಅವರನ್ನು ನೋಡಲು ಹೋಗುತ್ತಿದ್ದೇನೆ. ಅವರ ಆಶೀರ್ವಾದ ಬೇಕು ಎನ್ನುತ್ತಲೇ ಬಾಲಗಂಗಾಧರ ಮಠದ ಗುಣಗಾನ ಮಾಡಿದ್ದಾರೆ. ಅಲ್ಲದೆ ನಟ ದರ್ಶನ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಚಂದನ್ ಅವರೂ ಇದೇ ಮಠದಲ್ಲಿ ಓದಿರುವುದು ಅಂತಾಲೂ ಹೇಳಿದ್ದಾರೆ.












Click it and Unblock the Notifications