ಲಾಲೂಗೆ ಜೈಲು: ಟ್ವಿಟರ್ ಲೋಕದ ತೀರ್ಪೇನು?
ಬೆಂಗಳೂರು, ಅ.3: ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಘೋಷಿಸಿದೆ. 5 ವರ್ಷ ಕಾಲ ಜೈಲು, 25 ಲಕ್ಷ ರು ದಂಡ ವಿಧಿಸಲಾಗಿದೆ.
ಎಂಬಿಬಿಎಸ್ ಸೀಟು ಹಂಚಿಕೆ ಹಗರಣದಿಂದ ಕಾಂಗ್ರೆಸ್ ನಾಯಕ ರಶೀದ್ ಮಸೂದ್ ಸಂಸತ್ ಸ್ಥಾನ ಕಳೆದುಕೊಂಡ ನಂತರ ಬಿಹಾರದ ಸಂಸದ ಲಾಲೂ ಅವರು ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಲಾಲೂ ಅವರು ಅಮಾಯಕರು ಅವರು ಯಾವುದೇ ಅಪರಾಧ ಮಾಡಿಲ್ಲ ಎಂದು ಆರ್ ಜೆಡಿ ಸದಸ್ಯರು ಇಂದೂ ಕೂಡಾ ಘೋಷಿಸುತ್ತಿದ್ದಾರೆ.
ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಲಾಲೂ ಅವರ ವಿರುದ್ಧ ಬಂದಿರುವ ತೀರ್ಪಿಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಿದು ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿ
|
ದಂಡದ ಮೊತ್ತ ಸಾಕೇ?
ಕೋರ್ಟ್ ವಿಧಿಸಿರುವ ದಂಡದ ಮೊತ್ತ ಕೇಳಿ ಲಾಲೂ ಕೂಡಾ ನಕ್ಕನಂತೆ
|
ಆಸ್ತಿ ಮುಟ್ಟುಗೋಲು
ಲಾಲೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ ಅದೇ ಸರಿಯಾದ ಶಿಕ್ಷೆ
|
ಲಾಲೂ ಕ್ರಿಕೆಟ್ ಟೀಂ
ಲಾಲೂ ಐದು ವರ್ಷ ರಾಬ್ಡಿ ಮೇಡಂನಿಂದ ದೂರಾದರೆ ತಮ್ಮ ಮಕ್ಕಳದ್ದೇ ಕ್ರಿಕೆಟ್ ಟೀಂ ಮಾಡೋದು ಹೇಗೆ
|
ಹಗರಣ ಮೊತ್ತ ಎಫ್ ಡಿ
ಹಗರಣ ಮೊತ್ತ ಎಫ್ ಡಿ ಇಟ್ಟರೆ ಎಷ್ಟಾಗತ್ತೆ?
|
ಲಾಲೂ ಡೈಲಾಗ್ಸ್ ಮಿಸ್
ಇಂಗ್ಲೀಷ್ ವಿಂಗ್ಲೀಷ್ ಬಿಹಾರಿ ರೀಮಿಕ್ಸ್ ಮಾಡಿ ಲಾಲೂ ಹೊಡೆಯುತ್ತಿದ್ದ ಭಾಷಣ ಮಿಸ್
ಲಾಲೂ ಎಲ್ಲಿದ್ದರೂ ಹೀರೋ
ಲಾಲೂ ಎಲ್ಲಿದ್ದರೂ ನನ್ನ ಹೀರೋ ಜೈಲಿನಲ್ಲಿದ್ದುಕೊಂಡೆ ಪಕ್ಷ ನಡೆಸಲಿದ್ದಾರೆ: ಪತ್ನಿ ರಾಬ್ಡಿ ದೇವಿ
|
ಲಾಲೂ ಆಲೂ ಸಮೋಸ
ಎಲ್ಲೋ ಆಲೂ ಸಮೋಸ ಅಳುತ್ತಿರುವ ದನಿ ಕೇಳ್ತಾ ಇದೆ
|
ಲಾಲೂ ಬಲಿ
ಇದು ರಾಜಕೀಯ ನಾಟಕ, ಲಾಲೂ ಬಲಿ ಕಾ ಬಕ್ರಾ ಆಗಿದ್ದಾರೆ












Click it and Unblock the Notifications