Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಕ್ಕೆ ಮುಹೂರ್ತ ಫಿಕ್ಸ್
ಅಂತೂ ಇಂತೂ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಬಗ್ಗೆ ಬಿಎಂಆರ್ ಸಿಎಲ್ ಮಹತ್ವದ ಅಪ್‌ಡೇಟ್ ಕೊಟ್ಟಿದ್ದು 2025ರ ಜನವರಿ ತಿಂಗಳಿನಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದಾಗಿ ಭರವಸೆ ನೀಡಿದೆ. ಆರಂಭದಲ್ಲಿ ಮೂರು ರೈಲುಗಳು ಮಾತ್ರ ಈ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರೀಚ್-5 ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಿವಿಲ್ / ಸಿಸ್ಟಂ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಚಾಲಕ ರಹಿತ ಪ್ರೋಟೋ- ಟೈಪ್ ರೈಲಿನ ಪರೀಕ್ಷೆ ಪ್ರಗತಿಯಲ್ಲಿದೆ ಎಂದು ಹೇಳಿದೆ.

ಈಗಾಗಲೇ ರೈಲ್ವೆ ಮಂಡಳಿಯು ಟ್ರಾಕ್ಷನ್‌ಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ ನೀಡಿದ್ದು, ಸಿಗ್ನಲಿಂಗ್ ಸಿಸ್ಟಂ ಮತ್ತು ರೋಲಿಂಗ್ ಸ್ಟಾಕ್ ಪೂರ್ವಭಾವಿ ಹಂತದಲ್ಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
2024ರ ನವೆಂಬರ್- ಡಿಸೆಂಬರ್ ವೇಳೆಗೆ 3 ರೈಲು ಸೆಟ್‌ಗಳು ಸಂಚಾರಕ್ಕೆ ಸಿದ್ಧವಾಗಲಿವೆ. 2024ರ ಡಿಸೆಂಬರ್ ತಿಂಗಳಿನಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಶಾಸನಬದ್ಧ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಜನವರಿ 2025ರ ವೇಳೆಗೆ ಈ ಮಾರ್ಗದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ. ಆರಂಭದಲ್ಲಿ 30 ನಿಮಿಷಗಳ ಆವರ್ತನದಲ್ಲಿ ರೈಲು ಸೇವೆ ಲಭ್ಯವಿರಲಿದೆ ಎಂದು ಎಂದು ಹೇಳಿದೆ.
ರೀಚ್-5 (ಹಳದಿ ಮಾರ್ಗ) ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಇಂದಿನ ಪ್ರಗತಿಯ ಸ್ಥಿತಿ
— ನಮ್ಮ ಮೆಟ್ರೋ (@OfficialBMRCL) October 5, 2024
Status on Commissioning of Reach-5 Line (Yellow Line)
from R.V. Road to Bommasandra-as on date pic.twitter.com/YEpTTApKXw
ಮಾರ್ಚ್ 2025ರಿಂದ ಪ್ರತಿ ತಿಂಗಳು 2 ರೈಲು ಸೆಟ್‌ಗಳನ್ನು ಟಿಆರ್ ಎಸ್‌ಎಲ್ ಸಂಸ್ಥೆಯಿಂದ ಪಡೆಯಲಾಗುತ್ತದೆ. ಹಂತ ಹಂತವಾಗಿ ರೈಲುಗಳಿಗೆ ಕಾಯುವಿಕೆ ಸಮಯವನ್ನು ಕಡಿಮೆ ಮಾಡಲಾಗುವುದು ಎಂದು ಬಿಎಂಆರ್ ಸಿಎಲ್ ಹೇಳಿದೆ. ಆಗಸ್ಟ್ 2025ರ ವೇಳೆಗೆ ರೀಚ್ 5ರ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲು ಬೇಕಾಗಿರುವ ಎಲ್ಲಾ 15 ರೈಲುಗಳು ಲಭ್ಯವಿರುತ್ತವೆ ಎಂದು ಬಿಎಂಆರ್ ಸಿಎಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಐಟಿ ಉದ್ಯೋಗಿಗಳಿಗೆ ಭಾರಿ ಅನುಕೂಲ
ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ಮುಖ್ಯವಾಗಿ ಐಟಿ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗುವ ನಿರೀಕ್ಷೆ ಇದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಂತಹ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಲಾಗಿದೆ. ಆರಂಭದಲ್ಲಿ ರೈಲುಗಳಿಗೆ ಕಾಯುವ ಸಮಯ ದೀರ್ಘವಾದರೂ ಹಂತ ಹಂತವಾಗಿ ರೈಲುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಕಾಯುವಿಕೆ ಸಮಯ ಕೂಡ ಕಡಿಮೆಯಾಗಲಿದೆ.












Click it and Unblock the Notifications