6.5 ಗಂಟೆ, 19 ಆರ್ಡರ್‌: ಬ್ಲಿಂಕಿಟ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ LLB ವಿದ್ಯಾರ್ಥಿಯ ಮೊದಲ ದಿನದ ಸಂಪಾದನೆ ಎಷ್ಟು?

ವಿದ್ಯಾರ್ಥಿ ಜೀವನದಲ್ಲಿ ಪಾಕೆಟ್ ಮನಿ ಅಥವಾ ತಮ್ಮ ಸ್ವಂತ ಖರ್ಚುಗಳನ್ನ ನಿಭಾಯಿಸಲು ಅನೇಕ ಯುವಕರು ಪಾರ್ಟ್ ಟೈಮ್ ಕೆಲಸಗಳ ಮೊರೆ ಹೋಗುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ವಿಗ್ಗಿ, ಜೊಮ್ಯಾಟೊ ಹಾಗೂ ಬ್ಲಿಂಕಿಟ್‌ನಂತಹ ಆ್ಯಪ್‌ ಆಧಾರಿತ ಡೆಲಿವರಿ ಕೆಲಸಗಳು ಯುವಜನತೆಗೆ ಸುಲಭದ ಆದಾಯದ ಮೂಲವಾಗಿದೆ.

ಇದೀಗ ಎಲ್‌ಎಲ್‌ಬಿ ವಿದ್ಯಾರ್ಥಿಯೊಬ್ಬರು ತಮ್ಮ ಬಿಡುವಿನ ವೇಳೆಯಲ್ಲಿ ಬ್ಲಿಂಕಿಟ್ ಡೆಲಿವರಿ ಪಾರ್ಟ್‌ನರ್ ಆಗಿ ಕೆಲಸ ಆರಂಭಿಸಿದ್ದು, ತಾವು ಮೊದಲ ದಿನ ಬ್ಲಿಂಕಿಟ್ ಡೆಲಿವರಿಯಲ್ಲಿ ಗಳಿಸಿದ್ದೇಷ್ಟು? ಎಂಬ ಕುತೂಹಲಕಾರಿ ಮಾಹಿತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿ ಕವಲ್ ದೇಸಾಯಿ ಎಂಬುವವರು ಈ ವಿವರಗಳನ್ನ ಹಂಚಿಕೊಂಡಿದ್ದು, ಸದ್ಯ ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ.

Law Student Earns Rs 608 in 6 5 Hours as Blinkit Delivery Partner See His First Day Experience

ಬ್ಲಿಂಕಿಟ್ ಡೆಲಿವರಿ ಪಾರ್ಟ್‌ನರ್ ಆಗಿ ಮೊದಲ ದಿನದ ಅನುಭವ

ಕವಲ್ ದೇಸಾಯಿ ಅವರು ಪ್ರಸ್ತುತ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ವಿದ್ಯಾಭ್ಯಾಸದ ಜೊತೆಗೆ ದೈನಂದಿನ ಖರ್ಚುಗಳನ್ನ ಸರಿದೂಗಿಸಲು ಅವರು ತಮ್ಮ ಬಿಡುವಿನ ವೇಳೆಯನ್ನ ಬಳಸಿಕೊಂಡು ಪಾರ್ಟ್ ಟೈಮ್ ಆಗಿ ಈ ಡೆಲಿವರಿ ಕೆಲಸವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಅವರು ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಕಾರ, ತಮ್ಮ ಕೆಲಸದ ಮೊದಲ ದಿನ ಸುಮಾರು ಆರುವರೆ ಗಂಟೆಗಳ ಕಾಲ ಡೆಲಿವರಿ ಪಾರ್ಟ್‌ನರ್ ಆಗಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 19 ಆರ್ಡರ್‌ಗಳನ್ನ ಗ್ರಾಹಕರಿಗೆ ಯಶಸ್ವಿಯಾಗಿ ತಲುಪಿಸಿದ್ದಾರೆ. ಇದಕ್ಕಾಗಿ ಅವರು ಗ್ರಾಹಕರ ಮನೆಗೆ ಆರ್ಡರ್ ತಲುಪಿಸಲು ಸುಮಾರು 51 ಕಿಲೋಮೀಟರ್ ಪ್ರಯಾಣಿಸಿದ್ದಾರೆ (ಹಿಂದಿರುಗುವ ಪ್ರಯಾಣದ ದೂರವನ್ನು ಹೊರತುಪಡಿಸಿ).

ಎಲ್‌ಎಲ್‌ಬಿ ವಿದ್ಯಾರ್ಥಿಯ ಒಟ್ಟು ಬ್ಲಿಂಕಿಟ್ ಡೆಲಿವರಿ ಗಳಿಕೆ ಎಷ್ಟು?

