ಲಾಲ್ ಬಾಗ್ ದುರಂತ: ಬಾಲಕಿ ಸಾವಿನ ನಂತರ ಸುರಕ್ಷಾ ಕ್ರಮ

ಬೆಂಗಳೂರು, ಆಗಸ್ಟ್.21: ಲಾಲ್ ಬಾಗ್ ನ ಪುಷ್ಪ ಪ್ರದರ್ಶನ ನೋಡಲು ತೆರಳಿದ್ದ ಬಾಲಕಿ ವೈಷ್ಣವಿ ಜೇನು ದಾಳಿಗೆ ಸಿಕ್ಕಿ ಮೃತಪಟ್ಟ ನಂತರ ಎಚ್ಚೆತ್ತುಕೊಂಡಿರುವ ತೋಟಗಾರಿಕಾ ಇಲಾಖೆ ಸುರಕ್ಷತಾ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಇಡಲಾಗುತ್ತಿದ್ದು, ಹೆಜ್ಜೇನು ಗೂಡು ತೆರವು ಮಾಡಿ ಎಚ್ಚರಿಕೆ ಫಲಕ ಅಳವಡಿಸಲಾಗುತ್ತಿದೆ. ಎತ್ತರದ ಮರಗಳಲ್ಲಿರುವ ಜೇನು ಗೂಡುಗಳನ್ನು ತೆರವು ಮಾಡುವುದು ಕಷ್ಟ. ಹಾಗಾಗಿ ಈ ಮರಗಳ ಸುತ್ತ ಎಚ್ಚರಿಕೆ ಫಲಕ ಅಳವಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. [ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]

Lalbagh tragedy: Horticulture department takes safety measures

ಹತ್ತಿರದ ಆಸ್ಪತ್ರೆ ದೂರವಾಣಿ ಸಂಖ್ಯೆಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಜತೆಗೆ ವಿಷಕಾರಿ ಜಂತುಗಳು ಕಡಿದಾಗ ತಕ್ಷಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ಬರೆದಿಡಲಾಗುತ್ತಿದೆ. ಒಟ್ಟು 15 ಕಡೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಇಡಲಾಗುವುದು ಎಂದು ತೋಟಗಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪದ್ಮನಾಭನಗರ ಗುರುಪ್ರಸಾದ್ ಹಾಗೂ ಸುಗುಣ ದಂಪತಿ ಪುತ್ರಿ ವೈಷ್ಣವಿ(7) ಆಗಸ್ಟ್ 15 ರಂದು ಜೇನು ಹುಳುಗಳ ದಾಳಿಗೆ ಸಿಕ್ಕಿದ್ದಳು. ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಪ್ರಯೋಜನವಾಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+