ಕೋರಮಂಗಲದ 3ನೇ ಬ್ಲಾಕ್ ಬಲು ದುಬಾರಿ ಯಾಕೆ?
ಬೆಂಗಳೂರು, ಡಿಸೆಂಬರ್, 07: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಭೂಮಿಯ ಬೆಲೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೆಲವು ಪ್ರದೇಶಗಳಂತೂ ಇಂಚು ಭೂಮಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಈ ಪಟ್ಟಿಗೆ ಕೋರಮಂಗಲದ 3ನೇ ಬ್ಲಾಕ್ ಸೇರಿದೆ. ಹಾಗಾದರೆ ಇಲ್ಲಿನ ಭೂಮಿಯ ಬೆಲೆ ಹೆಚ್ಚಾಗಲು ಕಾರಣಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನ ಕೋರಮಂಗಲದ 3ನೇ ಬ್ಲಾಕ್ ಅನ್ನು ಬಿಲೆನಿಯರ್ ಸ್ಟ್ರೀಟ್ ಅಂತಲೂ ಕರೆಯಲಾಗುತ್ತದೆ. ಇಲ್ಲಿ ದೇಶದ ಪ್ರಖ್ಯಾತ ಉದ್ಯಮಿಗಳು, ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳೇ ವಾಸವಾಗಿದ್ದಾರೆ. ಇಲ್ಲಿನ ಒಂದೊಂದು ಚದುರ ಅಡಿ ಜಾಗಕ್ಕೂ ವಜ್ರಕ್ಕಿಂತ ಹೆಚ್ಚು ಬೆಲೆಯಿದೆ.

ಕೋರಮಂಗಲ 3ನೇ ಬ್ಲಾಕ್ ಮಾತ್ರ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನ ಆಗಲೀ ವಸತಿ ಸಮುಚ್ಚಯವಾಗಲೀ ಮಾರಾಟಕ್ಕೆ ಜಾಗ ಸಿಗುವುದೇ ಕಷ್ಟ. ಆದ್ದರಿಂದ ಬೆಲೆ ಹೆಚ್ಚಳವಾ ಆಗುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳುವ ಮಾತಾಗಿದೆ. ಇದೇ ಬೆಲೆ ಎಲ್ಲ ಪ್ರದೇಶಗಳಿಗಲ್ಲೂ ಇಲ್ಲ ಎಂದು ಹೇಳುತ್ತಾರೆ.
ಕೋರಮಂಗಲದ 6 ಬ್ಲಾಕ್ಗಳಲ್ಲಿ 3ನೇ ಬ್ಲಾಕ್ ಮಾತ್ರ ದುಬಾರಿ ಆಗಿದ್ದು, ಇಲ್ಲಿ ವಿಸ್ತಾರವಾದ ಅಪಾರ್ಟ್‌ಮೆಂಟ್‌ಗಳು ಮತ್ತು ಸ್ವತಂತ್ರ ಮನಗಳೂ ವಿಸ್ತಾರ ಆಗಿದ್ದು, ಇದು ಕೂಡ ದುಬಾರಿಯಾಗಲು ಕಾರಣವಾಗಿದೆ. ಮಧ್ಯವರ್ತಿಗಳ ಪ್ರಕಾರ ಇಲ್ಲಿ 4,000 ಅಡಿಗಿಂತಲೂ ಕಡಿಮೆ ಇರುವ ಬಂಗಲೆಗಳೇ ಇಲ್ಲವಂತೆ.
ದುಬಾರಿಯಾಗಲು ಕಾರಣಗಳೇನು?
* ಇಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು, ಶಿಕ್ಷಣ ಸಂಸ್ಥೆಗಳು, ಮಾಲ್ ಗಳು ಆಸ್ಪತ್ರೆಗಳು ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ.
* ಅನೇಕ ಐಟಿಬಿಟಿ ಕಂಪನಿಗಳಿಗೆ ಹತ್ತಿರದಲ್ಲಿರುವುದೂ ಭೂಮಿ ದರ ಹೆಚ್ಚಳಕ್ಕೆ ಕಾರಣವಾಗಿದೆ.
* ಬನ್ನೇರುಘಟ್ಟ, ಬೆಳ್ಳಂದೂರು, ಸರ್ಜಾಜಪುರ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸಮೀಪದಲಿವೆ.
* ಅಷ್ಟೇ ಅಲ್ಲದೆ, ಕೋರಮಂಗಲ ಪ್ರಮುಖ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಹಬ್ ಸಹ ಆಗಿದೆ.
ಕೋರಮಂಗಲ ಬೆಂಗಳೂರಿನ ಸ್ಟಾರ್ಟ್ ಅಪ್ ಹಬ್ ಅಂತಲೇ ಹೆಸರುವಾಸಿಯಾಗಿದೆ. ಇಲ್ಲಿ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್, ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮತ್ತು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಪ್ರಮುಖರು ವಾಸ ಮಾಡುತ್ತಿದ್ದಾರೆ.
ಬಿಲೆನಿಯರ್‌ಗಳೇ ಹೆಚ್ಚಾಗಿ ವಾಸ ಮಾಡುತ್ತಿರುವುದರಿಂದ ಐಷಾರಾಮಿ ಬಂಗಲೆಗಳು ಒಂದಕ್ಕಿಂತ ಒಂದು ಕಣ್ಣು ಕುಕ್ಕುವಂತಿವೆ. ಇಲ್ಲಿನ ಮನೆಗಳ ಒಂದಕ್ಕಿಂದ ಒಂದು ಅದ್ಭುತ ವಿನ್ಯಾಸದಲ್ಲಿವೆ. ಹೆರಿಟೇಜ್ ವಿಲ್ಲಾಗಳಿಂದ ಹಿಡಿದು ಜಗತ್ತಿನ ಅದ್ಭುತ ವಿನ್ಯಾಸದ ಮನೆಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಇನ್ನೂ ಇತ್ತೀಚೆಗಷ್ಟೇ ಇದೇ ಪ್ರದೇಶದಲ್ಲಿ ಉದ್ಯಮಿಯೊಬ್ಬರು ದಾಖಲೆ ಮಟ್ಟದಲ್ಲಿ ಹಣ ಸುರಿದು ಭೂಮಿ ಖರೀದಿ ಮಾಡಿ ಗಮನ ಸೆಳೆದಿದ್ದರು. ಆ ಉದ್ಯಮಿ ಬೇರೆ ಯಾರು ಅಲ್ಲ ಖ್ವೆಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್. ಬರೋಬ್ಬರಿ 67.5 ಕೋಟಿ ರೂಪಾಯಿ ಕೊಟ್ಟು 10,000 ಚದರ ಅಡಿಯ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದು, ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು.












Click it and Unblock the Notifications