ಬೆಂಗಳೂರು & 60 ಕಿ.ಮೀ ದೂರದ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ, ರಿಯಲ್ ಎಸ್ಟೇಟ್ ಧಮಾಕ!

ಬೆಂಗಳೂರು ಅಭಿವೃದ್ಧಿ ಆಗುತ್ತಿದ್ದು ರಿಯಲ್ ಎಸ್ಟೇಟ್‌ಗೆ ಬಂಪರ್ ಬಂದಿದೆ. ಇದೀಗ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಕ್ಕೂ ರಿಯಲ್‌ ಎಸ್ಟೇಟ್ ಬಂಪರ್ ಬಂದಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಿದ ಮೇಲೆ ಹಂತ ಹಂತವಾಗಿ ಹಳೆಯ ರಾಮನಗರ ಜಿಲ್ಲೆ - ನೂತನ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದರ ಬೆನ್ನಲ್ಲೇ ಬೆಂಗಳೂರಿನ ಸಮೀಪದಲ್ಲೇ ಇರುವ ಮತ್ತೊಂದು ಜಿಲ್ಲೆಗೂ ಬಂಪರ್ ಬಂದಿದ್ದು. ಈ ಭಾಗದಲ್ಲೂ ಭೂಮಿಗೆ ಬಂಗಾರದ ಬೆಲೆ ಬರ್ತಿದೆ.

ನಗರದಲ್ಲಿ ರಿಯಲ್ ಎಸ್ಟೇಟ್ ಭರ್ಜರಿಯಾಗಿ ಅಭಿವೃದ್ಧಿ ಆಗಿದೆ. ಇದರೊಂದಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಮೂರು ಪಾಲಿಕೆಗಳ ರಚನೆಯು ರಿಯಲ್ ಎಸ್ಟೇಟ್‌ಗೆ ಭರ್ಜರಿ ಲಾಭವನ್ನು ತಂದುಕೊಟ್ಟಿದೆ. ಹೌದು ಬೆಂಗಳೂರಿನ ಮಹಾನಗರ ಪಾಲಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಆಡಳಿತ ಎಂದು ಬದಲಾಯಿಸಿದ್ದು. ಮುಂದಿನ ದಿನಗಳಲ್ಲಿ ಮೂರು ಪಾಲಿಕೆಗಳು ರಚನೆ ಆಗಲಿವೆ. ಇದರೊಂದಿಗೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಹಳ್ಳಿಗಳು ಸಹ ಗ್ರೇಟರ್ ಬೆಂಗಳೂರಿನ ಭಾಗವಾಗಲಿದೆ. ಇದರಿಂದ ರಿಯಲ್ ಎಸ್ಟೇಟ್‌ಗೆ ಬಂಪರ್ ಬರುತ್ತಿದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

Land prices boom in Tumkur amp amp Bengaluru 60 km apart real estate boost

ಇದರೊಂದಿಗೆ ಬೆಂಗಳೂರು ದಕ್ಷಿಣ ಅಂತ ರಾಮನಗರ ಜಿಲ್ಲೆಯ ಹೆಸರು ಸಹ ಬದಲಾದ ಮೇಲೆ ಈ ಭಾಗದಲ್ಲೂ ರಿಯಲ್ ಎಸ್ಟೇಟ್‌ಗೂ ಬಂಪರ್‌ ಬೆಲೆ ಬಂದಿದೆ. ಇದರ ನಡುವೆ ತುಮಕೂರು ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸುವ ಮಹತ್ವದ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ತುಮಕೂರಿನ ಭೂಮಿಗೂ ಬಂಗಾರದ ಬೆಲೆ: ಬೆಂಗಳೂರು ದಕ್ಷಿಣ ಜಿಲ್ಲೆಯ ನಂತರ ಇದೀಗ ಬೆಂಗಳೂರಿನಿಂದ ಕೆಲವೇ ಕಿ. ಮೀ ದೂರದಲ್ಲಿರುವ ತುಮಕೂರಿಗೂ ಬಂಪರ್ ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ತುಮಕೂರು ಬೆಂಗಳೂರಿನಿಂದ ಕೇವಲ 69 ಕಿ.ಮೀ ದೂರದಲ್ಲಿದೆ. ಇದನ್ನೂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಈ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಚರ್ಚೆ ಜೋರಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ತುಮಕೂರಿನ ಶಿರಸಿಯಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಭಾರೀ ಚರ್ಚೆಯಾಗಿತ್ತು. ಆಗಿನಿಂದ ಈ ಭಾಗದಲ್ಲಿ ರಿಯಲ್‌ ಎಸ್ಟೇಟ್‌ಗೆ ಬೂಸ್ಟ್‌ ಸಿಕ್ಕಿದೆ.

ತುಮಕೂರಿಗೆ ಮೆಟ್ರೋ: ಇನ್ನು ಬೆಂಗಳೂರಿನ ಸಾರಿಗೆ ಜೀವನಾಡಿಯಾಗಿರುವ ನಮ್ಮ ಮೆಟ್ರೋವನ್ನು ತುಮಕೂರಿಗೂ ವಿಸ್ತರಣೆ ಮಾಡಬೇಕು ಎನ್ನುವ ಒತ್ತಡವೂ ಹೆಚ್ಚಾಗಿದೆ. ಈ ರೀತಿ ಒಂದೇ ಕಾಲಕ್ಕೆ ತುಮಕೂರಿಗೆ ಡಬಲ್‌ ಧಮಾಕ ಬಂದಿದೆ. ತುಮಕೂರು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಯಾಗಿ ಈ ಭಾಗಕ್ಕೆ ಮೆಟ್ರೋ ಸಂಪರ್ಕವೂ ಸಿಕ್ಕರೆ ಅತ್ಯುತ್ತಮ ಮೂಲಸೌಕರ್ಯ ಸಿಗಲಿದೆ. ಅಲ್ಲದೇ ಐಟಿ ಕಂಪನಿಗಳು ಬೆಂಗಳೂರಿನಂತೆ ತುಮಕೂರಿನಲ್ಲೂ ನೆಲೆಯೂರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಿಯಲ್‌ ಎಸ್ಟೇಟ್‌ ಲೆಕ್ಕಾಚಾರವೂ ಜೋರಾಗಿದ್ದು. ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರ್ತಿದೆ ಅಂತ ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+