ಕವಲ್ ಅವರ ಮೊದಲ ದಿನದ ಗಳಿಕೆಯ ವಿವರಗಳು ಸಾಕಷ್ಟು ಕುತೂಹಲ ಮೂಡಿಸಿದೆ. 19 ಆರ್ಡರ್‌ಗಳನ್ನ ತಲುಪಿಸಿದ ನಂತರ ಅವರ ಗಳಿಕೆ ಮತ್ತು 75 ರೂ.ಗಳ ಇನ್ಸೆಂಟಿವ್ ಸೇರಿ ಒಟ್ಟು 508 ರೂಪಾಯಿ. ಆಗಿತ್ತು. ಇದರ ಜೊತೆಗೆ ನಿಗದಿತ ಟಾರ್ಗೆಟ್ ತಲುಪಿದ್ದಕ್ಕಾಗಿ ಹೆಚ್ಚುವರಿಯಾಗಿ 100 ರೂಪಾಯಿ ಬೋನಸ್ ಕೂಡ ಸಿಕ್ಕಿದೆ. ಹೀಗಾಗಿ ಕವಲ್ ಅವರ ಆರುವರೆ ಗಂಟೆಗಳ ಶ್ರಮಕ್ಕೆ ಒಟ್ಟು 608 ರೂಪಾಯಿ ಆದಾಯ ಸಿಕ್ಕಿದೆ.

ವಿಶೇಷವೆಂದರೆ, ಕವಲ್ ಅವರು ಈ ಡೆಲಿವರಿಗಾಗಿ ಅಥರ್ (Ather) ಎಲೆಕ್ಟ್ರಿಕ್ ಸ್ಕೂಟರ್ ಬಳಸಿದ್ದಾರೆ. ವಾಹನವನ್ನ ಮನೆಯಲ್ಲೇ ಚಾರ್ಜ್ ಮಾಡಿಕೊಂಡಿದ್ದರಿಂದ ಅವರಿಗೆ ಪೆಟ್ರೋಲ್ ಖರ್ಚು ಸಂಪೂರ್ಣವಾಗಿ ಉಳಿದಿದೆ. ಸಂಜೆಯ ವೇಳೆಗೆ ಸ್ಕೂಟರ್ ಬ್ಯಾಟರಿ ಕಡಿಮೆಯಾದ ಕಾರಣ ಹಾಗೂ ತಮ್ಮ ಓದಿನ ಕಡೆ ಗಮನಹರಿಸಬೇಕಿದ್ದ ಕಾರಣ ಅವರು ಅಂದಿನ ಶಿಫ್ಟ್ ಅನ್ನ ಮುಕ್ತಾಯಗೊಳಿಸಿದ್ದಾರೆ.

ಇಷ್ಟಲ್ಲದೇ ಬ್ಲಿಂಕಿಟ್ ಪ್ಲಾಟ್‌ಫಾರ್ಮ್‌ನ ಕಾರ್ಯವೈಖರಿ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಬ್ಲಿಂಕಿಟ್ ನೀಡಿದ ಡೆಲಿವರಿ ಬ್ಯಾಗ್ ಹಾಗೂ ತಮ್ಮ ಆದಾಯದ ಸ್ಕ್ರೀನ್‌ಶಾಟ್ ತೆಗೆದು ಕವಲ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಭಾರತದಲ್ಲಿ ಗಿಗ್ ಆರ್ಥಿಕತೆ ಹಾಗೂ ಪಾರ್ಟ್ ಟೈಮ್ ಉದ್ಯೋಗಗಳ ಕುರಿತು ಆನ್‌ಲೈನ್‌ನಲ್ಲಿ ಹೊಸ ಚರ್ಚೆ ಶುರುವಾಗಿದೆ.

ಎಕ್ಸ್ ಬಳಕೆದಾರರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ, "ವಿದೇಶಗಳಲ್ಲಿ ಇಂತಹ ಕೆಲಸಗಳನ್ನ ಕೇವಲ ಪಾರ್ಟ್ ಟೈಮ್ ಆಗಿ ಮಾಡುತ್ತಾರೆ, ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ಹೆಚ್ಚಿನ ಜನರು ಇದನ್ನೇ ಫುಲ್‌ ಟೈಮ್‌ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು, "ನಾನು ಕೂಡ ಉಬರ್ ಮತ್ತು ಸ್ವಿಗ್ಗಿಯಲ್ಲಿ ಕೆಲಸ ಮಾಡಿದ್ದೆ, ಆದರೆ ಎಲ್‌ಎಲ್‌ಬಿ ಪ್ರವೇಶಾತಿ ಶುಲ್ಕ ಹೊಂದಿಸಲು ಸಾಧ್ಯವಾಗಲಿಲ್ಲ" ಎಂದು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಇನ್ನು ಕೆಲವರು, ದಿನವಿಡೀ ಬೈಕ್ ಓಡಿಸಿ ಸುಸ್ತಾಗುವ ಬದಲು ಕ್ಯಾಟರಿಂಗ್ ಕೆಲಸ ಮಾಡಿದರೆ ಉಚಿತ ಊಟದ ಜೊತೆಗೆ ಉತ್ತಮ ಆದಾಯವೂ ಸಿಗುತ್ತದೆ, ಶ್ರಮವೂ ಕಡಿಮೆ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆಯು ಭಾರತದಲ್ಲಿ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಪಡುತ್ತಿರುವ ಶ್ರಮ ಹಾಗೂ ಡೆಲಿವರಿ ವಲಯದ ನಿಜವಾದ ಚಿತ್ರಣವನ್ನ ಬಿಚ್ಚಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+